ಮನೆ ಅಪರಾಧ ಮಣಿಪುರ: ವಿವಿಧ ನಿಷೇಧಿತ ಸಂಘಟನೆಗಳಿಗೆ ಸೇರಿದ 17 ಉಗ್ರರ ಬಂಧನ

ಮಣಿಪುರ: ವಿವಿಧ ನಿಷೇಧಿತ ಸಂಘಟನೆಗಳಿಗೆ ಸೇರಿದ 17 ಉಗ್ರರ ಬಂಧನ

0

ಇಂಫಾಲ: ಕಳೆದ 24 ಗಂಟೆಗಳಲ್ಲಿ ಮಣಿಪುರದ ನಾಲ್ಕು ಜಿಲ್ಲೆಗಳಲ್ಲಿ ವಿವಿಧ ನಿಷೇಧಿತ ಸಂಘಟನೆಗಳಿಗೆ ಸೇರಿದ 17 ಮಂದಿ ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

Join Our Whatsapp Group

ನಿಷೇಧಿತ ಕಾಂಗ್ಲೇ ಯಾವೋಲ್ ಕನ್ನಾ ಲುಪ್ (ಕೆವೈಕೆಎಲ್) ಸಂಘಟನೆಗೆ ಸೇರಿದ 13 ಉಗ್ರರನ್ನು ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಕಿಯಾಮ್ ಲೈಕೈ ಪ್ರದೇಶದಲ್ಲಿ ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಂಧಿತರಿಂದ ಒಟ್ಟು 27 ಕಾರ್ಟ್ರಿಡ್ಜ್‌ಗಳು, 3 ವಾಕಿ-ಟಾಕಿ ಸೆಟ್‌ಗಳು ಮತ್ತು ಇತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆಗಾಗಿ  ಬಂಧಿತರನ್ನು  ಇಂಫಾಲ್‌ಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದ್ದಾರೆ.

ನಿಷೇಧಿತ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (ಪಿ)ನ ಓರ್ವನನ್ನು ಇಂಫಾಲ್ ಪೂರ್ವ ಜಿಲ್ಲೆಯ ಪ್ರದೇಶದಲ್ಲಿ ಗುರುವಾರ ಬಂಧಿಸಲಾಗಿದೆ. ಬಂಧಿತ ವ್ಯಕ್ತಿ ಸುಲಿಗೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ.  ಕಾಂಗ್ಲೇಪಕ್ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರನ್ನು ಬಿಷ್ಣುಪುರ್ ಜಿಲ್ಲೆಯ ನ್ಗೈಖೋಂಗ್ ಖುಲ್ಲೆನ್ ಪ್ರದೇಶದಲ್ಲಿ  ಭದ್ರತಾ ಪಡೆಗಳು ಗುರುವಾರ ಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಕ್ಚಿಂಗ್ ಜಿಲ್ಲೆಯ ಕಕ್ಚಿಂಗ್ ಸುಮಾಕ್ ಲೈಕೈ ಪ್ರದೇಶದಲ್ಲಿ ಸುಲಿಗೆ ಚಟುವಟಿಕೆಯಲ್ಲಿ ತೊಡಗಿದ್ದ ಕಂಗ್ಲೇ ಯಾವೋಲ್ ಕನ್ನಾ ಲುಪ್ (ಕೆವೈಕೆಎಲ್)ನ  ಓರ್ವ  ಕಾರ್ಯಕರ್ತನನ್ನು ಹಾಗೂ ಇಂಫಾಲ್ ಪಶ್ಚಿಮ ಜಿಲ್ಲೆಯ ಫಿಡಿಂಗಾದಲ್ಲಿ ಕೆಸಿಪಿ (ಪಿಡಬ್ಲ್ಯೂಜಿ) ಕೇಡರ್‌ನನ್ನು ಭದ್ರತಾ ಪಡೆಗಳು ಬಂಧಿಸಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.