* ಚರಣದ ಸ್ವಾಮಿಯ ಫಲ :
★* ಪ್ರಥಮ ಚರಣದ ಸ್ವಾಮಿ ರಾಹು-ಗುರು ಜಾತಕನನ್ನು ಬಹಿರ್ಮುಖಿಯನ್ನಾಗಿ ಮೂಡುವರು.
★* ದ್ವಿತೀಯ ಚರಣದ ಸ್ವಾಮಿ ರಾಹು-ಶನಿ ಜಾತಕನನ್ನು ಅಂತರ್ಮುಖಿಯನ್ನಾಗಿ ಮಾಡುವರು.
* ★ತೃತೀಯ ಚರಣದ ಪ್ರಭಾವದಿಂದ ಆಂದೋಲನದ ನೇತೃತ್ವ ವಹಿಸುವನು.
★ ಚತುರ್ಥ ಚರಣದ ಫಲ ದ್ವಿತೀಯ ಚರಣಕ್ಕೆ ಸಮಾನವಾಗಿರುತ್ತದೆ.
★ ಶತಭಿಷಾ ನಕ್ಷತ್ರದಲ್ಲಿ ಕಾರ್ಯ ಮತ್ತು ಅನ್ಯ ಅಂಶಗಳು :
ಇದರಲ್ಲಿ ಜ್ವರ ಬಂದರೆ 10 ದಿನಗಳವರೆಗೆ ಕ್ರೂರ. ವರುಣ ಶಾಂತಿಯಿಂದ ಆರೋಗ್ಯವಾಗುತ್ತದೆ. ಕನೈ ಋತುಮತಿಯಾದರೆ ಅಲ್ಪ ಕೋಪ ಮತ್ತು ಕಲಹ, ಆದರೆ ಧನ ಸಂಮೃದ್ಧಿಯಿರುತ್ತದೆ. ಇದು ಋತು ಶಾಂತಿ ಮುಂತಾದ ಶುಭ ಕರ್ಮಗಳಿಗೆ ಉತ್ತಮ ನಕ್ಷತ್ರ. ಆದರೆ ವಿವಾಹ ಸರ್ವಥಾ ವರ್ಜಿತ. ಕೇಚಿತ್ವಕ್ಷದಲ್ಲಿ ವಿವಾಹವಾಗಬಹುದು.
ಸೇತುವೆ ನಿರ್ಮಾಣ, ಹರಿಗೋಲು ಹೂಡುವುದು, ಹಡಗು ಪ್ರಯಾಣ, ಕೆರೆ ನಿರ್ಮಾಣ, ಬಾವಿ ತೋಡಿಸುವುದು, ನಾಲೆಯ ನಿರ್ಮಾಣ, ಭಟ್ಟಿ ಇಳಿಸುವುದು, ಗಾಣ ಕಟ್ಟುವುದು, ರಸ ತೆಗೆಯುವುದು, ಮುತ್ತುಗಳನ್ನು ಆರಿಸುವುದು, ಗೋವು, ಕುರಿ ಮುಂತಾದ ಪಶುಗಳ ಪಾಲನೆಯ ಪ್ರಾರಂಭ, ನಶೆಯ ಗಿಡಗಳ ಬೆಳೆ ತೆಗೆಯುವುದು, ಹವಳದ ವ್ಯಾಪಾರ ಮುಂತಾದ ಕಾರ್ಯಗಳಿಗೆ ಇದು ಉತ್ತಮವಾದುದು.
ಇದರಲ್ಲಿ ರತ್ನಗಳನ್ನು ಕ್ರಯಮಾಡಿ ವಿಕ್ರಯ ಮಾಡಬಹುದು. ಚಿಕಿತ್ಸೆಯಿಂದ ಆರೋಗ್ಯ ಪ್ರಾಪ್ತಿಯಾಗುತ್ತದೆ. ವ್ಯಾಪಾರದಲ್ಲಿ ಮತ್ತು ಕುದುರೆ ಬಾಡಿಗೆಯಲ್ಲಿ ಲಾಭ ಪ್ರಾಪ್ತಿಯಾಗುತ್ತದೆ. ನ್ಯಾಯಶಾಸ್ತ್ರಾಭ್ಯಾಸ ಪ್ರಾರಂಭಿಸಿದರೆ ಸಫಲತೆ ದೊರೆಯುವುದು. ಈ ನಕ್ಷತ್ರದ 1ನೇ ಚರಣದಲ್ಲಿ ಜನಿಸಿದ ಜಾತಕನು ಯಥಾರ್ಥವಾದಿ, ಸ್ನೇಹಪರ, 2ನೇ ಚರಣದಲ್ಲಿ ಭಯಸ್ಥ, 3ನೇ ಚರಣದಲ್ಲಿ ಸಂತಾನವಂತ, ಕ್ರೂರಕರ್ಮಿ: 4ನೇ ಚರಣದಲ್ಲಿ ತಿಳುವಳಿಕಸ್ಟ ಉತ್ತಮ ಕೆಲಸ ಮಾಡುವವ, ಅಭಿಮಾನಿ, ಸರ್ವಪ್ರಥಮ ರಾಹುದೆಶೆ 18 ವರ್ಷ. 3, 24, 40, 52, 63 – ಈ ವರ್ಷಗಳು ಗಂಡ ಕಾಲಗಳು ಕಳೆದುಳಿದರೆ ಪರಮಾಯುಷ್ಯ 80 ವರ್ಷಗಳು.
★* ಶತಭಿಷಾ ನಕ್ಷತ್ರದ ಜಾತಕರ ವಿವಾಹಕ್ಕೆ ಹೊಂದುವ ನಕ್ಷತ್ರಗಳು :
*ಶತಭಿಷ ನಕ್ಷತ್ರದ ಕನೈಗೆ
ಕೃತ್ತಿಕಾ, ರೋಹಿಣಿ, ಮೃಗಶಿರಾ, ಪುಷ್ಯ, ಆಶ್ಲೇಷ, ಮಘಾ, ಚಿತ್ರಾ, ಸ್ವಾತಿ, ವಿಶಾಖಾ, ಮೂಲಾ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಧನಿಷ್ಠ
ಶತಭಿಷ ನಕ್ಷ ತ್ರದ ವರನಿಗೆ
ರೋಹಿಣಿ, ಮೃಗಶಿರಾ, ಮಘಾ, ಉತ್ತರಾ 2,3,4ನೇ ಚರಣ, ಚಿತ್ರಾ, ಸ್ವಾತಿ, ವಿಶಾಖಾ, ಅನುರಾಧಾ, ಮೂಲಾ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಪೂರ್ವಾಭಾದ್ರಪದ 1,2,3ನೇ ಚರಣ, ಉತ್ತರಾಭಾದ್ರಪದ, ರೇವತಿ.
* ಶತಭಿಷಾ ನಕ್ಷತ್ರದವರ ಜನನಕ್ಕೆ ಶಾಂತಿ :
ಈ ನಕ್ಷತ್ರದಲ್ಲಿ ಸಂತಾನದ ಜನನವಾದಾಗ ತಾಯ್ತಂದೆಯರು ಈ ಕೆಳಗೆ ನೀಡಿದ ಮಂತ್ರವನ್ನೇ ಒಂದು ಮಾಲೆಯಷ್ಟು ಜಪ ಮಾಡಿ, ಯಥಾಸಾಮರ್ಥ ಅಕ್ಕಿ-ಬೆಲ್ಲ ಎಳ್ಳುದಾನ ಮಾಡಬೇಕು. ಇದರಿಂದ ಶತಭಿಷಾ ನಕ್ಷತ್ರದ ದೋಷ ಶಾಂತವಾಗುತ್ತದೆ.
ಯಂತ್ರ
ಓಂ ಷ್ಟಂ ಅಧ್ಯಯ
ಹುಂ ಫಟ್ ಹ್ರಾಂ
ಸರ್ವಪ್ರಥಮ ಈ ಯಂತ್ರವನ್ನು ಸ್ವರ್ಣಪತ್ರದ ಮೇಲೆ ಉತ್ತೀರ್ಣಗೊಳಿಸಿ. ಶತೌಷಧಿ ಮೂಲಿಕೆಗಳಿಂದ ಧೂಪವನ್ನು ನೀಡಬೇಕು. ಹೋಳಿಗೆ ನೈವೇದ್ಯ, ಅಶ್ವತ್ಥ ಕಾಷ್ಟ್ರದ ಹೋಮ ಮತ್ತು ಚಿತ್ರಾನ್ನದ ಬಲಿ ಅರ್ಪಿಸಬೇಕು. ಜೊತೆಗೆ ಈ ಕೆಳಗಿನ ಮಂತ್ರವನ್ನು ಒಂದು ಸಹಸ್ರ ಸಲ ಜಪ ಮಾಡಬೇಕು.
*ಇಮಂ ಮೇ ವರಣಶ್ರುಧಿ ಹವ ಮಧ್ಯಾ ಚ ಮೃಡಯ ।
* ತ್ವಾಮವಸ್ಯು ರಾಚಕೆ ॥
ನಂತರ ಯಂತ್ರವನ್ನು ಧಾರಣ ಮಾಡಬೇಕು. ಇದರಿಂದ ಶತಭಿಷಾ ನಕ್ಷತ್ರದ ಸರ್ವದೋಷಗಳು ಶಾಂತವಾಗಿ, ಜಾತಕರಿಗೆ ಸುಖ-ಸಂವೃದ್ಧಿ ಪ್ರಾಪ್ತಿಯಾಗುತ್ತದೆ.














