ಮನೆ ಜ್ಯೋತಿಷ್ಯ 12 ರಾಶಿಗಳ ಜಾತಕ ಫಲ

12 ರಾಶಿಗಳ ಜಾತಕ ಫಲ

0

೧) ಮೇಷ ರಾಶಿಯ ಫಲ ವಿಚಾರವು : ಮೇಷ ರಾಶಿಗೆ ಕುಜನು ಸ್ವಾಮಿಯು. ಈ ರಾಶಿಯು ಚರಸಂಜ್ಞೆಯುಳ್ಳದ್ದು. ಇದು ಪೂರ್ವ ದಿಕ್ಕಿನದು. ಈ ರಾಶಿಯಲ್ಲಿ ಹುಟ್ಟಿದವನು ಪಿತ್ತ ಪ್ರಕೃತಿಯವನು, ಗರ್ವ ಸ್ವಭಾವದವನು, ಹಗಲಿನಲ್ಲಿ ಬಲವಂತನು, ಕ್ಷತ್ರಿಯ ವರ್ಣದ ಈತನು ದುಂಡು ಮತ್ತು ಕೆಂಪು ಕಣ್ಣುಗಳುಳ್ಳವನು, ಯಾವಾಗಲೂ ರೋಗದಿಂದ ನರಳುವವನು. ಧರ್ಮ ಕಾರ್ಯಗಳಲ್ಲಿ ಹೆಚ್ಚು ನಿರತನಾದವನು, ಸರಕಾರಿ ವರ್ಗದ ಜನರಿಂದ ಮನ್ನಣೆ ಗಳಿಸುವವನು, ಸ್ತ್ರೀಯರಿಂದ ವಿಶೇಷ ಪ್ರೇಮಗಳಿಸಿಕೊಳ್ಳುವನು, ಶ್ರೀಮಂತನೂ, ಗುಣವಂತನೂ, ಹೆಚ್ಚು ಮಕ್ಕಳನ್ನು ಹೊಂದಿರುವವನೂ, ಗುರು ದೇವತಾದಿಗಳಲ್ಲಿ ಭಯ ಭಕ್ತಿಯುಳ್ಳವನೂ, ಇಬ್ಬರು ಸ್ತ್ರೀಯರನ್ನು ಹೊಂದಿ ಸುಖಿಸವವನೂ, ಮೇಲಿಂದ ಮೇಲೆ ಪರಸ್ಥಳಕ್ಕೆ ವ್ಯಾಪಾರ ವ್ಯವಹಾರಗಳಿಗೆ ಸಂಚಾರ ಹೋಗುವವನೂ, ವ್ಯಾಪಾರದಿಂದ ವಿಶೇಷ ಹಣ ಗಳಿಸುವವನೂ ಆಗುವನು. ಅಲ್ಪ ಭೋಜನದಿಂದ ತೃಪ್ತಿ ಹೊಂದುವನು. ಗರ್ಮಿ ಸಂಬಂಧ ರೋಗದಿಂದ ನರಳುವ ಈತನು ಬಿಸಿ ಬಿಸಿ ಆಹಾರ-ಪಾನಿಯಗಳನ್ನು ಸೇವಿಸಲಿಷ್ಟ ಪಡುವನು. ಕಾಯಿಪಲೈಗಳಲ್ಲಿ ವಿಶೇಷ ಪ್ರೇಮವುಳ್ಳವನು. ಶೀಘ್ರ ಕೋಪಿಯಾಗಿದ್ದರೂ ಕೂಡಲೇ ಸಮಾಧಾನ ಚಿತ್ತದಿಂದ ಇರುವನು. ಸದಾಚಾರ ಸದ್ವರ್ತನೆಯ ಈತನು ಪೂರ್ವ ದಿಕ್ಕಿನ ಪ್ರದೇಶಗಳಲ್ಲಿ ವ್ಯಾಪಾರವನ್ನು ಮಾಡುವದರಿಂದ ವಿಶೇಷ ಧನಲಾಭಗಳನ್ನು ಪಡೆಯುತ್ತಾನೆ. ಅಂಗೈಯಲ್ಲಿ ಶಕ್ತಿ ಗೌರವ ರೇಖೆಯುಳ್ಳವನು. ಚಪಲ ಚಿತ್ತ ಸ್ವಭಾವದವನಾದ ಈತನು ಬೇಗನೇ ಭಯ ಗ್ರಸ್ಥನಾಗುವ ಗುಣದವನು. ಈ ಜಾತಕನು ಮಂಗಳವಾರ ಯಾವದೇ ಕಾರ್ಯ ಕೈಕೊಂಡರೂ ನೆರವೇರುವದು.

Join Our Whatsapp Group

 ಕಂಟಕಾದಿಗಳು : ಜನಿಸಿದ ೧ ನೇ ವರ್ಷದಲ್ಲಿ ಅಂಗರೋಗ, ೭ ನೇ ವರ್ಷದಲ್ಲಿ ಜ್ವರಪೀಡೆ, ೧೬-೧೭ ನೇ ವರ್ಷದಲ್ಲಿ ವಿಷ ಪ್ರಯೋಗ ಇಲ್ಲವೆ ವೃಣಬಾಧೆ, ೨-೩-೧೨-೧೮ ನೇ ವರ್ಷಗಳಲ್ಲಿ ನೀರಿನ ಗಂಡಾಂತರವು. ೩೨ ಅಥವಾ ೫೦ ನೇ ವರ್ಷದಲ್ಲಿ ಕಳ್ಳರಿಂದ ಹಾನಿ. ೬೪ ನೇ ವರ್ಷ ದೇಹಾರೋಗ್ಯದಲ್ಲಿ ಕಿರಿಕಿರಿ. ಈ ಎಲ್ಲ ಕಂಟಕಗಳು ಕಳೆದರೆ ಈ ಜಾತಕನಿಗೆ ೭೫ ವರ್ಷ ೨ ತಿಂಗಳು – ೧೫ ಘಳಿಗೆ ಪರಮಾಯುಷ್ಯವು.

೨) ವೃಷಭ ರಾಶಿಯ ಫಲ ವಿಚಾರ : ಈ ರಾಶಿಗೆ ಶುಕ್ರನು ಸ್ವಾಮಿಯು, ಸ್ಥಿರ

ಸಂಜ್ಞೆಯುಳ್ಳದ್ದು. ದಕ್ಷಿಣ ದಿಕ್ಕಿನದು. ಶಾಂತ ಸ್ವಭಾವದ ಈ ರಾಶಿಯು ವಾತ ಪ್ರಕೃತಿಯನ್ನು ಹೊಂದಿದ್ದು ರಾತ್ರಿ ಕಾಲದಲ್ಲಿ ಬಲಯುತವಾಗಿದೆ. ಇದು ವೈಶ್ಯವರ್ಣ: ಈ ಜಾತಕನು ತಂದೆ ತಾಯಿಗಳಲ್ಲಿಯೂ, ಗುರು ಹಿರಿಯರಲ್ಲಿಯೂ ಭಯಭಕ್ತಿಯುಳ್ಳವನು. ಸರಕಾರಿ ಅಧಿಕಾರಿಗಳ ಮನ್ನಣೆಯನ್ನು, ಅಭಿಮಾನ-ಪ್ರೇಮವನ್ನು ಗಳಿಸಿಕೊಂಡು ಭೋಗ ಭಾಗ್ಯ ಸುಖಗಳನ್ನು ಅನುಭವಿಸುವನು, ತ್ಯಾಗ ಬುದ್ದಿಯವನು, ಸದಾ ಪವಿತ್ರ ಮನಸ್ಕನಾಗಿರುವನು,ಚತುರನು, ಬುದ್ದಿವಂತನು, ಪ್ರತಿಷ್ಟಿತರಾದ ಇಬ್ಬರು ಸದೃಹಸ್ಥರ ಇಲ್ಲವೆ ಸರಕಾರದಲ್ಲಿ ದೊಡ್ಡ ಅಧಿಕಾರವುಳ್ಳ ವ್ಯಕ್ತಿಗಳ ಪ್ರೀತಿ- ಪ್ರೇಮವನ್ನು ಗಳಿಸುವನು. ಕೈಕೊಳ್ಳುವ ಕಾರ್ಯದಲ್ಲಿ ಜಯಶಾಲಿಯು, ಸಂತಾನ ಸಂಪತ್ತನ್ನೂ ಹೊಂದಿದವನು. ನಿರಂತರ ಸ್ತ್ರೀ ವ್ಯಾಮೋಹಿಯಾದ ಈತನು ಅಕಸ್ಮಾತ ಗರ್ವದಿಂದ ಕೆಡುವಡೂ ಇದೆ. ಯಾವಾಗಲೂ ಸಂತೋಷ ಚಿತ್ತದಿಂದ ಸಮಯವನ್ನು ಸಾಗಿಸುವನು. ನಡ ಇಲ್ಲವೆ ಕಾಲುಗಳಲ್ಲಿ ಕಪ್ಪು ವರ್ಣದ ಕಲೆಗಳನ್ನು ಹೊಂದಿರುವವನು ಈತನಿಗೆ ಮೂರು ಕಂಟಕಗಳು ಅವುಗಳಲ್ಲಿ ಒಂದು ಸರಕಾರಿ ಕೆಲಸದಲ್ಲಿಯದು. ವಿಶೇಷ ಶುಭ್ರ ಬಿಳಿಯ ಬಟ್ಟೆಯನ್ನು ಧರಿಸಿಕೊಳ್ಳುವಲ್ಲಿ ಪ್ರೇಮವುಳ್ಳವನು. ದಕ್ಷಿಣ ದಿಕ್ಕಿನ ಪ್ರದೇಶಗಳಲ್ಲಿ ವ್ಯಾಪಾರ ಮಾಡಿದರೆ ಈತನಿಗೆ ವಿಶೇಷ ಲಾಭವುಂಟು. ಆಗಾಗ್ಗೆ ಕಣ್ಣು-ಕುತ್ತಿಗೆ ಹೊಟ್ಟೆಯ ಬಗೆಗಿನ ರೋಗಗಳಿಂದ ತೊಂದರೆ, ಈತನ ಬೆನ್ನು ಇಲ್ಲವೆ ಮುಖದ ಮೇಲೆ ಕಪ್ಪು ವರ್ಣದ ಮಚ್ಚೆ ಇರುವದು. ಸುಖ ದುಃಖಗಳನ್ನು ಸಮಾನ ದೃಷ್ಟಿಯಿಂದ ಸಹಿಸಿ ಕೊಳ್ಳುವನು. ಹೆಣ್ಣು ಸಂತಾನ ಹೆಚ್ಚಿಗೆಯುಳ್ಳವನು, ಸ್ವಯಮಾರ್ಜಿತ ಧನ ಧಾನ್ಯ, ಆಸ್ತಿ ಪಾಸ್ತಿಗಳನ್ನು ಹೊಂದಿದವನು. ಬಾಲ್ಯದಲ್ಲಿ ಅಲ್ಪ ಸುಖವುಳ್ಳವನು, ಕಷ್ಟ ಸಹಿಷ್ಣುವೂ ಆಗಿರುವನು. ಪ್ರಾಯ, ವೃದ್ಧಾಪ್ಯದಲ್ಲಿ ಹೆಚ್ಚಾಗಿ ಸುಖಭೋಗಗಳನ್ನೆಲ್ಲ ಅನುಭವಿಸುವನು. ಈ ಜಾತಕನು ಶುಕ್ರವಾರ ಯಾವ ಕಾರ್ಯಮಾಡಿದರೂ ಯಶಸ್ವಿಯಾಗುವದು.

 ಕಂಟಕಾದಿಗಳು : ಹುಟ್ಟಿದ ೧ ನೇ ವರ್ಷದಲ್ಲಿ ಏನಕೇನ ಪ್ರಕಾರದಿಂದ ಕಾಡಾಟವು.

೩ ನೇ ವರ್ಷದಲ್ಲಿ ಅಗ್ನಿ ಭಯ ೬ನೇ ವರ್ಷದಲ್ಲಿ ಶಸ್ತ್ರಾಸ್ತ್ರ ಭಯ ಇಲ್ಲವೆ ಆಯುಧ ಭಯ, ೮ ನೇ ವರ್ಷದಲ್ಲಿ ಪ್ರಾಣಿಗಳಿಂದ ಭಯ. ೧೦ ನೇ ವರ್ಷದಲ್ಲಿ ವೃಣಬಾಧೆ. ೧೨ ನೇ ವರ್ಷದಲ್ಲಿ ಗಿಡ ಇಲ್ಲವೆ ಎತ್ತರದಿಂದ ಬೀಳುವಿಕೆ. ೧೬ನೇ ವರ್ಷದಲ್ಲಿ ವಿಷಜಂತುಗಳ ಭಯ. ೧೯ ನೇ ವರ್ಷದಲ್ಲಿ ದೇಹಕ್ಕೆ ಆಲಸ್ಯ ಪೀಡೆ, ೨೫ ರಲ್ಲಿ ನೀರಿನ ಗಂಡಾಂತರ ೩೦-೩೩ ನೇ ವರ್ಷದಲ್ಲಿ ಸೊಂಟ ಇಲ್ಲವೆ ಬೆನ್ನು ಹುರಿಯ ನೋವು, ೩.೬-೫೨-೫೩ ರಲ್ಲಿ ಅನೇಕ ವಿಧ ಕಂಟಕಗಳು. ಇವೆಲ್ಲವುಗಳನ್ನು ಕಳೆದುಳಿದರೆ ಈ ಜಾತಕನಿಗೆ ೬೦ ವರ್ಷಗಳ ಆಯುಷ್ಯವು.

೩) ಮಿಥುನ ರಾಶಿಯ ಫಲವಿಚಾರವು : ಈ ಮಿಥುನ ರಾಶಿಗೆ ಸ್ವಾಮಿಯು ಬುಧನು. ದ್ವಿ-ಸ್ವಭಾವ ಸಂಜ್ಞೆಯುಳ್ಳವನು. ಈತನ ದಿಕ್ಕು ಪಶ್ಚಿಮ. ಹಗಲು ಬಲವಂತನಾಗಿರುವನು. ಈ ರಾಶಿಯಲ್ಲಿ ಹುಟ್ಟಿದ ಜಾತಕನು ಶೀಘ್ರ ಕೋಪಿಯು, ಪಿತ್ತ ಪ್ರಕೃತಿಯುಳ್ಳವನು, ಶೂದ್ರವರ್ಣದ ಸ್ವಭಾವದವನು, ವಿಶೇಷ ಸುಳ್ಳು ಹೇಳುವವನು, ದಯವಂತನಾದ ಈತನು ಗುಣವಂತನೂ, ದೊಡ್ಡ ಕುಟುಂಬವುಳ್ಳವನೂ,

ಸತತೋದ್ಯೋಗಿಯೂ, ಗುರು ಹಿರಿಯರ ಕೃಪೆಗೆ ಪಾತ್ರನಾಗಿ ನಡೆಯುವವನೂ, ಅನೇಕ ಶಾಸ್ತ್ರಗಳನ್ನು ಬಲ್ಲಿದವನೂ, ಕುಶಲ ಮತಿಯೂ, ಸುಂದರ ಅಂಗಸೌಷ್ಟವವುಳ್ಳವನೂ, ಸರ್ವರ ಪ್ರೀತಿಗೆ ಪಾತ್ರನಾಗುವಂತೆ ಚತುರತನದಿಂದ ಹಾಸ್ಯ ಪ್ರಜ್ಞೆಯ ಮಾತುಕತೆಗಳನ್ನಾಡುವವನೂ, ಸಂಗೀತ- ನಾಟ್ಯಕಲೆಗಳಲ್ಲಿ ಅಭಿರುಚಿಯುಳ್ಳವನು, ಉದ್ದವಾದ ಮೂಗುಳ್ಳವನೂ ಆಗುತ್ತಾನೆ. ಕೆಂಪುವರ್ಣ,

ಉದ್ದವಾದ ದೇಹವುಳ್ಳವನು, ವಿಶೇಷವಾಗಿ ಉಪ್ಪನ್ನು ಸೇವಿಸುವಲ್ಲಿ ಪ್ರೇಮ ವ್ಯಕ್ತ ಮಾಡುವವನು, ಆಗಾಗ್ಗೆ ಪರಸ್ತ್ರೀಲೋಲುಪನು, ಬಾಲ್ಯದಲ್ಲಿ ವಿಶೇಷ ಸುಖ ಅನುಭೋಗಿಸುತ್ತಿದ್ದರೆ ಪ್ರಾಯ ಕಾಲದಲ್ಲಿ ಮಧ್ಯಮ ಸುಖವು, ವೃದ್ಧಾಪ್ಯದಲ್ಲಿ ಕಷ್ಟದಲ್ಲಿ ಕಾಲ ಕಳೆಯುವನು. ಇಬ್ಬರು ಸ್ತ್ರೀಯರಿಂದ ತೊಂದರೆಯುಂಟು. ಅಲ್ಪ ಸಂತಾನ ಭಾಗ್ಯವುಳ್ಳವನು. ವೃದ್ಧಾಪ್ಯ ಕಾಲದಲ್ಲಿ ಕಜ್ಜಿ-ಹುರುಕು ಮೊದಲಾದ ಚರ್ಮರೋಗದಿಂದ ಬಳಲುವನು. ಯೌವನ ಕಾಲದಲ್ಲಿ ಸ್ತ್ರೀಲೋಲುಪನಾಗಿ ಉಷ್ಣರೋಗದ ಭೀತಿಯಿದೆ. ಅನೇಕ ವರ್ಣದ ಬಹುಬೆಲೆಯುಳ್ಳ ಪೋಷಾಕು ಧರಿಸುವಲ್ಲಿ ಪ್ರೇಮವುಳ್ಳವನು. ಈ ಜಾತಕನು ಬುಧವಾರ ಯಾವುದೇ ಕಾರ್ಯ ಕೈಕೊಂಡರೂ ಸಿದ್ದಿಸುವದು.

 ಕಂಟಕಾದಿಗಳು : ಈ ಜಾತಕನು ಹುಟ್ಟಿದ ೬ ನೇ ತಿಂಗಳಲ್ಲಿ ದೇಹಕ್ಕೆ ಪೀಡೆಯು ೫

ನೇ ವರ್ಷದಲ್ಲಿ ಜ್ವರಬಾಧೆ, ೬ನೇ ವರ್ಷದಲ್ಲಿ ಘಾತ; ದೇಹಕ್ಕೆ ಆಘಾತ, ೧೦-೧೧-೨೪ ನೇ ವರ್ಷದಲ್ಲಿ ದೇಹಾಲಸ್ಯದಿಂದ ಪೀಡೆಯು. ೧೮ ನೇ ವರ್ಷದಲ್ಲಿ ಕಿವಿ ನೋವಿನ ಪೀಡೆ, ೨೦ ನೇ ವರ್ಷದಲ್ಲಿ ಮಹಾರೋಗ ಪೀಡೆಯ ಕಂಟಕವು, ೨೬ನೇ ವರ್ಷದಲ್ಲಿ ದೇಹಾಲಸ್ಯದಿಂದ ಕಿರಿಕಿರಿ, ೩೬ನೇ ವರ್ಷದಲ್ಲಿ ಮೃತ್ಯುಕಂಟಕವಿದ್ದರೂ ಪಾರಾಗುವನು. ೫೩-೬೨ ನೇ ವರ್ಷದಲ್ಲಿ ಸಾಧಾರಣ ರೋಗ ಭಯ-ಇವುಗಳನ್ನೆಲ್ಲ ಕಳೆದುಳಿದರೆ ಈ ಜಾತಕನಿಗೆ ೮೫ ವರ್ಷಗಳ ಆಯುಷ್ಯವು.