ಮನೆ ಕಾನೂನು ಪ್ರತಿಷ್ಠಿತ ಬ್ರ್ಯಾಂಡ್‌ ಗಳ ಹೆಸರಲ್ಲಿ ಮಾರಾಟಕ್ಕೆ ಸಂಗ್ರಹಿಸಿಟ್ಟಿದ್ದ 1.75 ಕೋಟಿ ಮೌಲ್ಯದ ನಕಲಿ ಉತ್ಪನ್ನ ಜಪ್ತಿ

ಪ್ರತಿಷ್ಠಿತ ಬ್ರ್ಯಾಂಡ್‌ ಗಳ ಹೆಸರಲ್ಲಿ ಮಾರಾಟಕ್ಕೆ ಸಂಗ್ರಹಿಸಿಟ್ಟಿದ್ದ 1.75 ಕೋಟಿ ಮೌಲ್ಯದ ನಕಲಿ ಉತ್ಪನ್ನ ಜಪ್ತಿ

0

ಬೆಂಗಳೂರು : ದೈನಂದಿನ ಗೃಹೋಪಯೋಗಿ ವಸ್ತುಗಳನ್ನು ನಕಲಿಯಾಗಿ ತಯಾರಿಸಿ ಮಾರಾಟ ಮಾಡುತ್ತಿದ್ದ ಗೋದಾಮುಗಳ ಮೇಲೆ ಸಿಸಿಬಿಯ ಆರ್ಥಿಕ ಅಪರಾಧ ದಳದ ಪೊಲೀಸರು ದಾಳಿ ನಡೆಸಿದ್ದಾರೆ.

Join Our Whatsapp Group

ಕಾಟನ್‌ ಪೇಟೆ, ಮಾಚೋಹಳ್ಳಿ, ಕಾಚೋಹಳ್ಳಿಯ ಗೋದಾಮಿನಲ್ಲಿ ನಕಲಿಯಾಗಿ ತಯಾರಿಸಿದ್ದ ಲೈಜಾಲ್, ಹಾರ್ಪಿಕ್, ಕಾಲಿನ್, ವಿವಿಧ ಡಿಟರ್ಜಂಟ್ ಪೌಡರ್‌ಗಳು, ಟೀ-ಪುಡಿ, ಗುಡ್ ನೈಟ್ ಲಿಕ್ವಿಡ್ ಸೇರಿದಂತೆ 1.75 ಕೋಟಿ ಮೌಲ್ಯದ ನಕಲಿ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ.

ಪ್ರತಿಷ್ಠಿತ ಕಂಪನಿಯ ಅಧಿಕೃತ ಪ್ರತಿನಿಧಿಯಿಂದ ದೊರೆತ ಮಾಹಿತಿಯನ್ನು ಆಧರಿಸಿ ಸಿಸಿಬಿಯ ಆರ್ಥಿಕ ಅಪರಾಧ ದಳದ ಪೊಲೀಸರು, ಕಾಟನ್‌ ಪೇಟೆ, ಮಾಚೋಹಳ್ಳಿ, ಕಾಚೋಹಳ್ಳಿಗಳಲ್ಲಿರುವ ಗೋದಾಮುಗಳ ಮೇಲೆ ದಾಳಿ ನಡೆಸಿದ್ದರು.

ಈ ವೇಳೆ ನಕಲಿಯಾಗಿ ತಯಾರಿಸಿ ಶೇಖರಿಸಿಟ್ಟಿದ್ದ ವಿವಿಧ ಕಂಪನಿಗಳ ಉತ್ಪನ್ನಗಳು ಪತ್ತೆಯಾಗಿವೆ. ಅವುಗಳನ್ನ ವಶಕ್ಕೆ ಪಡೆದು ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇದೇ ರೀತಿ ನಕಲಿ ವಸ್ತುಗಳನ್ನು ತಯಾರಿಸಿ ದಾಸ್ತಾನು ಮಾಡಲಾಗಿರುವ ಸ್ಥಳಗಳ ಕುರಿತು ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.