ಧಾರವಾಡ : ಅಂಬೇಡ್ಕರ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ದಲಿತಪರ ಸಂಘಟನೆಯಗಳು ಕರೆ ನೀಡಿರುವ ಬಂದ್ ಗೆ ಧಾರವಾಡ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದಲಿತ ಸಂಘಟನೆಯಗಳು ನಡೆಸುವ ಬಂದ್ ಗೆ ಶಿಕ್ಷಣ ಸಂಸ್ಥೆಗಳು ಬೆಳಗ್ಗೆಯಿಂದಲೇ ಮುಚ್ಚಿದ್ದವು. ಆದರೆ ಕೆಲವು ಕರಿಯರ್ ಅಕಾಡೆಮಿ ಕ್ಲಾಸ್ ಗಳನ್ನು ದಲಿತ ಸಂಘಟನೆಗಳು ಬಲವಂತದಿಂದ ಮುಚ್ಚಿಸಿದವು. ಉಳಿದಂತೆ ಶಾಲೆಗಳಿಗೆ ಅಧಿಕೃತ ರಜೆ ಘೋಷಣೆ ಆಗಿದ್ದು, ಮಾರುಕಟ್ಟೆ ಬೆಳಗ್ಗೆ ಆರಂಭಗೊಂಡಿತು.ಬಳಿಕ ಅಂಗಡಿ ಮುಗ್ಗಟ್ಟು ಗಳನ್ನು ಮುಚ್ಚಲಾಯಿತು.
ಸದ್ಯಕ್ಕೆ ಸಾರಿಗೆ ಬಸ್ ಗಳ ಸಂಚಾರಕ ಸ್ಥಗಿತಗೊಂಡಿದ್ದು ಬೈಪಾಸ್ ಮೂಲಕ ಮಾತ್ರ ಅಂತರ್ ಜಿಲ್ಲಾ ಬಸ್ ಗಳ ಸಂಚಾರಕ್ಕೆ ಪೋಲೀಸ್ ರು ಅವಕಾಶ ಮಾಡಿ ಕೊಟ್ಟಿದ್ದಾರೆ.














