ಮನೆ ಸ್ಥಳೀಯ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ನಾಶಪಡಿಸಿದ ಮೈಸೂರು ಪೊಲೀಸರು

ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ನಾಶಪಡಿಸಿದ ಮೈಸೂರು ಪೊಲೀಸರು

0

ಮೈಸೂರು: ಮೈಸೂರು ಪೊಲೀಸರ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು.

Join Our Whatsapp Group

ಮೈಸೂರು ನಗರದ ಪೊಲೀಸ್ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಅಮಾನತ್ತುಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನು  ಡ್ರಗ್ ಡಿಸ್ಪೋಸಲ್ ಸಮಿತಿಯ ಸಮ್ಮುಖದಲ್ಲಿ ಪೊಲೀಸರು ನಾಶಪಡಿಸಿದರು.

36 ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 276 ಗ್ರಾಂ ಗಾಂಜಾ, 05 ಪ್ರಕರಣದ 49 ಗ್ರಾಂ 298 ಮಿಲಿ ಎಂ.ಡಿ.ಎಂ.ಎ, 01 ಪ್ರಕರಣದ 28 ಗ್ರಾಂ,  74 ಮಿಲಿ ಗ್ರಾಂ ಚರಸ್  ಸೇರಿ ಸುಮಾರು 1,53,95,000 ಮೌಲ್ಯದ ಮಾದಕ‌ ವಸ್ತುಗಳನ್ನು ನಾಶಪಡಿಸಲಾಯಿತು. ಈ ವೇಳೆ ಡಿಸಿಪಿ ಎಸ್. ಜಾಹ್ನವಿ‌, ಉಪ ಪರಿಸರ ಅಧಿಕಾರಿ  ಸೇರಿ ಹಲವು‌ ಅಧಿಕಾರಿಗಳು‌ ಭಾಗಿಯಾಗಿದ್ದರು.