ಮೈಸೂರು: ಸಂಘಟನೆ ಹಾಗೂ ಉತ್ತಮ ಆಡಳಿತ ನೀಡುವಲ್ಲಿ ಶಿವಾಜಿ ಮಹಾರಾಜರು ಚತುರರಾಗಿದ್ದರು. ಮಹಾನ್ ಶಕ್ತಿಶಾಲಿಯಾಗಿದ್ದ ಶಿವಾಜಿ ಮಹಾರಾಜರು ಧೈರ್ಯವಂತರಾಗಿದ್ದು ಮತ್ತು ಪ್ರಜೆಗಳ ಕ್ಷೇಮಕ್ಕೆ ಆದ್ಯತೆಯನ್ನು ನೀಡುತ್ತಿದ್ದರು. ಬ್ರಿಟಿಷರ ವಿರುದ್ಧ ಮತ್ತು ಮೊಘಲರ ವಿರುದ್ಧ ಹೋರಾಟ ಮಾಡಿದವರು ಶಿವಾಜಿ ಮಹಾರಾಜರು ಎಂದು ಚಾಮರಾಜ ಕ್ಷೇತ್ರ ವಿಧಾನಸಭೆ ಶಾಸಕರಾದ ಕೆ ಹರೀಶ್ ಗೌಡ ಅವರು ಹೇಳಿದರು.
ಇಂದು ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಕಲಾಮಂದಿರ ಆವರಣದಲ್ಲಿ ಹಮ್ಮಿಕೊಂಡಿದ್ದ, ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಶಿವಾಜಿ ಮಹಾರಾಜರು ಅವತ್ತಿನ ಕಾಲದಲ್ಲಿ ಅವರು ಮಹಾರಾಜರುಗಳಿಗೆ ಪ್ರೇರೆಪಿತರಾಗಿದ್ದರು. ಯಾವ ರೀತಿ ಹೋರಾಟವನ್ನು ಮಾಡಬೇಕು ತಮ್ಮ ರಾಜ್ಯವನ್ನು, ಪ್ರಜೆಗಳನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು. ಎಂಬುದನ್ನು ತುಂಬಾ ಚೆನ್ನಾಗಿ ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಎಂದು ತಿಳಿಸಿದರು.
ನಾವೆಲ್ಲರೂ ಓದುವ ಸಂದರ್ಭದಲ್ಲಿ ಶಿವಾಜಿಯವರ ಬಗ್ಗೆ ಇತಿಹಾಸ ಇತ್ತು. ಆದರೆ ಮುಂದಿನ ಪೀಳಿಗೆಗೆ ಅದರ ಅರಿವು ಇರಬೇಕು. ಎಂದರೆ ಇಂತಹ ಕಾರ್ಯಕ್ರಮವನ್ನು ಹೆಚ್ಚಾಗಿ ಮಾಡಬೇಕು. ಹಲವಾರು ಮಹಾನ್ ವ್ಯಕ್ತಿಗಳ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಹೇಳಿದರು.
ಶಿವಾಜಿ ಅವರು ನಡೆದು ಬಂದoತಹ ದಾರಿಯನ್ನು ತಿಳಿಸಿ ಆ ಪ್ರೇರಣೆಯನ್ನು ನಾವು ನಮ್ಮ ಸಮಾಜವನ್ನು ಸ್ವಚ್ಛವಾಗಿ ಇಡಬೇಕು. ಅವರು ಹಾಕಿದಂತಹ ಮಾರ್ಗದರ್ಶನದಲ್ಲಿ ಇವತ್ತಿನ ಪೀಳಿಗೆಯು ಅದನ್ನು ಪಾಲಿಸಬೇಕು ಎಂದು ತಿಳಿಸಿದರು.
ವಿಧಾನಸಭಾ ಪರಿಷತ್ತಿನ ಶಾಸಕರಾದ ಸಿ.ಎನ್ ಮಂಜೇಗೌಡ ಅವರು ಹಿಂದೂ ಸಾಮ್ರಾಜ್ಯವನ್ನು ಕಟ್ಟಿದ ಭಾರತದ ಏಕೈಕ ಮೊಟ್ಟ ಮೊದಲಿಗರು ಶಿವಾಜಿ. ಶಿವಾಜಿ ಅವರು ಬಾಲ್ಯದಲ್ಲಿ ಇದ್ದಾಗ ಹುಡುಗರನ್ನು ಸೇರಿಸಿಕೊಂಡು ಸೈನ್ಯವನ್ನು ಕೋಟೆಯನ್ನು ಕಟ್ಟುವ ರೀತಿಯಲ್ಲಿ ಕಟ್ಟಿಕೊಂಡು ಒಳಗೆ ಹೋಗಿ ಶತ್ರುವನ್ನು ದಾಳಿ ಮಾಡುವ ರೀತಿಯಲ್ಲಿ ಅವರು ಆಟವನ್ನು ಆಡುತ್ತಿದ್ದರಂತೆ ಎಂದು ಹೇಳಿದರು.
ನಾವು ಇತಿಹಾಸವನ್ನು ಬರೆಯಬೇಕು, ಓದಬೇಕು. ಇವೆರಡನ್ನು ಮಾಡಿದಾಗ ಮಾತ್ರ ನಾವು ಇತಿಹಾಸವನ್ನು ಸೃಷ್ಟಿ ಮಾಡಲಿಕ್ಕೆ ಸಾಧ್ಯ. ಇತಿಹಾಸವನ್ನು ಮುಂದಿನ ಪೀಳಿಗೆಗೆ ಹೆಚ್ಚಾಗಿ ತಿಳಿಸಬೇಕು ಎಂದರೆ ಇಂತಹ ಕಾರ್ಯಕ್ರಮದಲ್ಲಿ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆದುಕೊಂಡು ಬರಬೇಕು ಆಗ ಮಾತ್ರ ಅವರಿಗೆ ಇತಿಹಾಸದ ಬಗ್ಗೆ ತಿಳಿಯುವುದು ಎಂದು ಹೇಳಿದರು.
ಇಂಥ ಕಾರ್ಯಕ್ರಮದಿಂದ ನಾವೆಲ್ಲರೂ ಸಂಘಟಿತರಾಗಬೇಕು. ಎಲ್ಲರೂ ಇತಿಹಾಸವನ್ನು ತಿಳಿದುಕೊಳ್ಳಬೇಕು. ಇಂತಹ ಕಾರ್ಯಕ್ರಮದಿಂದ ಯುವ ಪೀಳಿಗೆಯ ಪ್ರೇರಿತರಾಗಿ ಪ್ರತಿಯೊಬ್ಬರೂ ಶಿವಾಜಿಯಂತೆ ಅವರ ಮಾರ್ಗದಲ್ಲಿ ಬೆಳೆಯಬೇಕು. ಆದ್ದರಿಂದ ಇಂತಹ ಕಾರ್ಯಕ್ರಮಗಳಿಗೆ ಯುವ ಪೀಳಿಗೆಯವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಅಕ್ಕಮಹಾದೇವಿ ಸಂಶೋಧನಾ ಮತ್ತು ವಿಸ್ತರಣಾ ಪೀಠದ ನಿರ್ದೇಶಕರಾದ ಪ್ರೊ. ಕವಿತಾ ರೈ ಅವರು ಮಾತನಾಡಿ ನಾವು ಅವರ ಜೀವನ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವಾಗ, ಛತ್ರಪತಿ ಶಿವಾಜಿ ಜಯಂತಿಯ ಶ್ರೀಮಂತ ಇತಿಹಾಸ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಆಳವಾಗಿ ಪರಿಶೀಲಿಸಬೇಕು ಎಂದು ಹೇಳಿದರು.
ಇಂದು ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದಲ್ಲಿ ಶಿವಾಜಿ ಜಯಂತಿಯನ್ನು ಅಪಾರ ಹೆಮ್ಮೆ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮರಾಠಾ ಸಮುದಾಯವು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಉತ್ತಮ ಆಸಕ್ತಿಯನ್ನು ತೆಗೆದುಕೊಳ್ಳುತ್ತದೆ. ಪೂಜ್ಯ ಮರಾಠಾ ಚಕ್ರವರ್ತಿಯ ಅಸಾಧಾರಣ ಆಡಳಿತ ಕೌಶಲ್ಯ, ಸಮರ ಶೌರ್ಯ ಮತ್ತು ಮಿಲಿಟರಿ ತಂತ್ರಗಳನ್ನು ಗೌರವಿಸುವ ಗುರಿಯನ್ನು ಹೊಂದಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ.ಡಿ ಸುದರ್ಶನ್, ಪ್ರಭಾಕರ ಸ್ವಾಮೀಜಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ , ಮೈಸೂರ್ ಸಿಟಿ ಶಿವಾಜಿ ಸೊಸೈಟಿ ಅಧ್ಯಕ್ಷರಾದ ನಾಗೇಂದ್ರ ಮತ್ತಿತರು ಉಪಸ್ಥಿತರಿದ್ದರು.














