ಮನೆ ಅಪರಾಧ ಚಿಂತಾಮಣಿ: ವ್ಯಕ್ತಿಯ ಬರ್ಬರ ಹತ್ಯೆ

ಚಿಂತಾಮಣಿ: ವ್ಯಕ್ತಿಯ ಬರ್ಬರ ಹತ್ಯೆ

0

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

Join Our Whatsapp Group

ಚಿಂತಾಮಣಿ ನಗರದ ಅಶ್ವಿನಿ ಬಡಾವಣೆ ನಿವಾಸಿ ರಾಮಸ್ವಾಮಿ ಮೃತದುರ್ದೈವಿ.

ಮೂಲತಃ ಚಿಂತಾಮಣಿ ತಾಲೂಕಿನ ನಾಗದೇನಹಳ್ಳಿ ನಿವಾಸಿಯಾಗಿದ್ದ ರಾಮಸ್ವಾಮಿ ಜೆಸಿಬಿ, ಟ್ರ್ಯಾಕ್ಟರ್, ಟಿಪ್ಪರ್​ಗಳ ವ್ಯವಹಾರ ಮಾಡುತ್ತಿದ್ದರು. ರಾಮಸ್ವಾಮಿ ಗುರುವಾರ (ಫೆಬ್ರವರಿ 13) ರ ರಾತ್ರಿ 9.30ರ ಸಮಯ ದೇವಸ್ಥಾನವೊಂದರಿಂದ ತನ್ನದೇ ಸ್ಕೂಟಿಯಲ್ಲಿ ಮನೆಯತ್ತ ಹೊರಟಿದ್ದರು. ದಾರಿ ಮಧ್ಯೆ, ಸ್ಕೂಟಿ ಅಡ್ಡ ಹಾಕಿದ ವ್ಯಕ್ತಿಯೊರ್ವ ರಾಮಸ್ವಾಮಿಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಇನ್ನೂ, ರಾಮಸ್ವಾಮಿ ಬಳಿ ಚಾಲಕನಾಗಿ ನಾಗೇಶ ಎಂಬಾತ ಕೆಲಸ ಮಾಡುತ್ತಿದ್ದನು. ಈ ನಾಗೇಶನೇ ಕೊಲೆ ಮಾಡಿದ್ದಾನೆ ಎಂದು ರಾಮಸ್ವಾಮಿಯ ಸಂಬಂಧಿಗಳು ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ನಾಗೇಶನಿಗಾಗಿ ಬಲೆ ಬಿಸಿದ್ದಾರೆ.