ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿ ರಾಜಾರೋಷವಾಗಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ಚಾಲಕನ ವಿರುದ್ಧ ಬೆಂಗಳೂರು ಸಂಚಾರಿ ಪೊಲೀಸರು 1.61ಲಕ್ಷ ರೂ. ದಂಡ ವಿಧಿಸಿದ್ದಾರೆ.
KA05 JX 1344 ನಂಬರ್ನ ಸ್ಕೂಟರ್ ಬೆಲೆಗಿಂತ ಟ್ರಾಫಿಕ್ ದಂಡ ಜಾಸ್ತಿಯಾಗಿದೆ. ಸ್ಕೂಟರ್ ಬೆಲೆ 80 ಸಾವಿರ ರೂ. ದಂಡ 1 ಲಕ್ಷದ 61 ಸಾವಿರ ರೂ. ಇದೆ. ವಾಹನ ಸವಾರ ಹೆಲ್ಮೆಟ್ ಹಾಕದ, ಸಿಗ್ನಲ್ ಜಂಪ್ ಸೇರಿದಂತೆ ಹಲವು ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾನೆ. ಇದೇ ಬೈಕ್ ಸವಾರ ಕಳೆದ ವರ್ಷ 01,05,500 ರೂ. ದಂಡ ತುಂಬಿದ್ದನು. ಈ ವರ್ಷ ಹೆಚ್ಚುವರಿಯಾಗಿ 56 ಸಾವಿರ ರೂ. ದಂಡ ತುಂಬಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸರು ಯಾಕೆ ಇನ್ನೂ ಈ ಸವಾರನ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ. ಆರ್ಟಿಒ ಅಧಿಕಾರಿಗಳು ವಾಹನ ಜಪ್ತಿ ಏಕೆ ಮಾಡಿಲ್ಲ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.














