ನಕಾಸ್ (IMIS) – ಎಲ್ಲಾ ಬಗೆಯ ಕೆಮ್ಮು, ದಮ್ಮು ಎದೆಯುರಿ ಮುಂತಾದವುಗಳಿಗೆ ಉಪಯುಕ್ತ (ಇಂಡಿಯನ್ ಮೆಡಿಸಿನ್ ಇಂಡಸ್ಟ್ರೀಸ್, ವಿಜಯವಾಡ].
ನಗರಾದಿ ತೈಲಂ – ತಲೆ ಮತ್ತು ಕುತ್ತಿಗೆಯ ರೋಗಗಳ ಚಿಕಿತ್ಸೆಗೆ ಉಪಯುಕ್ತ ದಿ ಆರ್ಯ ವೈದ್ಯಶಾಲ, ಕೊಟ್ಟಕ್ಕಲ್, ಕೇರಳ].
ನವಯಾಸ ಚೂರ್ಣ – ರಕ್ತಹೀನತೆ, ಕಾಮಾಲೆ, ಮಧುಮೇಹ ಮತ್ತು ತೊನ್ನು ರೋಗದ ಚಿಕಿತ್ಸೆಗೆ ಉಪಯುಕ್ತ [ದಿ ಆರ್ಯ ವೈದ್ಯಶಾಲ, ಕೊಟ್ಟಕ್ಕಲ್, ಕೇರಳ].
ನವಯಾಸ ಲೋಹ – ರಕ್ತಹೀನತೆ, ನಿಶ್ಯಕ್ತಿ, ಅಜೀರ್ಣ, ಮೊಳೆರೋಗ, ಜಂತುಹುಳು, ಹೃದಯ ಸಂಬಂಧದ ಕಾಯಿಲೆಗಳ ಚಿಕಿತ್ಸೆಗೆ ಉಪಯುಕ್ತ [ಬೈದ್ಯನಾಥ್: ಶ್ರೀ ಶ್ರೀ ಆಯುರ್ವೇದ, ಬೆಂಗಳೂರು].
ನವಶ್ವಗಂಧ – ವಾಯುನೋವು, ಸ್ನಾಯುಗಳ ನೋವು, ನಿಶ್ಯಕ್ತಿ, ಗೌಟ್, ಸ್ಪಾಡಿಲೈಟಿಸ್ ಮುಂತಾದ ಕಾಯಿಲೆಗಳಿಗೆ ಉಪಯುಕ್ತ [ಸ್ವದೇಶಿ, ಉಡುಪಿ].
ನಳ್ ಪಾಮರಾದಿ ತೈಲಂ – ಚರ್ಮದ ಕಾಯಿಲೆ, ಇಸಬು, ಬಣ್ಣ ಕಳೆದುಕೊಂಡ ಚರ್ಮ, ಪ್ರಸವಾ ನಂತರದ ಆರೈಕೆ ಮತ್ತು ಶಿಶು ಆರೈಕೆಗೆ ಉಪಯುಕ್ತ [ದಿ ಆರ್ಯ ವೈದ್ಯಶಾಲ, ಕೊಟ್ಟಕ್ಕಲ್, ಕೇರಳ].
ನಳದಾದಿ ಘೃತಂ – ಅರಿವಿನ ಕೊರತೆಯ ಕಾಯಿಲೆ, ತಿಳುವಳಿಕೆ ಮತ್ತು ಬುದ್ದಿ ಮತ್ತೆಯನ್ನು ಉತ್ತಮಪಡಿಸಲು ಉಪಯುಕ್ತ [ದಿ ಆರ್ಯ ವೈದ್ಯಶಾಲ, ಕೊಟ್ಟಕ್ಕಲ್, ಕೇರಳ].
ನಾರಾಯಣ ಚೂರ್ಣ – ಭೇದಿಕಾರಕ, ಜೀರ್ಣಕಾರಕ, ಕಾಮಾಲೆ, ರಕ್ತಹೀನತೆ, ಮೊಳೆರೋಗ ಮತ್ತು ಭಗಂದರ (Fistula) ಚಿಕಿತ್ಸೆಗೆ ಉಪಯುಕ್ತ [ಬೈದ್ಯನಾಥ್].
ನಿಂಬಾದಿ ಕಷಾಯಂ – ಬಾವು, ಚರ್ಮದ ಉರಿಯೂತ ಮತ್ತು ಮೊಡವೆಯ ಚಿಕಿತ್ಸೆಗೆ ಉಪಯುಕ್ತ [ದಿ ಆರ್ಯ ವೈದ್ಯಶಾಲ, ಕೊಟ್ಟಕ್ಕಲ್, ಕೇರಳ].
ನಿರ್ಗುಂಡ್ಯಾದಿ ಗುಲಿಕ – ಮೂರ್ಛರೋಗ, ವಾಕರಿಕೆ, ವಾಂತಿ ಮತ್ತು ತಲೆ ನೋವಿನ ಚಿಕಿತ್ಸೆಗೆ ಉಪಯುಕ್ತ. ದೇಹದಲ್ಲಿನ ಕಲ್ಮಷವನ್ನು ನಿರ್ಮೂಲನೆ ಮಾಡುವ ಗುಣವಿದೆ [ದಿ ಆರ್ಯ ವೈದ್ಯಶಾಲ, ಕೊಟ್ಟಕ್ಕಲ್, ಕೇರಳ].
ನಿರ್ಗುಂಡಿಯಾದಿ ಧೃತಂ – ಮೂರ್ಛಿ ರೋಗ, ವಾಕರಿಕೆ, ವಾಂತಿ, ತಲೆನೋವು ಚಿಕಿತ್ಸೆಗೆ ಮತ್ತು ದೇಹದಲ್ಲಿ ಸಂಚಿತವಾದ ವಿಷಕಾರಕ ವಸ್ತುವನ್ನು ತೆಗೆದುಹಾಕಲು ಉಪಯುಕ್ತ | ಆರ್ಯ ವೈದ್ಯಶಾಲ, ಕೊಟ್ಟಕ್ಕಲ್, ಕೇರಳ].
ನಿತ್ಯಂ ಚೂರ್ಣ ಮತ್ತು ಮಾತ್ರೆಗಳು – ಮಲಬದ್ಧತೆಗೆ ಉಪಯುಕ್ತ ಔಷಧಿ [ಝಂಡು].
ನಿತ್ಯಾನಂದ್ ರಸ್ (ಮಾತ್ರೆಗಳು) – ಟಾನಿಕ್ , ಗರ್ಭಕೋಶದ ಫೈಬ್ರಾಯ್ಡ್ ನಿವಾರಣೆಗೆ ಉಪಯುಕ್ತ ಗಂಡಾಮಾಲೆ ಮತ್ತು ಆನೆಕಾಲು ರೋಗದ ಚಿಕಿತ್ಸೆಗೆ ಉಪಯುಕ್ತ [ಬೈದ್ಯನಾಥ್ ]
ನೀಲ — ಕೇಶವರ್ದಕ ತೈಲ,ಕೂದಲು ಚೆನ್ನಾಗಿ ಬೆಳವಣಿಗೆಯಾಗುತ್ತದೆ. ಬಾಲನೀರಿ ಗುಣವಾಗುತ್ತದೆ [ದಿ ಸದ್ವೆ ದ್ಯ ಶಾಲಾ, ಪ್ರೈ.ಲಿ., ನಂಜನಗೂಡು],
ನೀರೂರ್ಯಾ ಗುಲಿಕೆ – ಮಧುಮೇಹ ಮತ್ತು ಬಹುಮೂತ್ರ ರೋಗದ ಚಿಕಿತ್ಸೆಗೆ ಉಪಯುಕ್ತ [ದಿ ಆರ್ಯ ವೈದ್ಯಶಾಲ, ಕೊಟ್ಟಕ್ಕಲ್, ಕೇರಳ].
ಪಂಚತಿಕ್ಕ ಘೃತ ಗುಗ್ಗಲು – ಕುಷ್ಠರೋಗ, ವಾತವ್ಯಾಧಿ, ಅರ್ಬುದ, ಭಗಂದರ, ಮೊಳೆರೋಗ ಮತ್ತು ಸೈನುಸೈಟಿಸ್ (ಪೀನಸ) ಚಿಕಿತ್ಸೆಗೆ ಉಪಯುಕ್ತ | ಶ್ರೀ ದೂತ ಪಾಪೇಶ್ವರ್, ಮಹಾರಾಷ್ಟ್ರ),
ಪಂಚಾರಿಷ್ಟ – ಉತ್ತಮ ಜೀರ್ಣಕಾರಕ ಟಾನಿಕ್, ಹೊಟ್ಟೆಯಲ್ಲಿ ಆಮ್ಲ, ಅಜೀರ್ಣ ಮತ್ತು ಹೊಟ್ಟೆಯುಬ್ಬರವನ್ನು ನಿವಾವಣೆ ಮಾಡುತ್ತದೆ [ಝಂಡು].
ಪಟೋಲಾದಿ ಧೃತಂ – ಕಿವಿ, ಮೂಗು, ಗಂಟಲಿಗೆ (E.N.T) ಸಂಬಂಧಿಸಿದ ಕಾಯಿಲೆಗಳ ಚಿಕಿತ್ಸೆಗೆ, ಕಣ್ಣಿನ ಪೊರೆ ಚಿಕಿತ್ಸೆಗೆ, ರಾತ್ರಿ ಕುರುಡು ಮತ್ತು ದೃಷ್ಟಿ ದೋಷವನ್ನು ಸರಿಪಡಿಸಲು ಉಪಯುಕ್ತ [ದಿ ಆರ್ಯ ವೈದ್ಯಶಾಲ, ಕೊಟ್ಟಕ್ಕಲ್, ಕೇರಳ].
ಪತೃಕ್ಷ ಧಾತ್ರಿಯಾದಿ ಕಷಾಯಂ – ತಲೆನೋವು, ಹಲ್ಲುನೋವು, ಕಣ್ಣಿನ ರೋಗಗಳ ಹಾಗೂ ದೃಷ್ಟಿ ದೋಷ ಮತ್ತು ರಾತ್ರಿ ಕುರುಡಿನ ಚಿಕಿತ್ಸೆಗೆ ಉಪಯುಕ್ತ [ದಿ ಆರ್ಯ ವೈದ್ಯಶಾಲ, ಕೊಟ್ಟಕ್ಕಲ್, ಕೇರಳ].
ಪರಂತ್ಯಾದಿ ಕೇರ ತೈಲಂ – ಹಾನಿಕಾರಕ ವಸ್ತುಗಳಿಂದ ಉಂಟಾದ ಚರ್ಮದ ಕಾಯಿಲೆ, ಬಹಳ ಕಾಲದ ಹುಣ್ಣು ಮತ್ತು ಹಾಸಿಗೆ ಹುಣ್ಣು ಚಿಕಿತ್ಸೆಗೆ ಉಪಯುಕ್ತ [ದಿ ಆರ್ಯ ವೈದ್ಯಶಾಲ, ಕೊಟ್ಟಿಕ್ಕಲ್, ಕೇರಳ].
ಪಿಲ್ ಫ್ರೀ – ಮೊಳೆರೋಗ ಮತ್ತು ಭಗಂದರ ಚಿಕಿತ್ಸೆಗೆ ಉಪಯುಕ್ತ, ಮಲಬದ್ದತೆ ನಿವಾರಣೆಯಾಗುತ್ತದೆ [ಸಾಯಿರಾಮ್ ರೆಮಿಡೀಸ್],
ಪುನರ್ನವಾದಿ ತೈಲ (ಹೊರಲೇಪನಕ್ಕೆ) – ಎಲ್ಲಾ ಬಗೆಯ ಉರಿಯೂತವನ್ನು ಕಡಿಮೆ
ಮಾಡುತ್ತದೆ. ಬಹಳ ದಿನಗಳಿಂದ ಇರುವ ಜ್ವರ, ಭಗಂದರ ಮುಂತಾದ ರೋಗಗಳಲ್ಲಿ ಮೈಗೆ ಹಚ್ಚಿ ಮಸಾಜು ಮಾಡಲು ಉಪಯುಕ್ತ [ಬೈದ್ಯನಾಥ್: ದಿ ಆರ್ಯ ವೈದ್ಯಶಾಲ, ಕೊಟ್ಟಕ್ಕಲ್, ಕೇರಳ].
ಪುನರ್ನವಾದಿ ಮಂದೂರ್ – ರಕ್ತವರ್ಧಕ, ಮೂತ್ರಕಾರಕ, ರಕ್ತಹೀನತೆ, ಮಲಬದ್ದತೆ, ಹಸಿವಿಲ್ಲದಿರುವಿಕೆಗೆ, ದೊಡ್ಡದಾದ ಪ್ಲೀಹ ಮತ್ತು ಪಿತ್ತಜನಕಾಂಗದ ತೊಂದರೆಗಳ ಚಿಕಿತ್ಸೆಗೆ
ಉಪಯುಕ್ತ ಬೈದ್ಯನಾಥ್: ದಿ ಆರ್ಯ ವೈದ್ಯಶಾಲ, ಕೊಟ್ಟಕ್ಕಲ್, ಕೇರಳ]
ಪುನರ್ನವಾಸವಂ – ಮೂತ್ರಕಾರಕ, ಊತ (ಶೋಥ) ವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತಹೀನತೆಯ ಚಿಕಿತ್ಸೆಗೆ ಉಪಯುಕ್ತ [ದಿ ಆರ್ಯ ವೈದ್ಯಶಾಲ, ಕೊಟ್ಟಕ್ಕಲ್, ಕೇರಳ].
ಪುರಿಮ್ (ಮಾತ್ರೆಗಳು ) – ಚರ್ಮದ ಕಾಯಿಲೆಗಳಿಗೆ ಉಪಯುಕ್ತ. ವಿಷಕಾರಕ ವಸ್ತುಗಳನ್ನು ನಿರ್ಮೂಲ ಮಾಡುತ್ತದೆ [ದಿ ಹಿಮಾಲಯ ಡ್ರಗ್ ಕಂ., ಬೆಂಗಳೂರು].
ಪುಷ್ಕರಾಮೃತ – ಎಲ್ಲಾ ಬಗೆಯ ಉಸಿರಾಟದ ತೊಂದರೆಗಳಿಗೆ ಉಪಯುಕ್ತ. ಸಾಮಾನ್ಯ ರಷ್ಯಾ ಶೀತ, ನೆಗಡಿ, ಸೀನು, ಧೂಮಪಾನಿಗಳ ಕೆಮ್ಮು ಚಿಕಿತ್ಸೆಗೆ ಉಪಯುಕ್ತ [ಸ್ವದೇಶಿ, ಉಡುಪಿ],
ಪ್ರದರಾಂತಕ್ ಲೋಹ – ರಕ್ತವರ್ಧಕ ಟಾನಿಕ್, ಹಸಿವಿಲ್ಲದಿರುವಿಕೆಯನ್ನು ಸರಿಪಡಿಸುತ್ತದೆ.
ಶ್ವೇತಪ್ಪದರ ಮತ್ತು ಇತರ ಮುಟ್ಟಿಗೆ ಸಂಬಂಧಿಸಿದ ತೊಂದರೆಗಳಿಗೆ ಉಪಯುಕ್ತ [ಬೈದ್ಯನಾಥ್].
ಪೈಲೆಕ್ಸ್ (ಮಾತ್ರೆಗಳು) – ಮೊಳೆರೋಗ ಮತ್ತು ವೆರಿಕೋಸ್ ವೈನ್‌ಗೆ ಉತ್ತಮ ಔಷಧಿ (ದಿ ಹಿಮಾಲಯ ಡ್ರಗ್ ಕಂ., ಬೆಂಗಳೂರು].
ಫಲ್‌ಕಲ್ಯಾಣ ಘೃತ (ಸೇವನೆಗೆ) – ಬಂಜೆತನ ನಿವಾರಣೆಗೆ ಉಪಯುಕ್ತ. ಭ್ರೂಣದ ಬೆಳವಣಿಗೆಗೆ ಸಹಕಾರಿ. ಕಾಮೋತ್ತೇಜಕದಂತೆ ಕೆಲಸ ಮಾಡುತ್ತದೆ [ಬೈದ್ಯನಾಥ್]
ಫಲಸರ್ಪಿ – ಗರ್ಭಾಶಯಕ್ಕೆ ಸಂಬಂಧಿಸಿದ ಎಲ್ಲಾ ಬಗೆಯ ತೊಂದರೆಗಳಿಗೂ ಉಪಯುಕ್ತ. ಟಾನಿಕ್ ಗಂಡಸರಲ್ಲಿ ಕಂಡು ಬರುವ ಬಂಜೆತನಕ್ಕೂ ಉಪಯುಕ್ತ [ಶ್ರೀ ಶ್ರೀ ಆಯುರ್ವೇದ, ಬೆಂಗಳೂರು: ದಿ ಆರ್ಯ ವೈದ್ಯಶಾಲ, ಕೊಟ್ಟಕ್ಕಲ್, ಕೇರಳ].
ಬಯೋಗೆಸ್ಟ್ ಮಾತ್ರೆಗಳು – ದೀರ್ಘಕಾಲದ ಸೋಂಕಿನಿಂದ ಉಂಟಾದ ಚರ್ಮದ ಕಾಯಿಲೆಯ ಚಿಕಿತ್ಸೆಗೆ ಉಪಯುಕ್ತ (ಕೇರಳ ಆಯುರ್ವೇದ].
ಬಲಧತ್ರಯಾದಿ ತೈಲಂ – ವಾತ -ಪಿತ್ತದಿಂದ ಉಂಟಾದ ತಲೆ ಮತ್ತು ಕುತ್ತಿಗೆಯ ಕಾಯಿಲೆಗಳ ಚಿಕಿತ್ಸೆ ಉಪಯುಕ್ತ ದಿ ಆರ್ಯ ವೈದ್ಯಶಾಲ, ಕೊಟ್ಟಕ್ಕಲ್, ಕೇರಳ].
ಬಲಶೋಭ ಸಿರಪ್ – ಟಾನಿಕ್, ದೇಹವನ್ನು ಬಲಗೊಳಿಸುತ್ತದೆ. ಜ್ಞಾಪಕ ಶಕ್ತಿಯನ್ನು ಉತ್ತಮಪಡಿಸುತ್ತದೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಜೀರ್ಣಕಾರಕ [ಬಿ.ವಿ. ಪಂಡಿತ್, ನಂಜನಗೂಡು].
ಬ್ರಾಹ್ಮ ದ್ರಾಕ್ಷಾದಿ ಕಷಾಯಂ – ನರಗಳ ನೋವಿಗೆ ಉಪಯುಕ್ತ ಔಷಧಿ [ದಿ ಆರ್ಯ ವೈದ್ಯಶಾಲ, ಕೊಟ್ಟಕ್ಕಲ್, ಕೇರಳ].
ಬಿವಿಲಾಟ್ ಪೊರ್ಟೆ – ಸ್ಮರಣ ಶಕ್ತಿ ಕಡಿಮೆಯಾಗಿರುವುದಕ್ಕೆ, ದುರ್ಬಲತೆಗೆ, ಅಗ್ನಿಮಾಂದ್ಯಕ್ಕೆ ಉಪಯುಕ್ತ ಔಷಧಿ [ಮೆಡಿಲಿಂಕ್ಸ್, ಮಧುರೈ].














