ಮನೆ ಅಪರಾಧ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಇಬ್ಬರು ಸಾವು

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಇಬ್ಬರು ಸಾವು

0

ಬಸವಕಲ್ಯಾಣ (ಬೀದರ್ ಜಿಲ್ಲೆ): ನಗರದ ತ್ರಿಪುರಾಂತ ಕೆರೆ ಸೇತುವೆಯ ಹತ್ತಿರದಲ್ಲಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Join Our Whatsapp Group

ಗುಂಡಪ್ಪ ಬಿರಾದಾರ (46) ಉಮೇಶ ರಾಜೋಳೆ ( 42) ಮೃತಪಟ್ಟವರು. ಇಬ್ಬರೂ ನಗರದ ತ್ರಿಪುರಾಂತದವರು.  

ರಾಷ್ಟ್ರೀಯ ಹೆದ್ದಾರಿ ಕಡೆಯಿಂದ ನಗರದೊಳಗೆ ಪ್ರವೇಶಿಸುವಾಗ ಸೋಮವಾರ ರಾತ್ರಿ ಅಪಘಾತ ನಡೆದಿದೆ. ಕಾರು ನುಜ್ಜುಗುಜ್ಜಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.