ಮೈಸೂರು: ಸರ್ವಜ್ಞನರು ಸಹಸ್ರಾರು ವಚನಗಳನ್ನು ರಚಿಸಿದ್ದು, ಅವರ ವಚನಗಳಲ್ಲಿ ಇರುವ ಸಾರವನ್ನು ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ನ ಶಾಸಕರಾದ ಸಿ. ಎನ್.ಮಂಜೇಗೌಡ ಅವರು ಹೇಳಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಸಂತ ಕವಿ ಸರ್ವಜ್ಞ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ನಾವು ಚಿಕ್ಕಂದಿನಿoದಲೂ ಸರ್ವಜ್ಞನ ಬಗ್ಗೆ ಅಧ್ಯಯನವನ್ನು ಮಾಡಿ ತಿಳಿದುಕೊಂಡಿದ್ದೇವೆ. ಇವರು ಕರ್ನಾಟಕಕ್ಕೆ ಅನೇಕ ಕೊಡುಗೆ ಕೊಟ್ಟಿದ್ದಾರೆ. ಇಂತಹ ಮಹಾನ್ ಸರ್ವಜ್ಞರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಸಾಧನೆ ಮಾಡುವುದಕ್ಕೆ ವಯಸ್ಸು ಮುಖ್ಯವಲ್ಲ. ಸಾಧನೆ ಮಾಡುವುದಕ್ಕೆ ಛಲ, ಮನಸ್ಸು ಹಾಗೂ ಆಸಕ್ತಿ ಇರಬೇಕು ಎಂದು ಹೇಳಿದರು.
ಸರ್ವಜ್ಞನ ಇತಿಹಾಸವನ್ನು ಪ್ರತಿಯೊಬ್ಬರು ಓದಿ ತಿಳಿದುಕೊಳ್ಳುವುದು ಬಹಳ ಮುಖ್ಯ, ಅವರು ನಮಗೆ ಕೊಟ್ಟಿರುವಂತಹ ಕೊಡುಗೆ ಅಪಾರವಾದದ್ದು, ಸರ್ವಜ್ಞ ನಂತಹವರು ನಮ್ಮ ಹೆಮ್ಮೆ ಅಂತಹವರ ಕಾರ್ಯಕ್ರಮಗಳು ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಬಾರದು ಎಂದು ಹೇಳಿದರು.
ಸರ್ವಜ್ಞನ ತ್ರಿಪದಿಗಳು ಸರಳತೆ ಹಾಗೂ ಪ್ರಾಸಬದ್ಧತೆಯಿಂದ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿವೆ. ನೈತಿಕ, ಧಾರ್ಮಿಕ ಹಾಗೂ ಸಾಮಾಜಿಕ ವಿಷಯಗಳನ್ನು ಸರ್ವಜ್ಞ ತಮ್ಮ ತ್ರಿಪದಿಯಲ್ಲಿ ಸೇರಿಸಿದ್ದಾರೆ ಅದನ್ನು ನೀವು ತಿಳಿದುಕೊಳ್ಳಬೇಕು. ಮುಂದೆ ನಡೆಯಲಿರುವ ಬಜೆಟ್ನಲ್ಲಿ ಮಾತನಾಡಿ ಮೈಸೂರಿನಲ್ಲಿ ಸರ್ವಜ್ಞ ಸರ್ಕಲ್ ಮತ್ತು ಬಡಾವಣೆ ಮಾಡುವುದರ ಬಗ್ಗೆ ವಿಷಯವನ್ನು ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು.
ನಾವು ಯಾವುದೇ ಕಾರ್ಯಕ್ರಮವನ್ನ ನೋಡಿದರು ಸಹ 1600 ವರ್ಷಗಳ ಹಳೆಯ ಸಾಧಕರ ಬಗ್ಗೆಯೇ ಕಾರ್ಯಕ್ರಮವನ್ನು ಆಚರಣೆಗಳನ್ನು ಮಾಡುತ್ತಾ ಬರುತ್ತಿದ್ದೇವೆ ಹೊಸಬರು ಅಂತಹ ಪುಣ್ಯತ್ಮರೂ ಇನ್ನೂ ಹುಟ್ಟಿ ಬಂದಿಲ್ಲವಲ್ಲ ಎಂದು ಹೇಳಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.
ಸರ್ಕಾರ ಇಂತಹ ಕಾರ್ಯಕ್ರಮವನ್ನು ನಡೆಸುತ್ತಾ ಬರುವುದು ಮುಂದಿನ ಪೀಳಿಗೆಯವರಿಗೆ ದಾರಿಯಾಗುತ್ತದೆ ಎಂದು. ಇಂತಹ ಕಾರ್ಯಕ್ರಮಗಳಿಗೆ ಬರುವಾಗ ಮಕ್ಕಳನ್ನು ಬಿಟ್ಟು ಬರುತ್ತಿದ್ದೀರಾ ಮಕ್ಕಳನ್ನು ಮೊದಲು ಇಂತಹ ಕಾರ್ಯಕ್ರಮಗಳಿಗೆ ಕರೆದುಕೊಂಡು ಬರಬೇಕು. ಅವರನ್ನು ಇಂತಹ ಕಾರ್ಯಮಕ್ರಮಗಳಿಗೆ ಕರೆದುಕೊಂದು ಬರುವುದರಿಂದ ಅವರಿಗೂ ಸಹ ವಚನ, ಸಾಹಿತ್ಯದ ಬಗ್ಗೆ ತಿಳುವಳಿಕೆ ಮೂಡುತ್ತದೆ. ಇಂದರಿoದ ಮುಂದಿನ ಪೀಳಿಗೆಯವರಿಗೆ ತಿಳಿಸಲು ಸಹಾಯವಾಗುತ್ತದೆ ಎಂದರು.
ಜನಸAಖ್ಯೆ ಕಡಿಮೆ ಇರಬಹುದು ಆದರೆ ದಕ್ಷತೆ ಹೆಚ್ಚಾಗಿ ಕೆಲಸ ಮಾಡುವಂತಹ ಹುಮ್ಮಸ್ಸು ಜಾಸ್ತಿ ಇರಬೇಕು. ಯಾವಾಗಲೂ ಸಂಖ್ಯೆಗಿAತ ಗುಣಮಟ್ಟ ಮುಖ್ಯ ಎಂಬ ಮಾತನ್ನು ಹೇಳಿದರು.
ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಕೆ. ಎಂ ಗಾಯತ್ರಿ ಅವರು ಮಾತನಾಡಿ ಸರ್ವಜ್ಞ ಸರ್ವ ವ್ಯಾಪಿ ಎಂಬುದು ಸರ್ವ ಸತ್ಯ. ಅವರ ಒಂದು ಅಂಶವನ್ನಾದರೂ ಅಳವಸಿಡಿಕೊಂಡು ಸಾಧನೆ ಮಾಡಬೇಕು ಎಂದು ಹೇಳಿದರು.
ಸರ್ವ ವ್ಯಾಪ್ತಿಯಾಗಿ ಎಲ್ಲದರ ಬಗ್ಗೆಯೂ ಸರ್ವಜ್ಞ ತಿಳಿದು ಬರೆದಿದ್ದಾರೆ. ಸಮಾಜದ ಅಂಕುಡೊoಕುಗಳನ್ನು ಹೇಳುವುದರ ಮೂಲಕ ಮೂಢನಂಬಿಕೆಯನ್ನು ತೊಡೆದುಹಾಕಿ ಇಡೀ ಸಮಾಜಕ್ಕೆ ಅರಿವು ಮೂಡಿಸಿದ್ದಾರೆ ಎಂದು ತಿಳಿಸಿದರು.
ಸರ್ವಜ್ಞ ಎಂಬ ಮಾತು ಎಲ್ಲರ ಬಾಯಲ್ಲಿ ಬರುವಂತಹ ವಿಚಾರವಾಗಿದೆ. ಇವರು ಶಿಕ್ಷಣದ ಬಗ್ಗೆ ಅನೇಕ ವಿಚಾರಗಳನ್ನು ಹೇಳಿದ್ದಾರೆ. ಇವರು ಶಿಕ್ಷಣಕ್ಕೆ ಕೊಟ್ಟಿರುವಂತಹ ಕೊಡುಗೆ ಅಪಾರವಾದದ್ದು, ಸಾರ್ವಜನಿಕರ ಸೇವೆಯಲ್ಲಿ ಅವರನ್ನು ಅವರು ತೊಡಗಿಸಿಕೊಂಡಿದ್ದಾರೆ ಎಂದರೆ ಅದು ಅವರು ಪಡೆದಂತ ಶಿಕ್ಷಣ, ಸಂಸ್ಕಾರ ಇವೆಲ್ಲವೂ ಸಹಕಾರ ಆಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರು ಶಿಕ್ಷಕರಾಗಬೇಕು ಎಂಬ ಕರೆಯನ್ನು ನಮಗೆ ಕೊಟ್ಟಿದ್ದಾರೆ ಅದನ್ನು ಉಪಯೋಗ ಮಾಡಿಕೊಳ್ಳಿ ಎಂದು ತಿಳಿಸಿದರು.
ಸರ್ವಜ್ಞರ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ನಡೆದುಕೊಂಡು ಬಂದoತಹ ತತ್ವಗಳು ನಮಗೆ ಪಾಲನೆಯಾಗಬೇಕು. ಅವರ ಒಂದು ಅಂಶಗಳನ್ನು ನಮ್ಮಲ್ಲಿ ಮತ್ತೆ ನಮ್ಮ ಮಕ್ಕಳಲ್ಲಿ ಅಳವಡಿಸಬೇಕು. ಸರ್ವಜ್ಞರು ಎಲ್ಲರಿಗೂ ಮಾದರಿಯಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸರ್ವಜ್ಞರ ಜಯಂತಿಯಲ್ಲಿ ಪಾಲ್ಗೊಳ್ಳುವುದರ ಮೂಲಕ ಅವರ ಆದರ್ಶ ಮತ್ತು ತತ್ವಗಳನ್ನೂ ಮುಂದಕ್ಕೆ ತೆಗೆದುಕೊಂಡು ಹೋಗುವಂತಹ ಪ್ರಯತ್ನವನ್ನು ಮಾಡಬೇಕು. ಬರಿ ಜಯಂತಿಗೆ ಮಾತ್ರ ಸೀಮಿತವಾಗದೆ ಅವರ ಬಗ್ಗೆ ಕಾರ್ಯಗಾರವನ್ನು ಏರ್ಪಡಿಸಿ ಅವರ ವಚನಗಳು ಹಾಗೂ ಚಿಂತನೆಗಳ ಚರ್ಚೆ ಪ್ರಾರಂಭವಾಗುವoತೆ ಮಾಡಬೇಕು. ಸರ್ವಜ್ಞನ ವಚನಗಳು ಸಾರ್ವಜನಿಕವಾಗಿ ಮುಂದಿನ ಜನಾಂಗಗಳಿಗೆ ತಲುಪಿಸಬೇಕು ಎಂದು ಹೇಳಿದರು.
ಮಡಿಕೇರಿ, ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಡಾ.ಸಿ.ರೇಣುಕಾಂಬ ಅವರು ಮಾತನಾಡಿ ಕನ್ನಡ ವಾಗ್ದೇವಿ ತನ್ನ ಬಾಹುಗಳಿಂದ ಅನೇಕ ವ್ಯಕ್ತಿಗಳನ್ನು ರೂಪಿಸಿದ್ದಾರೆ ಅಂತಹ ವಾಗ್ದೇವಿಯ ಪುತ್ರರಾಗಿರುವವರಲ್ಲಿ ಸರ್ವಜ್ಞರು ಒಬ್ಬ ಎಂದು ಹೇಳಿದರು.
ಸರ್ವಜ್ಞ ಎಂಬುದು ಹೆಸರಲ್ಲಿಯೇ ಅಡಗಿದೆ ಸರ್ವಜ್ಞ ಎಂದರೆ ದೇವರು. ಎಲ್ಲವನ್ನೂ ತಿಳಿದ ವ್ಯಕ್ತಿಯನ್ನು ದೇವರು ಎಂದು ಕರೆಯುತ್ತೇವೆ. ಇಂತಹ ರೀತಿಯ ನಾಮಾಂಕಿತ ಪ್ರಪಂಚದ ಯಾವುದೇ ರಾಷ್ಟ್ರದ ಕವಿಗಳಿಗೆ ಸಿಕ್ಕಿಲ್ಲ ನಮ್ಮ ಜನಾಂಗದ ಸರ್ವಜ್ಞ ಪಡೆದುಕೊಂಡಿದ್ದಾರೆ ಇದು ಸಮಾಜದಿಂದ ದೊರಕಿರುವಂತಹ ಬಿರುದು ಎಂದು ತಿಳಿಸಿದರು.
ಇವರು ಇಡೀ ಪ್ರಪಂಚದಲ್ಲಿಯೇ ಅಮರ ಕವಿ. ಕನ್ನಡ ಭಾಷೆ ಹಾಗೂ ಆಡು ಭಾಷೆಗೆ ಇವರ ಕೊಡುಗೆ ಅಪಾರವಾಗಿದೆ. ಇವರು ಜನತಾ ಕವಿಯಾಗಿದ್ದರು ಜನರ ಮಧ್ಯೆಯಲ್ಲಿಯೇ ಕನ್ನಡವನ್ನು ಉತ್ತುಂಗಕ್ಕೆ ಏರಿಸಿವರು ಕವಿ ಸರ್ವಜ್ಞ ಮಾತ್ರ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಕುಲಾಲಗುಂಡ ಬ್ರಹಾಯ್ ಕುಂಬಾರ ಸಂಘದ ಅಧ್ಯಕ್ಷರಾದ ಹೆಚ್.ಎಸ್ ಪ್ರಕಾಶ್, ಪ್ರಧಾನ ಕಾರ್ಯದರ್ಶಿಯಾದ ಕೆ.ಆರ್ ಸೋಮಶೇಖರ್, ಪಿಡಬ್ಲೂಡಿ ಇಲಾಖೆಯ ನಿವೃತ್ತ ಮುಖ್ಯ ಅಭಿಯಂತರರಾದ ಶ್ರೀನಿವಾಸ್, ಕರ್ನಾಟಕ ಲೋಕ ಸೇವಾ ಆಯೋಗದ ಮಾಜಿ ಅಧ್ಯಕ್ಷರಾದ ಡಾ.ಡಿ.ಎಸ್ ಕೃಷ್ಣ ಪ್ರಸಾದ್, ಶಾಲಿವಾಹನ ವಿವಿದೋದ್ದೇಶ ಕೈಗಾರಿಕಾ ಸಂಘದ ಮಂಜುನಾಥ, ಕರ್ನಾಟಕ ಜಾಗೃತಿ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷರಾದ ಕೆ.ಶಿವರಾಮ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.














