ಮನೆ ರಾಷ್ಟ್ರೀಯ ಅಮೆರಿಕದಿಂದ ಅಕ್ರಮ ವಲಸಿಗರ ಗಡೀಪಾರು: 112 ಮಂದಿ ಭಾರತೀಯರ 3ನೇ ಬ್ಯಾಚ್ ಅಮೃತಸರಕ್ಕೆ ಆಗಮನ

ಅಮೆರಿಕದಿಂದ ಅಕ್ರಮ ವಲಸಿಗರ ಗಡೀಪಾರು: 112 ಮಂದಿ ಭಾರತೀಯರ 3ನೇ ಬ್ಯಾಚ್ ಅಮೃತಸರಕ್ಕೆ ಆಗಮನ

0

ಅಮೃತಸರ(ಪಂಜಾಬ್​): ಅಮೆರಿಕದಿಂದ ಗಡೀಪಾರಾದ ಅಕ್ರಮ ವಲಸಿಗರನ್ನು ಹೊತ್ತ ಮತ್ತೊಂದು ಸೇನಾ ವಿಮಾನ ಕಳೆದ ರಾತ್ರಿ ಅಮೃತಸರದ ಶ್ರೀ ಗುರುರಾಮ್ ದಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. US ಏರ್‌ ಫೋರ್ಸ್ C-17A ಗ್ಲೋಬ್ ಮಾಸ್ಟರ್ ವಿಮಾನದಲ್ಲಿ 112 ಭಾರತೀಯರಿದ್ದರು.

Join Our Whatsapp Group

ಗಡೀಪಾರಾದವರಲ್ಲಿ ಹರಿಯಾಣದ 44, ಪಂಜಾಬ್‌ನ 31, ಗುಜರಾತ್‌ನ 33, ಉತ್ತರ ಪ್ರದೇಶದ ಇಬ್ಬರು, ಹಿಮಾಚಲ ಪ್ರದೇಶದಿಂದ ಓರ್ವರು ಮತ್ತು ಉತ್ತರಾಖಂಡದ ಓರ್ವ ವ್ಯಕ್ತಿ ಇದ್ದಾರೆ. ಇದುವರೆಗೆ ಒಟ್ಟು 335 ಭಾರತೀಯರನ್ನು ಗಡೀಪಾರು ಮಾಡಲಾಗಿದೆ.

ಈ ಕುರಿತು ಮಾಹಿತಿ ನೀಡಿದ ಅಮೃತಸರ ಡೆಪ್ಯುಟಿ ಕಮಿಷನರ್ ಸಾಕ್ಷಿ ಸಾಹ್ನಿ, “ಗಡೀಪಾರು ಮಾಡಲಾದ ಭಾರತೀಯರು ಕ್ಷೇಮವಾಗಿದ್ದಾರೆ. ಆಹಾರ ನೀಡಿದ ಬಳಿಕ ಅವರ ಮನೆಗಳಿಗೆ ಕಳುಹಿಸಲಾಗುವುದು. ನಂತರವೇ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಪೈಕಿ ಮಹಿಳೆಯರು ಮತ್ತು ಕೆಲವು ಮಕ್ಕಳಿದ್ದಾರೆ. ಪಂಜಾಬ್ ಮತ್ತು ಹರಿಯಾಣದ ಜನರನ್ನು ರಸ್ತೆ ಮೂಲಕ ಕಳುಹಿಸಲಾಗುವುದು. ಉಳಿದವರನ್ನು ದೇಶೀಯ ವಿಮಾನದಲ್ಲಿ ದೆಹಲಿಗೆ ಕಳುಹಿಸಲಾಗುವುದು” ಎಂದು ಮಾಹಿತಿ ನೀಡಿದರು.