ದುಬೈ (Dubai): ಪ್ರವಾದಿ ಮೊಹಮ್ಮದ್ ಕುರಿತ ಬಿಜೆಪಿ ನಾಯಕಿ ನೂಪುರ್ ಶರ್ಮಾ ನೀಡಿರುವ ಹೇಳಿಕೆಯನ್ನು ಖಂಡಿಸಿ ಖಂಡಿಸಿರುವ ಮುಸ್ಲಿಮ್ ರಾಷ್ಟ್ರಗಳ ಸಾಲಿಗೆ ಇಂಡೋನೇಷ್ಯಾ, ಸೌದಿ ಅರೇಬಿಯಾ, ಯುಎಇ, ಜೋರ್ಡಾನ್, ಬಹ್ರೈನ್ ಅಫ್ಘಾನಿಸ್ತಾನ ಸೇರ್ಪಡೆಗೊಂಡಿವೆ.
ಎಲ್ಲಾ ಧಾರ್ಮಿಕ ನಂಬಿಕೆಗಳನ್ನೂ ಗೌರವಿಸುವ ಮಹತ್ವವನ್ನು ಇಂಡೋನೇಷ್ಯಾ, ಸೌದಿ ಅರೇಬಿಯಾ, ಯುಎಇ, ಜೋರ್ಡಾನ್, ಬಹ್ರೈನ್ ಅಫ್ಘಾನಿಸ್ತಾನ ಒತ್ತಿ ಹೇಳಿವೆ.
ಹೇಳಿಕೆ ಬಿಡುಗಡೆ ಮಾಡಿರುವ ಸೌದಿ ಅರೇಬಿಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಬಿಜೆಪಿ ವಕ್ತಾರರು ನೀಡಿರುವ ಹೇಳಿಕೆಯನ್ನು ಖಂಡಿಸಿದ್ದು, ಪ್ರವಾದಿ ಮೊಹಮದ್ ಗೆ ಮಾಡಿರುವ ಅವಮಾನ ಎಂದು ಹೇಳಿದೆ.
ಇಸ್ಲಾಮ್ ಧರ್ಮದ ಗುರುತಿನ ವಿರುದ್ಧ ಪೂರ್ವಾಗ್ರಹವನ್ನು ಶಾಶ್ವತವಾಗಿ ತಿರಸ್ಕರಿಸುವುದಾಗಿ ಸೌದಿ ಅರೇಬಿಯಾದ ಸಚಿವಾಲಯ ತಿಳಿಸಿದ್ದು, ಬಿಜೆಪಿ ವಕ್ತಾರೆಯನ್ನು ಅಮಾನತುಗೊಳಿಸಿರುವುದನ್ನು ಸ್ವಾಗತಿಸಿದೆ.
ಇಂಡೋನೇಷ್ಯಾ ಸಹ ಹೇಳಿಕೆಯನ್ನು ಖಂಡಿಸಿದ್ದು, ಇಬ್ಬರು ಭಾರತೀಯ ರಾಜಕಾರಣಿಗಳು ಪ್ರವಾದಿ ಮೊಹಮ್ಮದ್ ಬಗ್ಗೆ ನೀಡಿರುವ ಸ್ವೀಕಾರಾರ್ಹವಲ್ಲ. ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸುತ್ತೇವೆ. ಖಂಡನೆಯ ಸಂದೇಶವನ್ನು ಜಕಾರ್ತದಲ್ಲಿರುವ ಭಾರತೀಯ ರಾಯಭಾರಿಗೆ ತಲುಪಿಸಲಾಗಿದೆ ಎಂದು ಇಂಡೋನೇಷ್ಯಾದ ವಿದೇಶಾಂಗ ಸಚಿವಾಲಯ ಟ್ವೀಟ್ ಮೂಲಕ ತಿಳಿಸಿದೆ.
ಯುಎಇ ಸಹ ಹೇಳಿಕೆಯನ್ನು ಖಂಡಿಸಿರುವ ರಾಷ್ಟ್ರಗಳ ಸಾಲಿಗೆ ಸೇರಿದ್ದು, ಜೋರ್ಡಾನ್, ಓಮನ್ ಗಳೂ ಮುಸ್ಲಿಮ್ ರಾಷ್ಟ್ರಗಳ ಖಂಡನೆಗೆ ಧ್ವನಿಗೂಡಿಸಿವೆ.