ಮನೆ ಸ್ಥಳೀಯ ಮೈಸೂರು: ಕಾಣೆಯಾದವರ ಪತ್ತೆಗೆ ಮನವಿ

ಮೈಸೂರು: ಕಾಣೆಯಾದವರ ಪತ್ತೆಗೆ ಮನವಿ

0

ರಾಮೇಗೌಡ

ದಟ್ಟಗಳ್ಳಿಯ ಜೋಡಿಬೇವಿನಮರದ ಹತ್ತಿರದ ಮನೆ ನಂ.1277 ರಲ್ಲಿ ವಾಸವಾಗಿದ್ದ ರಾಮೇಗೌಡ (58) ಗಾರೆ ಕೆಲಸ ಮಾಡಿಕೊಂಡಿದ್ದು, ಕೆಲಸದ ನಿಮಿತ್ತ ಮನೆಯಿಂದ ಹೊರ ಹೋದವರು ಹಿಂತಿರುಗದೇ ನಾಪತ್ತೆಯಾಗಿದ್ದಾರೆ.

Join Our Whatsapp Group

ಚಹರೆ: 5 ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕೋಲು ಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕಪ್ಪು ತಲೆ ಕೂದಲು, ಕಪ್ಪು ಬಣ್ಣದ ಗೆರೆ ಶರ್ಟ್ ಧರಿಸಿರುತ್ತಾರೆ.

ಶ್ಯಾಮ್ ಲಾಲ್

ಮರಳಿ ಮನೆ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಶ್ಯಾಮ್ ಲಾಲ್ (42) ಅರವಿಂದನಗರದ ಶಿವದೇವಾಲಯದ ಎದುರಿನ ಪಾರ್ಕ್ ನಲ್ಲಿ ವಾಯುವ ವಿಹಾರ ಮಾಡುವ ಸಮಯದಲ್ಲಿ ಮೇಲ್ವಿಚಾರಕರ ಕಣ್ಣು ತಪ್ಪಿಸಿಕೊಂಡು ಪಾರ್ಕ್ ನಿಂದ  ಹೋದವರು ಇದುವರೆಗೆ ವಾಪಾಸ್ ಬಾರದೇ ನಾಪತ್ತೆಯಾಗಿದ್ದಾರೆ.

ಚಹರೆ: 5 ಅಡಿ ಎತ್ತರ, ಹಿಂದಿ ಭಾಷೆ ಮಾತನಾಡುತ್ತಾರೆ. ದುಂಡು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕಪ್ಪು ಮತ್ತು ಬಿಳಿ ತಲೆ ಮಿಶ್ರಿತ ತಲೆ ಕೂದಲು, ಮಾನಸಿಕ ಅಸ್ವಸ್ಥನಾಗಿದ್ದು, ಹಸರಿ ಬಣ್ಣದ ಟೀ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಶ್ರೀನಿವಾಸಚಾರಿ

ಶ್ರೀನಿವಾಸಚಾರ್ (63) ಕುಡಿತದ ಚಟವಿದ್ದು, ದೇವಸ್ಥಾನಗಳಿಗೆ ಹೋಗುವ ಅಭ್ಯಾಸವಿರುತ್ತದೆ. ಈ ವ್ಯಕ್ತಿ ಮನೆಯಿಂದ ಹೋದವರು ಹಿಂತಿರುಗದೇ ನಾಪತ್ತೆಯಾಗಿದ್ದಾರೆ.

ಚಹರೆ: 5.5 ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕೋಲು ಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕಪ್ಪು ಮತ್ತು ಬಿಳಿ ಮಿಶ್ರಿತ ತಲೆಗೂದಲು, ಸ್ವಲ್ಪ ದೃಷ್ಠಿ ದೋಷವಿರುತ್ತದೆ. ಬಿಳಿ ಅಂಗಿ ಹಾಗೂ ಕಪ್ಪು ಬಣ್ಣದ ದೃಷ್ಠಿದೋಷವಿರುತ್ತದೆ. ತಲೆಯ ಭಾಗದಲ್ಲಿ ಗಂಟಿನ ಆಪರೇಷನ್ ಮಾಡಿದ ಗುರುತಿದೆ.

ಬಸಪ್ಪ

2019ರ ಫೆಬ್ರವರಿ 19 ರಂದು ಮನೆಯಿಂದ ತಿರುಗಾಡಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋದ ಬಸಪ್ಪ (90)  ಹಿಂತಿರುಗದೇ ನಾಪತ್ತೆಯಾಗಿದ್ದಾರೆ.

ಚಹರೆ: 6 ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕೋಲು ಮುಖ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ಕಪ್ಪು ಮತ್ತು ಬಿಳಿ ಮಿಶ್ರಿತ ತಲೆ ಕೂದಲು, ಬಿಳಿ ಬಣ್ಣದ ಪಂಚೆ ಮತ್ತು ಬಿಳಿ ಬಣ್ಣದ ಶರ್ಟ್ ಹಾಕಿರುತ್ತಾರೆ. ಕನ್ನಡಕವನ್ನು ಧರಿಸಿರುತ್ತಾರೆ.

ರಾಕೇಶ್ ಬಿ

ದಟ್ಟಗಳ್ಳಿಯಲ್ಲಿರುವ ವೈಷ್ಣವಿ ಪಿಜಿಯಲ್ಲಿ ವಾಸವಿದ್ದ ರಾಕೇಶ್ ಬಿ (23) ಬೆಂಗಳೂರಿನಲ್ಲಿ ಕ್ಯಾಂಪ್ ಇದೆ ಎಂದು  ತೆರಳಿದ್ದು, ಹಿಂತಿರುಗದೇ ನಾಪತ್ತೆಯಾಗಿದ್ದಾರೆ.

ಚಹರೆ: 6 ಅಡಿ ಎತ್ತರ, ಕನ್ನಡ, ತೆಲುಗು, ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಕೋಲು ಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕಪ್ಪು ಕೂದಲು, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್  ಹಾಗೂ ಕಪ್ಪು ಬಣ್ಣದ ಟೀ ಶರ್ಟ್ ಧರಿಸಿರುತ್ತಾರೆ.

ಶ್ರೀ ಕೃಷ್ಣ

ಅರವಿಂದನಗರದ 18ನೇ ಕ್ರಾಸ್ ನಲ್ಲಿರುವ ಮರಳಿ ಮನೆ ಕೇಂದ್ರದಲ್ಲಿ ಆಶ್ರಯಪಡೆದಿದ್ದ ಶ್ರೀಕೃಷ್ಣ(28) ಎಂಬ ವ್ಯಕ್ತಿ ಕೇಂದ್ರದಿಂದ ದಿನಸಿ ಸಾಮಾಗ್ರಿ ತರಲು ಅದೇ ಕ್ರಾಸಿನಲ್ಲಿದ್ದ ಅಂಗಡಿಗೆ ಹೋದವರು ಮತ್ತೆ ಹಿಂತಿರುಗದೇ ನಾಪತ್ತೆಯಾಗಿದ್ದಾರೆ.

ಚಹರೆ: 5.5 ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ದುಂಡು ಮುಖ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ಕಪ್ಪು ತಲೆ ಕೂದಲು, ಮಾನಸಿಕ ಅಸ್ವಸ್ಥನಾಗಿದ್ದು, ನೀಲಿ ಮಿಶ್ರಿತ ಕಪ್ಪು ಬಣ್ಣದ ಟೀ ಶರ್ಟ್  ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಈ ವ್ಯಕ್ತಿಗಳ ಮಾಹಿತಿ ದೊರೆತಲ್ಲಿ ಕುವೆಂಪು ನಗರ ಪೊಲೀಸ್ ಠಾಣೆಯ ದೂ.ಸಂಖ್ಯೆ 0821-24118324, 9480802247 ನ್ನು ಸಂಪರ್ಕಿಸಲು ಕೋರಲಾಗಿದೆ.