ಮನೆ ಸ್ಥಳೀಯ ಮುಡಾದ 50:50 ಹಗರಣದ ಸಂಪೂರ್ಣ ತನಿಖೆ ಮಾಡಿ: ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ಮತ್ತೊಂದು ಮನವಿ

ಮುಡಾದ 50:50 ಹಗರಣದ ಸಂಪೂರ್ಣ ತನಿಖೆ ಮಾಡಿ: ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ಮತ್ತೊಂದು ಮನವಿ

0

ಮೈಸೂರು:  ಮೈಸೂರು ಲೋಕಾಯುಕ್ತರು ಮುಡಾ 50:50 ಹಗರಣದ ಎಲ್ಲಾ ಪ್ರಕರಣಗಳನ್ನು ತನಿಖೆ ನಡೆಸಬೇಕೆಂದು ಎಂದು ದೂರುದಾರ ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ಮತ್ತೊಂದು ಮನವಿ ಸಲ್ಲಿಸಿದರು.

Join Our Whatsapp Group

ಇಂದು ಲೋಕಾಯುಕ್ತ ಕಚೇರಿಗೆ ಆಗಮಿಸಿದ ಸ್ನೇಹಮಯಿ ಕೃಷ್ಣ, “ಮೈಸೂರಿನ ಲೋಕಾಯುಕ್ತರು 50:50 ಅನುಪಾತದ ಹಗರಣದ ಸಂಪೂರ್ಣ ತನಿಖೆ ಮಾಡದೇ, ಕೇವಲ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಸೇರಿದ 14 ಸೈಟ್​ಗಳ ಬಗ್ಗೆ ಮಾತ್ರ ತನಿಖೆ ಮಾಡುತ್ತಿದ್ದು, ಇದರಿಂದ ಮುಡಾ ಹಗರಣದ ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಎಲ್ಲ ಪ್ರಕರಣಗಳನ್ನು ಅಧಿಕಾರಿಗಳು ತನಿಖೆ ನಡೆಸಬೇಕೆಂದು” ಎಂದು ದೂರುದಾರ ಸ್ನೇಹಮಯಿ ಲೋಕಾಯುಕ್ತಕ್ಕೆ ಮತ್ತೊಂದು ಮನವಿ ಸಲ್ಲಿಸಿದರು.

ಇಂದು ಲೋಕಾಯುಕ್ತ ಕಚೇರಿಗೆ ಆಗಮಿಸಿದ ಸ್ನೇಹಮಯಿ ಕೃಷ್ಣ, “ಮುಡಾದಲ್ಲಿ 50:50 ಅನುಪಾತದ ನಿವೇಶ ಹಂಚಿಕೆಯಲ್ಲಿ ಭಾರಿ ಅವ್ಯವಹಾರವಾಗಿದ್ದು, ಇದರಲ್ಲಿ ಮುಡಾದ ಅಧಿಕಾರಿಗಳು, ಪ್ರಭಾವಿಗಳು, ಹಾಗೂ ಬಿಲ್ಡರ್​ಗಳು ಭಾಗಿಯಾಗಿದ್ದು, ಕೋಟ್ಯಂತರ ರೂಪಾಯಿ ಅಕ್ರಮದ ಹಣದ ವಹಿವಾಟು ಆಗಿದೆ. ಈ ಬಗ್ಗೆ ಲೋಕಾಯುಕ್ತರು ಸಮಗ್ರ ತನಿಖೆ ನಡೆಸಬೇಕು, ಕೇವಲ ಸಿದ್ದರಾಮಯ್ಯ ಕುಟುಂಬದ 14 ಸೈಟ್​ಗಳ ಬಗ್ಗೆ ಮಾತ್ರ ತನಿಖೆ ನಡೆಸುತ್ತಿದ್ದು, ಇದರಿಂದ ಇತರ ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಕೂಡಲೇ ಲೋಕಾಯುಕ್ತರು ಈ ಪ್ರಕರಣದಲ್ಲಿ 50:50 ಅನುಪಾತದಲ್ಲಿ ಭಾರೀ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು” ಆಗ್ರಹಿಸಿದರು.

ಮಾಜಿ ಮುಡಾ ಆಯುಕ್ತ ನಟೇಶ್‌ ತಮ್ಮ ಹೆಂಡತಿ ಸೋದರ ಮಾವ ಹಾಗೂ ಹೆಂಡತಿ ಹೆಸರಿನಲ್ಲಿ ಕಾನೂನು ಉಲ್ಲಂಘನೆ ಮಾಡಿ, ಮುಡಾ ದಿಂದ ಸೈಟ್​ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಲೋಕಾಯುಕ್ತಕ್ಕೆ ದಾಖಲೆ ನೀಡಿದ್ದೇನೆ” ಎಂದು ಇದೇ ಸಂದರ್ಭದಲ್ಲಿ ಸ್ನೇಹಮಯಿ ಕೃಷ್ಣ ಹೇಳಿಕೆ ನೀಡಿದರು.