ತಿಥಿಗಂಡ : ಪಂಚಮಿ ತಿಥಿಯ ಅಂತ್ಯ ಕಾಲದ ೨ ಘಳಿಗೆ, ಷಷ್ಟಿ ತಿಥಿ ಆರಂಭ ಕಾಲದ ೨ ಘಳಿಗೆ, ದಶಮಿ ತಿಥಿಯ ಅಂತ್ಯ ಕಾಲದ ೨ ಘಳಿಗೆ, ಏಕಾದಶಿ ತಿಥಿಯ ಆರಂಭ ಕಾಲದ ೨ ಘಳಿಗೆ, ಪೌರ್ಣಿಮೆ ತಿಥಿಯ ಅಂತ್ಯ ಕಾಲದ ೨ ಘಳಿಗೆ ಕೃಷ್ಣಪಕ್ಷ ಪ್ರತಿಪದೆ ತಿಥಿಯ ಆರಂಭ ಕಾಲದ ೨ ಘಳಿಗೆ, ಅಮಾವಾಸ್ಯೆಯ ಅಂತ್ಯ ಕಾಲದ ೨ ಘಳಿಗೆ, ಶುಕ್ಲಪಕ್ಷ ಪ್ರತಿಪದೆ ತಿಥಿಯ ಆರಂಭ ಕಾಲದ ೨ ಘಳಿಗೆ ಇವೆಲ್ಲ ಕಾಲಗಳೂ ತಿಥಿಗಂಡ ಕಾಲಗಳೆನಿಸುವವು. ಈ ಕಾಲದಲ್ಲಿ ಶಿಶು ಜನಿಸಿದರೆ ಆ ಕೂಸಿಗೆ ದೋಷಾರಿಷ್ಟವು. ಆದ್ದರಿಂದ ಈ ತಿಥಿ ಗಂಡಾಂತರಕ್ಕೆ ಒಳ್ಳೇ ಲಕ್ಷಣದ ಹೋರಿ (ಎತ್ತು) ಯನ್ನು ಪೂಜ್ಯರಿಗೆ ದಾನ ಮಾಡಬೇಕು. ದೋಷ ನಿವಾರಣೆಯಾಗುವದು.
ಲಗ್ನ ಗಂಡ :
ಶ್ಲೋಕ : *ಸಿಂಹಕರ್ಕಟಯೋಶ್ಚಾಪ ಕೀಟಯೋರ್ಮಿನ ಮೇಷಯೋಃ । ಗಂಡಾಂತಮಂತರಾಲಂ ತನ್ನಾಡಿಕಾ ನಿಧನಪ್ರದಾ ||
ಅರ್ಥ : ಕರ್ಕ ಲಗ್ನದ ಅಂತ್ಯ ಕಾಲದ ಅರ್ಧ ಘಳಿಗೆ, ಸಿಂಹ ಲಗ್ನದ ಆರಂಭ ಕಾಲದ ಅರ್ಧ ಘಳಿಗೆ, ವೃಶ್ಚಿಕ ಲಗ್ನದ ಅಂತ್ಯ ಕಾಲದ ಅರ್ಧ ಘಳಿಗೆ, ಧನುರ್ಲಗ್ನದ ಆರಂಭ ಕಾಲದ ಅರ್ಧ ಘಳಿಗೆ, ಮೀನ ಲಗ್ನದ ಅಂತ್ಯ ಕಾಲದ ಅರ್ಧ ಘಳಿಗೆ, ಮೇಷ ಲಗ್ನದ ಆರಂಭ ಕಾಲದ ಅರ್ಧ ಘಳಿಗೆ ಇವು ಲಗ್ನ ಗಂಡಗಳೆನಿಸುವವು. ಇದರಲ್ಲಿ ಶಿಶು ಜನಿಸಿದರೆ ಮೃತ್ಯುಪ್ರದವು. ಆದ್ದರಿಂದ, ಈ ದೋಷ ನಿವಾರಣಾರ್ಥವಾಗಿ ಬೆಳ್ಳಿಯ ನಾಣ್ಯವನ್ನು ಪೂಜ್ಯರಿಗೆ ದಾನ ಮಾಡಬೇಕು.
ಮೃತ್ಯು ಯೋಗಾದಿ ಫಲವು : ಮೃತ್ಯು ಯೋಗ, ದಗ್ಧ ಯೋಗ, ಯಮಗಂಡ ಯೋಗ, ಕಾಲಗಂಡ ಯೋಗಗಳಲ್ಲಿಯೂ ಗ್ರಹಣ, ಸಂಕ್ರಾಂತಿ, ಕ್ಷಯ ದಿನಗಳಲ್ಲಿಯೂ ಶಿಶು ಜನನವಾದರೆ ವಂಶಕ್ಕೆಯೇ ಅದು ಮಹಾ ಅರಿಷ್ಟ-ದೋಷ ತಗಲುವದು. ಆದ್ದರಿಂದ ಇವಕ್ಕೆಲ್ಲ ಗೋಮುಖ ಪ್ರಸವ ಶಾಂತಿ ಮಾಡಿಸಬೇಕು. ದೋಷ ನಿವಾರಣೆಯಾಗುವದು.
ಸೂರ್ಯಗ್ರಹಣ ಶಾಂತಿ ವಿಧಿ
ಸೂರ್ಯ ಗ್ರಹಣ ಕಾಲದಲ್ಲಿ ಶಿಶು ಜನಿಸಿದರೆ ಸುವರ್ಣ ಅಥವಾ ತಾಮ್ರದ ತಗಡಿನಲ್ಲಿ ಸೂರ್ಯನ ಪ್ರತಿಮೆಯನ್ನೂ, ರಾಹುವಿನ ಸಲುವಾಗಿ ಸೀಸದಲ್ಲಿ ಒಂದು ಸರ್ಪವನ್ನೂ ಮಾಡಿಸಿ ಇಡಬೇಕು. ಶಾಂತಿಯನ್ನು ಮಾಡಿಸತಕ್ಕ ದಿವಸ ತಮ್ಮ ಆರಾಧ್ಯ ದೇವಾಲಯದಲ್ಲಿ ಯೋಗ್ಯ ಸ್ಥಳವನ್ನು ಆಯ್ಕೆ ಮಾಡಿ, ಆ ಸ್ಥಳವನ್ನು ಗೋಮಯದಿಂದ ನೆಲವನ್ನು ಶುದ್ದೀಕರಿಸಿ, ಅದರ ಮೇಲೆ ರಂಗವಲ್ಲಿಯನ್ನು ಹಾಕಿ. ಆ ರಂಗವಲ್ಲಿಯ ಮೇಲೆ ಒಂದು ಹೊಸ ಕೆಂಪು ವಸ್ತ್ರವನ್ನು ಹಾಕಿ, ಆ ಕೆಂಪು ವಸ್ತ್ರದ ಮೇಲೆ ಗೋದಿಯನ್ನೂ, ಆ ಗೋದಿಯ ಮೇಲೆ ಸುವರ್ಣ ತಗಡಿನಲ್ಲಿ ಸಿದ್ಧಪಡಿಸಿದ್ದ ಸೂರ್ಯ ಪ್ರತಿಮೆಯನ್ನೂ ಇಡಬೇಕು. ಕೆಂಪು ವಸ್ತ್ರದ ಮಗ್ಗುಲಿಗೆ ನೀಲಿ ವರ್ಣದ ಹೊಸ ವಸ್ತ್ರವನ್ನು ಹಾಸಿ, ಆ ವಸ್ತ್ರದ ಮೇಲೆ ಉದ್ದು ಹಾಕಿ, ಆ ಉದ್ದಿನ ಮೇಲೆ ಸೀಸದಿಂದ ತಯಾರಿಸಿಟ್ಟಿದ್ದ ಸರ್ಪವನ್ನು ಸ್ಥಾಪಿಸಬೇಕು. ಆ ನಂತರ ಸೂರ್ಯ ಪ್ರತಿಮೆಯನ್ನು ಕೆಂಪು ಗಂಧ, ಕುಂಕುಮ, ಕೆಂಪು ಪುಷ್ಪಗಳಿಂದಲೂ ಹಾಗೂ ಸರ್ಪವನ್ನು ಕಸ್ತೂರಿ ತಿಲಕ, ಕರಿಕೆ-ಪತ್ರಿಗಳಿಂದಲೂ ಅಲಂಕರಿಸಿ, ಧೂಪ ದೀಪಾದಿಗಳಿಂದ ಪದ್ಧತಿ ಪ್ರಕಾರ ಭಕ್ತಿಯಿಂದ ಪೂಜಿಸಬೇಕು. ಅನಂತರ, ಈ ಕೆಳಗೆ ಹೇಳಿದ ಮಂತ್ರಗಳನ್ನು ಹೇಳಿ, ಆಯಾ ಪ್ರತಿಮೆಗಳನ್ನು ದಕ್ಷಿಣೆ ಸಮೇತ, ಭೂರಿ ಭೋಜನ ಮಾಡಿಸಿ ಪೂಜ್ಯರಿಗೆ ದಾನ ಕೊಡಬೇಕು.
ಸೂರ್ಯದೇವ ಮಂತ್ರ:
ಆದಿದೇವ ನಮಸ್ತುಭ್ಯಂ ಸಪ್ತ ಸಪ್ಪೆ ದಿವಾಕರ |
ತಂ ರವೇ ತಾರಾಯ ಸ್ವಾಸ್ಥಾನ್ ಸ್ಮಾತ್ಸಂಸಾರ ಸಾಗರಾತ್ 1
ರಾಹು ಮಂತ್ರ :
ಮಹಾಶಿರಾ ಮಹಾವಕ್ಕೋ ದೀರ್ಘದಂಷ್ಟೂ ಮಹಾಬಲಃ | ಮುಂಡಕಾಯೋರ್ಧ್ವಶೇಶಿಶ್ಚ ಪೀಡಾಹರತು ಮೇತಮಃ ||
ಚಂದ್ರಗ್ರಹಣ ಶಾಂತಿ ವಿಧಿ
ಚಂದ್ರಗ್ರಹಣ ಕಾಲದಲ್ಲಿ ಶಿಶು ಜನಿಸಿದರೆ ಬೆಳ್ಳಿಯ ತಗಡಿನಲ್ಲಿ ಚಂದ್ರನ ಪ್ರತಿಮೆಯನ್ನೂ, ಕೇತು ಗ್ರಹಕ್ಕಾಗಿ ಸತುವಿನ ಲೋಹದಲ್ಲಿ ಒಂದು ಧ್ವಜವನ್ನೂ ಮಾಡಿಸಿಟ್ಟುಕೊಳ್ಳಬೇಕು. ಆನಂತರ ಶಾಂತಿಯನ್ನು ಮಾಡುವ ದಿನ, ತಮಗಿಷ್ಟ ದೇವರ ದೇವಾಲಯದ ಯೋಗ ಸ್ಥಳದಲ್ಲಿ ನೆಲವನ್ನು ಗೋಮಯದಿಂದ ಸಾರಿಸಿ, ಅದರ ಮೇಲೆ ರಂಗವಲ್ಲಿಯನ್ನು ಹಾಕಿ ಆ ರಂಗವಲ್ಲಿಯ ಮೇಲೆ ಒಂದು ಹೊಸ ಬಿಳೇ ವಸ್ತ್ರವನ್ನು ಹಾಸಿ, ಅದರ ಮೇಲೆ ಅಕ್ಕಿಯನ್ನು ಹರವಿ, ಆ ಅಕ್ಕಿಯ ಮೇಲೆ ಚಂದ್ರ ಪ್ರತಿಮೆಯನ್ನು ಸ್ಥಾಪಿಸಬೇಕು. ಈ ಬಿಳೇ ವಸ್ತ್ರದ ಮಗ್ಗುಲಿಗೆ ಒಂದು ಹೊಸ ಕಪ್ಪು ವರ್ಣದ ವಸ್ತ್ರವನ್ನು ಹಾಸಿ, ಅದರ ಮೇಲೆ ಹುರಳಿಯನ್ನು ಹರವಿ, ಆ ಹುರಳಿಯ ಮೇಲೆ ಧ್ವಜವನ್ನು ಸ್ಥಾಪಿಸಬೇಕು. ಆನಂತರ ಚಂದ್ರ ಪ್ರತಿಮೆಯನ್ನು ಬಿಳೇ ಗಂಧ, ಬಿಳೇ ಪುಷ್ಪಾದಿಗಳಿಂದ ಅಲಂಕರಿಸಿ, ಧ್ವಜವನ್ನು ಕಸ್ತೂರಿ ತಿಲಕ, ದರ್ಭೆ-ಕರಿಕೆ-ಪತ್ರಿಗಳಿಂದಲೂ ಅಲಂಕರಿಸಿ, ಧೂಪ-ದೀಪಾದಿಗಳಿಂದ ಪೂಜಿಸಬೇಕು. ಇದಾದ ನಂತರ ಕೆಳಗೆ ಹೇಳಿದ ಮಂತ್ರಾದಿಗಳನ್ನು ಹೇಳುತ್ತ ಆ ಪ್ರತಿಮೆಗಳನ್ನು ಪೂಜ್ಯರಿಗೆ ಭೂರಿ ಭೋಜನ, ದಕ್ಷಿಣೆ ಸಹಿತವಾಗಿ ದಾನ ಮಾಡಬೇಕು. ಅನ್ನ ಸಂತರ್ಪಣೆ ಮಾಡಿಸುವದು ಶ್ರೇಷ್ಠ.
ಚಂದ್ರ ಮಂತ್ರ:
ಓಂ ಮಹಾದೇವ ಜಾತಿವಲ್ಲಿ ಪುಷ್ಪಗೋಕ್ಷೀರ ಪಾಂಡುರ 1 ಸೋಮಸೌಮೋಭವಾಸ್ಮಾಕಂ ಸರ್ವದಾತೆ ನಮೋ ನಮಃ ||
ಕೇತು ಮಂತ್ರ:
ಅಧ ಸ್ವಾರ್ಧಾಂಗಭೋಃ ಕೇತೋಫಲ ಧೂಮ ಸಮಪ್ರಭೆ 1 ರೌದ್ರರೂಪ ನಮಸ್ತುಭ್ಯನ ಮಮ ಪೀಡಾಂ ಕುರುಕುರು !!
*ಗೋಮುಖ ಪ್ರಸವ ಶಾಂತಿ ಪದ್ಧತಿಯು :
ಗೋಮುಖ ಪ್ರಸವ ಶಾಂತಿಯನ್ನು ಮಾಡಬೇಕೆಂದು ನಿರ್ಧರಿಸಿದ ದಿವಸ ಮನೆಯನ್ನು ಗೋಮಯದಿಂದ ಸಾರಣೆ ಮಾಡಿ. ಪೂಜೆಯ ಸ್ಥಾನದ ಒಂದು ಯೋಗ್ಯ ಸ್ಥಳದಲ್ಲಿ ರಂಗವಲ್ಲಿಯನ್ನು ಹಾಕಿ, ಆ ಜಾಗೆಯನ್ನು ಅಲಂಕಾರ ಮಾಡಬೇಕು. ನಂತರ ಆ ರಂಗವಲ್ಲಿ ಹಾಕಿದ ಸ್ಥಳದಲ್ಲಿ ಪುರೋಹಿತ ವೈದಿಕನು ಮೊದಲು ವಿಶ್ವೇಶ್ವರನನ್ನು ಸ್ಥಾಪಿಸಿ ಪೂಜಿಸಿ (ವಿಶ್ವೇಶ್ವರನ ಮೂರ್ತಿ ಇಲ್ಲದಿದ್ದರೆ ೨ ವೀಳೆದೆಲೆಗಳ ಮೇಲೆ ಒಂದು ಬೆಟ್ಟಡಿಕೆಯನ್ನು ಇಟ್ಟು ಪೂಜಿಸಲೂಬಹುದು.) ನಂತರ ಆ ರಂಗವಲ್ಲಿಯ ಮೇಲೆ ಭತ್ತವನ್ನು ಹಾಸಿ, ಆ ಭತ್ತದ ಮೇಲೆ ಹೊಸದಾದ ಮೊರವನ್ನು ಇಟ್ಟು, ಆ ಮೊರದ ಮೇಲೆ ಕೆಂಪು ವಸ್ತ್ರವನ್ನು ಹಾಕಿ, ಆ ಕೆಂಪು ವಸ್ತ್ರದಲ್ಲಿ ಎಳ್ಳು ಹರವಬೇಕು. ಆ ನಂತರ ಕೂಸನ್ನು ಸ್ನಾನ ಮಾಡಿಸಿ ತಂದು ಆ ಕೂಸನ್ನು ಪೂರ್ವಕ್ಕೆ ಮುಖ ಮಾಡಿ ಆ ಮೊರದಲ್ಲಿ ಮಲಗಿಸಿ, ಶುದ್ಧ ಮಾಡಿದ ನೂಲು ಸೂತ್ರದಿಂದ ಆ ಮೊರವನ್ನು ಸುತ್ತಬೇಕು. ನಂತರ ಸ್ನಾನ ಮಾಡಿಸಿದ ಆಕಳುವನ್ನು ಕೂಸಿನ ಹತ್ತಿರಕ್ಕೆ ತಂದು ನಿಲ್ಲಿಸಿ, ಶುದ್ಧೋದಕ, ಭಸ್ಮ-ಗಂಧ-ಪುಷ್ಪಾದಿಗಳಿಂದ ಆ ಆಕಳನ್ನು ಪದ್ಧತಿ ಪ್ರಕಾರ ಪೂಜಿಸಬೇಕು.
*ಷಷ್ಟೇ ಬ್ರಹ್ಮಾಗಲೇ ವಿಷ್ಣುರ್ಮುಖೆ ರುದ್ರಃ ಪ್ರತಿಷ್ಠಿತಃ |
ಮಧ್ಯೆ ದೇವಗಣಾಸ್ಪರ್ವೇ ರೋಮಕೂಪೇ ಮಹರ್ಷಯಃ ||ನಾಗ:ಪುಚ್ಛಿ ಖುರಾಗ್ರೇಪು ಯೇ ಚಾಷ್ಟೂ ಕುಲಪರ್ವತಃ ।
*ಮೂತ್ರೆ ಗಂಗಾದಯೋ ನ ದ್ಯೋ ನೇತ್ರಯೋಃ ಶಶಿಭಾಸ್ಕರ್ ॥
ಏತೇ ಅಸ್ಯಾಸ್ತನ್ ದೇವಾಃ ಸಾಧೇನುರ್ವರದಾಸ್ತುವೇ ||
ಈ ಪ್ರಕಾರ ಗೋಮುಖ ದರ್ಶನದೊಂದಿಗೆ ಪ್ರಾರ್ಥನೆ ಮಾಡುತ್ತ
ಪಿತಾಮಹಃ ಪಿತೃಪಿತಾ ತಕ್ಷಿತಾ ತಸ್ಯ ವಂಶಜಾಃ |
ತೇ ಸರ್ವೆ ತೃಪ್ತಿ ಮಾಯಾಂತಿ ನೀಲ ಪುಚ್ಛೇಷು ತರ್ಪಿತಾಃ || ಯಜ್ಞಸಾಧನ ಭೂತಾಯಾ ವಿಶ್ವಸ್ಯಾಘ ಪ್ರಣಾಶಿನೀ | ವಿಶ್ವರೂಪ *ಧರೋದೇವ: ಪ್ರಿಯತಾಮನ ಯಾಗವಾ ||
ಗವಾ ಮಂಗೇಷು ತಿಷ್ಠಂತಿ ಭುವನಾನಿ ಚತುರ್ದಶ |
ಯಸ್ಮಾತ್ತ ಸ್ಮಾಚ್ಛಿವಂ ಮೇಸ್ಕಾದತ ಶಾಂತಿಂ ಪ್ರಯಚ್ಛಮೇ ||
ಎಂಬೀ ಮಂತ್ರವನ್ನು ಹೇಳುತ್ತ ಆಕಳದ ಪ್ರಸವ ಸ್ಥಾನದಿಂದ ಕೂಸು ಹುಟ್ಟಿದಂತೆ ಮಾಡಿ, ನಂತರ ಆಕಳ ಮುಖದ ಮುಂದೆ ಕೂಸನ್ನು ಹಿಡದು ಆಕಳಿಂದ ಮೂಸಿ ನೋಡಿಸಿ. ಆಕಳದ ಹೊಟ್ಟೆಯ ಕೆಳಗೆ ಅಡ್ಡವಾಗಿ ಕೂಸನ್ನು ತೆಗೆದುಕೊಂಡು ಕೈಮುಗಿದುಕೊಂಡು ನಿಂತಂಥ ತಾಯಿಯ ಉಡಿಯಲ್ಲಿ ಆಚಾರ್ಯನು ಶಿಶುವನ್ನು ಹಾಕಿದ ಮೇಲೆ ಅಲ್ಲಿ ಕೂಡಿದ್ದ ಗುರು-ಹಿರಿಯರಲ್ಲಿ ಕೂಸಿಗೆ ಆಶೀರ್ವಾದ ಮಾಡಬೇಕು. ಆನಂತರವೇ ತಂದೆಯ ಕೂಸಿನ ಮುಖವನ್ನು ನೋಡುತ್ತ, ಅಸ್ಯ ಗೋಮುಖಸ್ಯ ಪ್ರಸವಸ್ಯ ಪುಣ್ಯಾಹಂ ಭವಂತೋದ್ಭವಂತು ಏವಂ ವೃದ್ಧಿ ಶ್ರೀ ಕಲ್ಯಾಣ ಮಿತಿ ಈ ಮಂತ್ರವನ್ನು ಭಕ್ತಿಯಿಂದ ಹೇಳುತ್ತ ಆಚಾರ್ಯರಿಗೆ ದಕ್ಷಿಣೆ-ವಸ್ತ್ರ ಸಹಿತವಾಗಿ ಆ ಗೋವನ್ನು ದಾನ ಕೊಟ್ಟು ನಮಸ್ಕರಿಸಬೇಕು. ಯಥಾ ಪ್ರಕಾರ ಕೂಡಿದ ಜನರಿಗೆ ಮೃಷ್ಟಾನ್ನ ಭೋಜನವನ್ನೂ ಮಾಡಿಸಬೇಕು.
ಸೂಚನೆ : ದಾನ ಕೊಡುವ ಆಕಳು ಕರು ಸಹಿತವಾಗಿರಬೇಕು. ಹಾಲು ಕೊಡುತ್ತಿರಬೇಕು. ಆಕಳು ಮತ್ತು ಕರು ಇವೆರಡಕ್ಕೂ ಲೋಪದೋಷಗಳಿರಬಾರದು.














