ಮನೆ ರಾಷ್ಟ್ರೀಯ ಕೇಂದ್ರ ಬಜೆಟ್: ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ ಘೋಷಣೆ

ಕೇಂದ್ರ ಬಜೆಟ್: ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ ಘೋಷಣೆ

0

ನವದೆಹಲಿ: ಸಂಸತ್ತಿನಲ್ಲಿ ಇಂದು (ಶನಿವಾರ) 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ’ ಅನ್ನು ಘೋಷಿಸಿದ್ದಾರೆ.

Join Our Whatsapp Group

ಈ ಯೋಜನೆ ಮೂಲಕ 1.7 ಕೋಟಿ ಕೃಷಿಕರಿಗೆ ಪ್ರಯೋಜನವಾಗಲಿದೆ. ಕಡಿಮೆ ಇಳುವರಿಯ 100 ಜಿಲ್ಲೆಗಳು ಇದರಲ್ಲಿ ಒಳಗೊಂಡಿರಲಿವೆ ಎಂದು ಅವರು ತಿಳಿಸಿದ್ದಾರೆ.

ದಾಖಲೆಯ ಸತತ 8ನೇ ಬಜೆಟ್ ಮಂಡಿಸಿರುವ ನಿರ್ಮಲಾ, ಕೃಷಿ ಕ್ಷೇತ್ರದ ಆಧುನೀಕರಣ ಹಾಗೂ ಸ್ವಾವಲಂಬನೆಯತ್ತ ಗಮನ ಕೇಂದ್ರಿಕರಿಸಲಾಗಿದೆ ಎಂದು ತಿಳಿಸಿದ್ದಾರೆ. 

ಯುವಜನತೆ, ಮಹಿಳೆ ಮತ್ತು ರೈತರನ್ನು ಕೇಂದ್ರೀಕರಿಸುವ ಗ್ರಾಮೀಣ ಸಮೃದ್ಧಿ ಯೋಜನೆಯನ್ನು ಸರ್ಕಾರ ಆರಂಭಿಸುತ್ತದೆ ಎಂದು ಅವರು ಹೇಳಿದ್ದಾರೆ.

ದ್ವಿದಳ ಧಾನ್ಯಗಳ ಆತ್ಮ ನಿರ್ಭರ ಭಾರತಕ್ಕಾಗಿ ಆರು ವರ್ಷಗಳ ಕಾರ್ಯಕ್ರಮವನ್ನು ಆರಂಭಿಸುವುದಾಗಿ ಹೇಳಿದ್ದಾರೆ.

ತರಕಾರಿ, ಹಣ್ಣುಗಳ ಉತ್ಪಾದನೆ ಮತ್ತು ಲಾಭದಾಯಕ ಬೆಲೆ ಒದಗಿಸುವ ಸಮಗ್ರ ಕಾರ್ಯಕ್ರಮವನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ.