‘ಪ್ರತಿ’ ಯೆಂದರೆ ವಿರುದ್ಧ ಈ ಪ್ರಾಣಾಯಾಮದ ವಿಧಾನ ವ್ಯತಿರಿಕ್ತವಾದುದು. ಏಕೆಂದರೆ, ಪೂರಕ ಕ್ರಮವು ಮೂಗಿನ ಹೊಳ್ಳೆಗಳಲ್ಲಿ ಮೊದಲು ಒಂದರ ಮೂಲಕ, ಬಳಿಕ ಇನ್ನೊಂದರ ಮೂಲಕ ಪಡೆಯಬೇಕಾಗಿದೆ ಅಲ್ಲದೆ ರೇಚಕ ಕ್ರಮವು ಉಚ್ಚಾಯೀ ಪ್ರಾಣಾಯಾಮ ದಲ್ಲಿದ್ದಂತೆ ಎರಡು ಹೊಳ್ಳೆಗಳಲ್ಲಿಯೂ ನಡೆಯಬೇಕು.
ಅಭ್ಯಾಸ ಕ್ರಮ
೧ ಹಿಂದಿನಂತೆ ಸುಖಾಸನದಲ್ಲಿ ಅಂದರೆ ಪದ್ಮಾಸನೆ’, ‘ಸಿದ್ಧಾಸನ’ ಇಲ್ಲವೆ ‘ವೀರಾಸನ’ ದಲ್ಲಿ ಕುಳಿತುಕೊಳ್ಳಬೇಕು
೨ ಬಳಿಕ ಬೆನ್ನನ್ನು ಬಾಗಿಸದಂತೆ ನೇರವಾಗಿ ನಿಲ್ಲಿಸಿಡಬೇಕು. ಆಮೇಲೆ ತಲೆಯನ್ನು ಮುಂಡದ ಕಡೆಗೆ ಬಾಗಿಸಿ, ಗದ್ದವನ್ನು ಕತ್ತಿನೆಲುಬುಗಳ ನಡುವಣ ಮತ್ತು ಎದೆಯೆಲುಬಿನ ಮೇಲ್ಗಡೆಯ ಕುಳಿಯಲ್ಲಿ ಒತ್ತಿಡಬೇಕು. ಇದು ‘ಜಾಲಂಧರಬಂಧ’
೩. ಆನಂತರ ಎಡತೋಳನ್ನು ನೀಳವಾಗಿ ಚಾಚಿ, ಅದರ ಮಣಿಕಟ್ಟಿನ ಹಿಂಬದಿಯನ್ನು ಎಡ ಮಂಡಿಯ ಮೇಲೆ ಒರಗಿಸಿಟ್ಟು ಆ ಕೈಯಿಂದ ಜ್ಞಾನಮುದ್ರೆ’ಯನ್ನು ರಚಿಸಬೇಕು.
೪. ಆ ಬಳಿಕ ಬಲತೋಳನ್ನು ಮೊಣಕೈಯಲ್ಲಿ ಬಾಗಿಸಿ, ಹಾಗೆಯೇ ತೋರುಬೆರಳು, ನಡುಬೆರಳುಗಳನ್ನು (ತರ್ಜನೀ, ಮಧ್ಯಮ) ಅಂಗೈ ಕಡೆಗೆ ಬಾಗಿಸಿಟ್ಟು ಅದಕ್ಕೆ ಯಾವ ಕೆಲಸವನ್ನೂ ಹಚ್ಚದೆ, ಉಂಗುರ ಮತ್ತು ಕಿರುಬೆರಳುಗಳನ್ನು ಹೆಬ್ಬೆರಳಿನ ಬಳಿಗೆ ತರಬೇಕು.
5. ಆಮೇಲೆ ಬಲಗೈ ಹೆಬ್ಬೆರಳನ್ನು ಮೂಗಿನೆಲುಬಿನ ಕೆಳಗೆ ಬರುವಂತೆ ಮೂಗಿನ ಬಲ ಹೊಳೆಯ ಮೇಲಿಟ್ಟು ಅದರಂತೆಯೇ ಕಿರುಬೆರಳು, ಉಂಗುರದ ಬೆರಳುಗಳನ್ನು ಮೂಗಿನ ಎಡಭಾಗದಲ್ಲಿ ಪುಷ್ಟಿಗೊಂಡು ಬಾಗಿದ ಹೊಳೆಯ ಮೇಲಿರಿಸಬೇಕು.
೬. ಈಗ ಉಂಗುರದ ಮತ್ತು ಕಿರುಬೆಗಳುಗಳನ್ನು ಒತ್ತಿ, ಎಡ ಹೊಳೆಯನ್ನು ಪೂರ್ತಿ ಮುಚ್ಚಬೇಕು.
೭. ಬಳಿಕ, ಬಲಗೈ ಹೆಬ್ಬೆರಳಿನಿಂದ ಬಲಹೊಳ್ಳೆಯ ಪುಷ್ಟಿಗೊಂಡ ಹೊರ ಅಂಚನ್ನು ಸ್ವಲ್ಪ ಒತ್ತಿ ಅದನ್ನು ಮೂಗಿನ ನಡುಗೋಡೆಯ ಕೆಳಗಿನ ಮೃದ್ವಸ್ಥಿಗೆ ಸಮಾಂತರವಾಗಿರಿಸಬೇಕು.
5. ಇದರಲ್ಲಿ ಬಲಗೈ ಹೆಬ್ಬೆರಳನ್ನು ಮೇಲಿನ ಗಿಣ್ಣಿನಲ್ಲಿ ಬಾಗಿಸಿ, ಅದರ ತುದಿಯನ್ನು ಮೂಗೆಲುಬಿಗೆ ಸಮಕೋನವಾಗುವಂತಿಡಬೇಕು.
೯ ಈಗ ಬಲಗೈ ಹೆಬ್ಬೆರಳು ಉಗುರಿನ ಬಳಿಯ ತುದಿಯಿಂದ ಬಲಮೂಗಿನ ಹೊಳ್ಳೆಯನ್ನು ಸ್ವಲ್ಪ ಒತ್ತುವುದರ ಮೂಲಕ ವಾಯುನಾಳವನ್ನು ಅಳವಡಿಸಿ, ಉಸಿರನ್ನು ಮೆಲ್ಲಮೆಲ್ಲಗೆ ಮತ್ತು ಆಳವಾಗಿ ಒಳಕ್ಕೆಳೆಯುತ್ತ ಶ್ವಾಸಕೋಶಗಳನ್ನು ಸಂಪೂರ್ಣವಾಗಿ ತುಂಬಬೇಕು.
೧೦. ತರುವಾಯ, ಬಲಹೊಳ್ಳೆಯನ್ನು ಪೂರಾ ಮುಚ್ಚುವುದರಿಂದ ಎರಡು ಹೊಳ್ಳೆಗಳೂ ಮುಚ್ಚಿದಂತಾಗುತ್ತದೆ.
೧೧. ಆಮೇಲೆ, ಉಸಿರನ್ನು ಒಳಗೆ 5 ರಿಂದ 10 ಸೆಕೆಂಡುಗಳ ಕಾಲ ತಡೆದು (ಅಂತರಕುಂಭಕ ಮಾಡಿ), ‘ಮೂಲಬಂಧ’ದಲ್ಲಿ ನಿಲ್ಲಬೇಕು.
,12. ಆ ಬಲಿಕ ಬಲಗೈಯನ್ನು ಕೆಳಗಿಳಿಸಿ ಮೂಲಬಂಧದ ಬಿಗಿತವನ್ನು ಸಡಿಲಿಸಿ ‘ಉಚ್ಚಾಯೀ ಪ್ರಾಣಾಯಾಮದಲ್ಲಿರುವಂತೆ ಉಸಿರನ್ನು ಮೆಲ್ಲ ಮೆಲ್ಲಗೂ, ಆದರೆ ಆಳವಾಗಿಯೂ ಹೊರಕ್ಕೆ ಬಿಟ್ಟು, ಶ್ವಾಸಕೋಶಗಳನ್ನು ಪೂರ್ಣವಾಗಿ ಬರಿದು ಮಾಡಬೇಕು.
೧೩. ಮತ್ತೆ ಬಲಗೈ ಬೆರಳುಗಳನ್ನು ಮೂಗಿನ ಬಳಿಗೆ ಎತ್ತಿಟ್ಟು, ಬಲಹೊಳ್ಳೆಯನ್ನು ಪೂರ್ಣವಾಗಿ ಬಂಧಿಸಿ ಎಡಹೊಳ್ಳೆಯನ್ನು ಆರೆತೆರೆದು, ವಾಯುವನ್ನು ಸಾಮರಸ್ಯದಿಂದ ನಿಧಾನವಾಗಿಯೂ ಮತ್ತು ಆಳವಾಗಿಯೂ ಒಳಕ್ಕೆಳೆಯಬೇಕು.
೧೪ ಈ ಮೇಲಿನ ಕ್ರಮದಿಂದ ಶ್ವಾಸಕೋಶಗಳನ್ನು ಪೂರಾ ತುಂಬಿಸಬೇಕು.
೧೫. ಹಿಂದಿನಂತೆಯೇ ಈಗಲೂ ‘ಮೂಲಬಂಧ ದಲ್ಲಿದ್ದು, ಉಸಿರನ್ನು 5-10 ಸೆಕೆಂಡುಗಳ ಕಾಲ ಒಳಗೇ ಸ್ಂತಭಿಸಬೇಕು. ಉಸಿರನ್ನು ಬಲಮೂಗಿನ ಹೊಳ್ಳೆಯಲ್ಲಿ ಎಳೆದಿರಲಿ, ಇಲ್ಲವೆ ಎಡಹೊಳ್ಳೆಯಲ್ಲಿ ಎಳೆದಿರಲಿ ಅಂತರ ಕುಂಭಕದಲ್ಲಿರುವ ಕಾಲ ಮಾತ್ರ ಸಮನಾಗಿರಬೇಕು..
೧೬ ಈಗಲೂ ಬಲಗೈಯನ್ನು ಕೆಳಕ್ಕಿಳಿಸಿ. ‘ಮೂಲಬಂಧ’ ದ ಬಿಗಿತವನ್ನು ಸಡಿಲಿಸಿ, ಆ ಬಳಿಕ ‘ಉಜ್ಜಾಯೀ’ಯಲ್ಲಿ ಮಾಡುವಂತೆಯೇ ಉಸಿರನ್ನು ನಿಧಾನವಾಗಿಯೂ ಆಳವಾಗಿಯೂ ಹೊರಕ್ಕೆ ಬಿಡುತ್ತ ಶ್ವಾಸಕೋಶಗಳನ್ನು ಪೂರ್ಣವಾಗಿ ಬರಿದು ಮಾಡಬೇಕು.
೧೭. ಇಲ್ಲಿಗೆ ‘ಪ್ರತಿಲೋಮ ಪ್ರಾಣಾಯಾಮ’ ಚಕ್ರದ ಒಂದು ಸುತ್ತು ಮುಗಿದಂತೆ ಆಗುತ್ತದೆ.
೧೮. ಇಂಥ ಸುತ್ತುಗಳನ್ನು ಬಿಡದೆ ಪ್ರತಿಸಲವೂ 5 ರಿಂದ 8 ರವರೆಗೆ ಮಾಡಿ ಮುಗಿಸಬೇಕು.
೧೯. ಕೊನೆಯಲ್ಲಿ ‘ಶವಾಸನ’ದಲ್ಲ ನೆಲದಮೇಲೆ ಒರಗಬೇಕು.
ಪರಿಣಾಮಗಳು
‘ಉಜ್ಜಾಯೀ’, ‘ನಾಡಿಶೋಧನೆ’ ಮತ್ತು ‘ಸೂರ್ಯಭೇದನೆ’ ಪ್ರಾಣಾಯಾಮಗಳಲ್ಲಿಯ ಸತ್ಪರಿಣಾಮಗಳೇ ಇದರಿಂದಲೂ ದೊರಕುತ್ತದೆ.
ಮುನ್ನೆಚ್ಚರಿಕೆಗಳು :
೧. ‘ಅನುಲೋಮ’ ಪ್ರಾಣಾಯಾಮದಲ್ಲಿರುವಂತೆಯೇ ಇದರಲ್ಲಿಯೂ ‘ಪೂರಕೆ’ದ ಕಾಲವು ‘ರೇಚಕ’ದ ಕಾಲಕ್ಕಿಂತಲೂ ಹೆಚ್ಚಾಗಿರುವುದರಿಂದ ಉಸಿರಾಟದ ಸಾಮರಸ್ಯದಲ್ಲಿ ವ್ಯತ್ಯಾಸ ವಿದೆ. ಈ ಕಾರಣದಿಂದ ಈ ಬಗೆಯ ಪ್ರಾಣಾಯಾಮವನ್ನು, ಈ ಹಾದಿಯಲ್ಲಿ ಚೆನ್ನಾಗಿ ನುರಿತವರೇ ಅಭ್ಯಸಿಸಲು ತೊಡಗಬೇಕು.
೨. ಅಲ್ಲದೆ ನೆತ್ತರೊತ್ತಡ, ಹೃದಯ ದೌರ್ಬಲ್ಯ ಮತ್ತು ನರಮಂಡಲದಲ್ಲಿ ಅಶಿಸ್ತು ಉಳ್ಳವರು ಈ ಪ್ರಾಣಾಯಾಮದ ಅಭ್ಯಾಸಕ್ಕೆ ಕೈ ಹಚ್ಚಬಾರದು ಏಕೆಂದರೆ, ಅದರಿಂದ ಭಯಂಕರ ಪರಿಣಾಮಗಳಾಗುವ ಸಂಭವವುಂಟು.














