ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳ ಹೋರಾಟ ಸಮಿತಿಯು ನಡೆಸುತ್ತಿರುವ ಬಂದ್ ಬೆಂಬಲಿಸಿ ದಲಿತ ಸಂಘಟನೆಯ ಪ್ರಮುಖರು ಆರ್.ಎಸ್.ಎಸ್ ಕಚೇರಿ ‘ಪಂಚವಟಿ’ ಮುಂಭಾಗದ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸಿದರು. ಪೊಲೀಸರು ಅವರನ್ನು ತಡೆದರು.
ಮೆರವಣಿಗೆ ತೆರಳಲು ಪೊಲೀಸರು ಅವಕಾಶ ನೀಡದಿದ್ದಾಗ ಪ್ರತಿಭಟನಾಕಾರರು ರಸ್ತೆಯಲ್ಲೇ ಕುಳಿತು ಘೋಷಣೆ ಕೂಗಿದರು.
ಪಂಚವಟಿ ಮುಂಭಾಗ ಶಾಂತಿಯುತವಾಗಿ ಮೆರವಣಿಗೆ ನಡೆಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಮನವಿಗೆ ಸ್ಪಂದಿಸದ ಪೊಲೀಸರು ಅವರನ್ನು ವಾಪಸ್ ಕಳಿಸಿದರು.
ಶಾಲೆಗಳಿಗೆ ರಜೆ: ನಗರದ ಶಾಲಾ- ಕಾಲೇಜುಗಳು ಬಂದ್ ಹಿನ್ನೆಲೆಯಲ್ಲಿ ರಜೆ ಘೋಷಿಸಿದವು. ಕೆಲವೆಡೆ ಸಂಘಟನೆಗಳ ಪ್ರಮುಖರು ತೆರಳಿ ಬಂದ್ ಮಾಡುವಂತೆ ಮನವಿ ಮಾಡಿದರು. ವಿದ್ಯಾರ್ಥಿಗಳು ಬಂದ ಬಳಿಕ ರಜೆ ಘೋಷಣೆ ಮಾಡಿದ್ದರಿಂದ, ವಿದ್ಯಾರ್ಥಿಗಳು ಮನೆಗೆ ತೆರಳಲು ತೊಂದರೆ ಅನುಭವಿಸಿದರು.














