ಮನೆ ಕಾನೂನು ಶರಣಾಗಿರುವ ಆರು ನಕ್ಸಲರು ಜ.30ರವರೆಗೆ ನ್ಯಾಯಾಂಗ ಬಂಧನಕ್ಕೆ

ಶರಣಾಗಿರುವ ಆರು ನಕ್ಸಲರು ಜ.30ರವರೆಗೆ ನ್ಯಾಯಾಂಗ ಬಂಧನಕ್ಕೆ

0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಬುಧವಾರ ಶರಣಾಗಿದ್ದ ಆರು ಮಂದಿ ನಕ್ಸಲರನ್ನು ಎನ್‌ಐಎ ವಿಶೇಷ ನ್ಯಾಯಾಲಯವು ಗುರುವಾರ ಜನವರಿ 30ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.

Join Our Whatsapp Group

ಶರಣಾಗಿರುವ ಮುಂಡಗಾರು ಲತಾ, ಸುಂದರಿ ಕುತ್ತಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಆರೋಟಿ, ಕೆ ವಸಂತ ಮತ್ತು ಜಿಷಾ ಅವರನ್ನು ಎಸಿಪಿ ಬಾಲಾಜಿ ಸಿಂಗ್‌ ಅವರು ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಿ ಎಂ ಗಂಗಾಧರ್‌ ಅವರ ಮುಂದೆ ಹಾಜರುಪಡಿಸಿದರು.

ಆರೋಪಿಗಳಿಂದ ಮಾಹಿತಿ ಪಡೆದ ನ್ಯಾಯಾಧೀಶರು ಎಲ್ಲರನ್ನೂ ಜನವರಿ 30ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಿದರು.

ಶರಣಾಗಿರುವ ಮುಂಡಗಾರು ಲತಾ, ಸುಂದರಿ ಕುತ್ತಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಆರೋಟಿ, ಕೆ ವಸಂತ ಮತ್ತು ಜಿಷಾ ಅವರ ವಿರುದ್ದ ಕರ್ನಾಟಕ, ಕೇರಳ ಮತ್ತು ಮತ್ತಿತರ ಕಡೆ ಹಲವು ಪ್ರಕರಣಗಳು ದಾಖಲಾಗಿವೆ.