ಮನೆ ರಾಜ್ಯ ಬೆಂಗಳೂರು ಪ್ರೆಸ್ ಕ್ಲಬ್ : ಚುನಾವಣೆ ಕಣದ ಅಭ್ಯರ್ಥಿಗಳ ಅಂತಿಮ ಪಟ್ಟಿ.

ಬೆಂಗಳೂರು ಪ್ರೆಸ್ ಕ್ಲಬ್ : ಚುನಾವಣೆ ಕಣದ ಅಭ್ಯರ್ಥಿಗಳ ಅಂತಿಮ ಪಟ್ಟಿ.

0

ಬೆಂಗಳೂರು(Bengaluru): ಬೆಂಗಳೂರು ಪ್ರೆಸ್ ಕ್ಲಬ್ ಗೆ ನಾಲ್ಕು ವರ್ಷಗಳ ನಂತರ ಇದೀಗ ಚುನಾವಣೆಗೆ ದಿನಾಂಕ ನಿಗಧಿಯಾಗಿದ್ದು, ಸ್ಪರ್ಧಾಳುಗಳ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ.

2018 ರ ಏಪ್ರಿಲ್ 23ರಂದು ನಡೆದಿದ್ದ ಚುನಾವಣೆ ನಂತರ ಇದೀಗ ಈ ತಿಂಗಳ 12 ರ ಭಾನುವಾರ ಕ್ಲಬ್ ನ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಲಿದೆ.

ಅಧ್ಯಕ್ಷ ಸ್ಥಾನಕ್ಕೆ ಐವರು ನಾಮಪತ್ರ ಸಲ್ಲಿಸಿದ್ದಾರೆ. ಈ ಹಿಂದೆ ಮಹಿಳಾ ಆಯೋಗದ ಅಧ್ಯಕ್ಷರಾಗಿದ್ದ ನಾಗಲಕ್ಷ್ಮಿ ಬಾಯಿ,  ಉದಯ ಟಿವಿ ಮಾಜಿ ಪತ್ರಕರ್ತ ಶ್ರೀಧರ್, ಸೀನಿಯರ್ ಫೋಟೋರ್ನಲಿಸ್ಟ್ ಸಗ್ಗರೆ ರಾಮಸ್ವಾಮಿ,  ಹಲವಾರು ದೃಶ್ಯಮಾಧ್ಯಮಗಳಲ್ಲಿ ಪತ್ರಕರ್ತರಾಗಿ ಇದೀಗ ಅಂತರ್ಜಾಲ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಹಿರಿಯ ಪತ್ರಕರ್ತ ಸುನೀಲ್ ಸಿರ್ಸಿಂಗಿ, ಹಿರಿಯ ಛಾಯಾಗ್ರಾಹಕ ವೆಂಕಟೇಶ್ ಕಣದಲ್ಲಿದ್ದಾರೆ.

 ಉಪಾಧ್ಯಕ್ಷ ಸ್ಥಾನಕ್ಕೆ ಪತ್ರಕರ್ತರಾದ ಅಬ್ದುಲ್ ಹಮೀದ್ ಪಾಳ್ಯ, ಆನಂದ್ ಬೈದನಮನೆ, ನಾರಾಯಣ ರಾವ್ ಜಿ.ಎಸ್. (ಜೆಸುನಾ), ಶೈಲೇಂದ್ರ ಭೋಜಕ್ (ಮುನ್ನಾ), ಸೋಮಶೇಖರ್ ರೆಡ್ಡಿ (ಎಸ್.ಎಸ್.ರೆಡ್ಡಿ) ಉಮೇದುವಾರಿಕೆ ಸಲ್ಲಿಸಿದ್ದಾರೆ.

ಇನ್ನು ಇಡೀ ಚುನಾವಣೆಯ ಅಖಾಡದ ಭಾರೀ ಕುತೂಹಲದ ಕೇಂದ್ರ ಬಿಂದು ಪ್ರಧಾನ ಕಾರ್ಯದರ್ಶಿ ಸ್ಥಾನ. ಇಲ್ಲಿ ಹಿರಿಯ ಪತ್ರಕರ್ತ ಸಂಜೆವಾಣಿ ಮಲ್ಲಪ್ಪ,  ನಾಲ್ಕು ವರ್ಷಗಳ ನಂತರ ಅಖಾಡಕ್ಕಿಳಿದಿರುವ ಶಿವಕುಮಾರ್ ಬೆಳ್ಳಿತಟ್ಟೆ,  ಬಿಬಿಎಂಪಿ ವ್ಯಾಪ್ತಿಯ ಪತ್ರಕರ್ತರಿಗೆ ಚಿಕಿತ್ಸಾ ವೆಚ್ಚಕ್ಕೆ 2ಕೋಟಿ ರೂ. ಕೊಡಿಸಿದ್ದು ಹಾಗೂ ಪತ್ರಕರ್ತರು ಆರೋಗ್ಯ ಕಾರ್ಡ್ ಪಡೆಯಲು ಅಡ್ಡಿಯಾಗಿದ್ದ ಎಪಿಎಲ್ ಕಾರ್ಡ್ ಸಮಸ್ಯೆ ನಿವಾರಿಸಿರುವುದನ್ನು ಮುಂದಿಟ್ಟು ಮತಯಾಚಿಸುತ್ತಿದ್ದಾರೆ.

ಈ ಮಧ್ಯೆ ಪ್ರಸ್ತುತ ಸಮಿತಿಯಲ್ಲಿ ಉಪಾಧ್ಯಕ್ಷರಾಗಿದ್ದ ಪತ್ರಕರ್ತ, ಶಾಮ ಪ್ರಸಾದ್ ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಕಾರ್ಯದರ್ಶಿ ಸ್ಥಾನಕ್ಕೆ ಅನಿಲ್ ಬುದ್ದುರ್ ಲುಲ್ಲಾ, ದೊಡ್ಡ ಬೊಮ್ಮಾಯ್ಯ, ನಾರಾಯಣ್. ಬಿ, ಪಂಕಜಾ ಕೆ.ಬಿ, ಪರಮೇಶ್ ಕೆ.ವಿ ಹಾಗೂ ಸತೀಶ್ ಬಿ. ಕಣದಲ್ಲಿದ್ದಾರೆ.

ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಮಹಂತೇಶ್ ಎಸ್.ಹೀರೆಮಠ್, ಮಂಜುನಾಥ್ ಜಿ.ವೈ, ಮಂಜುನಾಥ್ ಟಿ. ಸ್ಪರ್ಧೆಯಲ್ಲಿದ್ದಾರೆ.

ಇನ್ನುಳಿದಂತೆ ಖಜಾಂಚಿ ಹುದ್ದೆಗೆ ಫೋಟೋಗ್ರಾಫರ್ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಪ್ರಯತ್ನ ನಡೆಸಿದ್ದು ಇದಕ್ಕೆ ಪ್ರತಿಸ್ಪರ್ಧಿ ಟಿವಿ9 ಮಾಜಿ ಪತ್ರಕರ್ತ ಸಿದ್ದೇಶ್ ಸವಾಲು ಹಾಕಿದ್ದಾರೆ.

ಪದಾಧಿಕಾರಿಗಳ ಸ್ಥಾನಕ್ಕೆ 15 ಮಂದಿ ಆಕಾಂಕ್ಷಿಗಳು ಕಣದಲ್ಲಿದ್ದರೆ, ಇದೇ ವಿಭಾದಲ್ಲಿ ಮಹಿಳಾ ಮೀಸಲಿನಲ್ಲಿ 3 ಮಂದಿ ಕಣದಲ್ಲಿದ್ದಾರೆ.