ಮನೆ ಅಪರಾಧ ಮಂಡ್ಯ|ಸರಗಳ್ಳರು,ಮನೆಗಳ್ಳರ ಸೆರೆ: ಒಟ್ಟು ₹42 ಲಕ್ಷ ಮೌಲ್ಯದ ಮಾಲುಗಳ ವಶ

ಮಂಡ್ಯ|ಸರಗಳ್ಳರು,ಮನೆಗಳ್ಳರ ಸೆರೆ: ಒಟ್ಟು ₹42 ಲಕ್ಷ ಮೌಲ್ಯದ ಮಾಲುಗಳ ವಶ

0

ಮಂಡ್ಯ:ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸರಗಳ್ಳತನ ಹಾಗೂ ಮನೆಗಳ್ಳತನ ಮಾಡಿದ ಖದೀಮರನ್ನು ಸೆರೆ ಹಿಡಿಯುವಲ್ಲಿ ಹಲಗೂರು ಹಾಗೂ ಕೆ.ಎಂ.ದೊಡ್ಡಿ ಪೊಲೀಸ್‌ ಠಾಣೆಗಳ ಪೊಲೀಸರು ಯಶಸ್ವಿಯಾಗಿದ್ದಾರೆಂದು ಎಂದು ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

Join Our Whatsapp Group


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2 ಪ್ರಕರಣಗಳಲ್ಲಿ ಬಂಧಿತ ಆರೋಪಿಗಳಿಂದ ಒಟ್ಟು 42 ಲಕ್ಷ ರೂ.ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಹಲಗೂರು ಪೊಲೀಸರಿಂದ ಮನೆ ಕನ್ನ ಕಳವು ಕಳ್ಳನ ಬಂಧನ


ಕಳೆದ ಆಗಸ್ಟ್ 22, 2024ರಲ್ಲಿ ಮಳವಳ್ಳಿ ತಾಲ್ಲೂಕು ಅಗಸನಪುರ ಗ್ರಾಮದ ಚಿಕ್ಕಬಸವಣ್ಣ ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಹೊಡೆದು ಒಳಕ್ಕೆ ನುಗ್ಗಿ, ಮನೆಯ ಬೀರುವಿನಲ್ಲಿದ್ದ ಒಟ್ಟು 45 ಗ್ರಾಂ ಚಿನ್ನದ ಆಭರಣಗಳು (ಒಟ್ಟು ಬೆಲೆ ₹2,02,500) ಹಾಗೂ 5 ಕೆ.ಜಿ. 403 ಗ್ರಾಂ ಬೆಳ್ಳಿ ಆಭರಣಗಳು ಹಾಗೂ 35,000 ನಗದು (ಒಟ್ಟು ಮೌಲ್ಯ ₹4.64ಲಕ್ಷ) ಕಳವು ಮಾಡಿದ್ದ ಆರೋಪಿ ಮೈಸೂರಿನ ವಿದ್ಯಾರಣ್ಯಪುರದ ಅನಂತ ಆಲಿಯಾಸ್ ಗುರುವ ಆಲಿಯಾಸ್ ಮೆಡ್ಡ ಎಂಬಾತನನ್ನು ಹಲಗೂರು ಪೊಲೀಸರು ಬಂಧಿಸಿದ್ದಾರೆ


ಈ ಆರೋಪಿಯು ತನ್ನ ಸಹಚರನೊಂದಿಗೆ ಸೇರಿ 5 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ – 3, ಬೆಳಕವಾಡಿ ಠಾಣಾ ವ್ಯಾಪ್ತಿಯಲ್ಲಿ -1, ಕಿರುಗಾವಲು ಠಾಣಾ ವ್ಯಾಪ್ತಿಯಲ್ಲಿ -1 ಪ್ರಕರಣವನ್ನು ಭೇದಿಸಲಾಗಿದೆ.


ಈ ಪ್ರಕರಣದ ಪತ್ತೆಗಾಗಿ ಮಂಡ್ಯ ಜಿಲ್ಲಾ ಅಪರ ಪೋಲೀಸ್ ಅಧೀಕ್ಷಕರಾದ ತಿಮ್ಮಯ್ಯ,ಎಸ್.ಇ. ಗಂಗಾಧರಸ್ವಾಮಿ, ಮಳವಳ್ಳಿ ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕವಿ.ಕೃಷ್ಣಪ್ಪ ಮಾರ್ಗದರ್ಶನದಲ್ಲಿ ಹಾಗೂ ಹಲಗೂರು ವೃತ್ತ ನಿರೀಕ್ಷಕ ಶ್ರೀಧರ್ ಬಿ.ಎಸ್ ನೇತೃತ್ವದಲ್ಲಿ ಕಿರುಗಾವಲು ಪೊಲೀಸ್‌ ಠಾಣಾ ಪಿಎಸ್‌ಐ ರವಿಕುಮಾ‌ರ್, ಹಲಗೂರು ಪೊಲೀಸ್ ಠಾಣಾ ಪಿಎಸ್‌ಐ ಮಹೇಂದ್ರ ಹಾಗೂ ಸಿಬ್ಬಂದಿಯವರು ಸಿ.ಹೆಚ್.ಸಿ ಸಿಬ್ಬಂದಿಯವರಾದ ರಿಯಾಜ್ ಪಾಷ, ಪ್ರಭುಸ್ವಾಮಿ, ನಾಗೇಂದ್ರ ಕೃಷ್ಣಮೂರ್ತಿ, ರವಿಕಿರಣ್, ಲೋಕೇಶ್, ಸಿಪಿಸಿಯವರಾದ ಸಿದ್ದರಾಜು,ಶ್ರೀನಿವಾಸ್‌, ಮಧುಕಿರಣ್, ಶಿವಕುಮಾರ್ ಮಹದೇವಸ್ವಾಮಿ ರವರನ್ನೊಳಗೊಂಡ ತಂಡವನ್ನು ರಚನೆ ಮಾಡಲಾಗಿತ್ತು
ಆರೋಪಿಯಿಂದ ಒಟ್ಟು 301 ಗ್ರಾಂ. ತೂಕದ ಚಿನ್ನದ ಒಡವೆಗಳು (ಒಟ್ಟು ಮೌಲ್ಯ ₹22,37,634 ( ಇಪ್ಪತ್ತೇರಡು ಲಕ್ಷದ ಮುವತ್ತೇಳು ಸಾವಿರದ ಆರುನೂರ ಮುವತ್ತ ನಾಲ್ಕು ರೂಪಾಯಿಗಳು) ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ಬೈಕ್‌ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.


ಕೆ.ಎಂ.ದೊಡ್ಡಿ ಪೊಲೀಸರಿಂದ “ಸರಗಳ್ಳತನದ ಆರೋಪಿಗಳ ಬಂಧನ”


ಕಳೆದ ಡಿ.31,ರಂದು ಮದ್ದೂರು ತಾಲ್ಲೂಕಿನ ಕುರಿಕೆಂಪನದೊಡ್ಡಿ ಗ್ರಾಮದ ಸವಿತಾ ಕೋಂ ಮಾದೇಗೌಡ ಅವರು ತಮ್ಮ ಟೀ ಅಂಗಡಿಯಲ್ಲಿದ್ದಾಗ ಇಬ್ಬರು ಅಪರಿಚಿತರು ಬೈಕ್‌ನಲ್ಲಿ ಬಂದು ಟೀ ಕೇಳುವ ನೆಪದಲ್ಲಿ ಸವಿತಾ ರವರ ಕತ್ತಿನಲ್ಲಿದ್ದ 26 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದರು. ಈ ಬಗ್ಗೆ ಕೆ.ಎಂ.ದೊಡ್ಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಈ ಪ್ರಕರಣದ ಆರೋಪಿಗಳ ಪತ್ತೆಯ ಬಗ್ಗೆ ಮಂಡ್ಯ ಜಿಲ್ಲಾ ಅಪರ ಪೋಲೀಸ್‌ ಅಧೀಕ್ಷಕರಾದ ಸಿ.ಇ ತಿಮ್ಮಯ್ಯ, ಎಸ್.ಇ. ಗಂಗಾಧರಸ್ವಾಮಿ, ಮಳವಳ್ಳಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ವಿ ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಕೆ.ಎಂ.ದೊಡ್ಡಿ ಠಾಣೆಯ ಅರಕ್ಷಕ ನಿರೀಕ್ಷಕ ಎಸ್ ಆನಂದ್, ಪಿಎಸ್‌ಐ ದೇವರಾಜು ಮತ್ತು ಹೆಡ್ ಕಾನ್ಸ್‌ಟೇಬಲ್‌ಗಳಾದ ನಟರಾಜು, ಮಹೇಶ್, ರಾಜಶೇಖ‌ರ್, ಪೊಲೀಸ್‌ ಕಾನ್ಸ್‌ಟೇಬಲ್‌ಗಳಾದ ವಿಠಲ್ ಜೆ ಕರಿಗಾರ, ಅರುಣ್‌ ಹೆಚ್ ಸಿ, ಸುಬ್ರಮಣಿ, ಚೇತನ, ರವಿಕಿರಣ್, ಲೊಕೇಶ್ ಮತ್ತು ವಾಸುದೇ ಅವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು


ಈ ತಂಡವು ಪತ್ತೆ ಕಾರ್ಯ ಕೈಗೊಂಡು ಆರೋಪಿತರಾದ ಬೆಂಗಳೂರಿನಲ್ಲಿ ಬಾರ್ ನಲ್ಲಿ ಸಪ್ರೈಯರ್ ಕೆಲಸ ಮಾಡುತ್ತಿದ್ದ ಮಂಡ್ಯ ತಾಲ್ಲೂಕಿನ ಮುತ್ತೇಗೆರೆ ಗ್ರಾಮದವರಾದ ಸುದೀಪ್ ಹೆಚ್.ಪಿ. ಬಿನ್ ಪುಟ್ಟಸ್ವಾಮಿಗೌಡ ( 21ವರ್ಷ ಬೆಂಗಳೂರಿನಲ್ಲಿ ಆಟೋ ಡ್ರೈವರ್ ಹೆಚ್.ಆರ್. ಚೇತನ ಬಿನ್ ರಾಮಲಿಂಗೇಗೌಡ, ವ್ಯವಸಾಯ ಮಾಡಿಕೊಂಡಿದ್ದ ದರ್ಶನ್ ಹೆಚ್ ಎಸ್ ಬಿನ್ ಸಣ್ಣನಿಂಗೇಗೌಡ, ಕಿರಣ್ ಕುಮಾರ್. ಹೆಚ್ ಸಿ. ಬಿನ್ ಲೇಟ್ ಚಂದ್ರಶೇಖ‌ರ್ ಹಾಗೂ ಎಂ.ಆರ್ ಚೇತನ್ ಬಿನ್ ರಮೇಶ್ ಎಂಬುವರನ್ನು ಬಂಧಿಸಲಾಗಿದೆ.


ಈ ಆರೋಪಿಗಳು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯ ಪ್ರಕರಣವು ಸೇರಿದಂತೆ ಮಂಡ್ಯ ಜಿಲ್ಲೆಯ ನಾಗಮಂಗಲ ಗ್ರಾಮಾಂತರ-02. ಮಂಡ್ಯ ಗ್ರಾಮಾಂತರ-02. ಶ್ರೀರಂಗಪಟ್ಟಣ ಗ್ರಾಮಾಂತರ-01, ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಪ್ರಕರಣದಲ್ಲಿ ಭಾಗಿಯಾಗಿದ್ದರು.


ಈ ಆರೋಪಿಗಳಿಂದ ಒಟ್ಟು ₹22,12 ಲಕ್ಷ ಮೌಲ್ಯದ 278 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರಗಳು, 20 ಗ್ರಾಂ ತೂಕದ ಬೆಳ್ಳಿಯ ಕರಡಿಗೆಯನ್ನು ವಶಕ್ಕೆ ಪಡೆಯಲಾಗಿದೆ ಹಾಗೂ ಕೃತ್ಯಕ್ಕೆ ಉಪಯೋಗಿಸಿದ 2 ಮೋಟಾ‌ರ್ ಸೈಕಲ್‌ಗಳನ್ನು ವಶಪಡಿಸಿ ಕೊಳ್ಳಲಾಗಿದೆ.


ಹಲಗೂರು ಹಾಗೂ ಕೆ.ಎಂ.ದೊಡ್ಡಿ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಯಶಸ್ವಿ ಕಾರ್ಯಾದರಣೆಯಲ್ಲಿ ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿಯವರು ಶ್ಲಾಘಿಸಿ, ಪ್ರಶಂಸಿಸಿದ್ದಾರೆ.