ತುಟ್ಟಿ ಬೆಲೆಯ ಆಲ್ಕೋಹಾಲ್ ಪಾನೀಯಗಳನ್ನು ಸೇವಿಸುವುದು ಪ್ರತಿಷ್ಠೆಯ ವಿಚಾರ ‘ಅವನೇನಪ್ಪ, ರಾಜನಂತೆ ಜೀವನ ಮಾಡುತ್ತಾನೆ. ಅವನು ಕುಡಿಯೋದು ಏನು ಗೊತ್ತಾ. ರಾಯಲ್ ಸಲ್ಯೂಟ್, ಫಾರಿನ್ನಿಂದ ತರಿಸೋ ಡ್ರಿಂಕ್ಸ್ನ ಮಾತ್ರ ಅವನು ಮುಟ್ಟೋದು.”
“ಪಾರ್ಟಿಗೆ ದೊಡ್ಡ ದೊಡ್ಡೋರು ಎಲ್ಲಾ ಬತ್ತಾರೆ. ಟಾಪ್ ಕ್ಲಾಸ್ ಜನ ಬರುವಾಗ, ಕ್ವಾಲಿಟಿ ಡ್ರಿಂಕ್ಸ್ ಇಡಲೇಬೇಕು. ವಿಸ್ಕಿ, ರಮ್, ಜೀನ್ ಅಂತ ಏನೂ ಕೊಡದೇ ಹೋದರೆ ಅವರೇನು ತಿಳಿದುಕೊಳ್ತಾರೆ. ನಮ್ಮ ಪ್ರತಿಷ್ಠೆ ಏನಾಗುತ್ತೆ ಅಂತ ಯೋಚನೆ ಮಾಡಿದ್ದೀಯ.”
ಹೀಗೆ ಅತಿಬೆಲೆಯ ಹೊರದೇಶದಿಂದ ಆಮದಾದ, ಹೆಚ್ಚು ಅಮಲು ಬರುವ ಮದ್ಯವನ್ನು ಕೊಡುವುದು ಮತ್ತು ಸೇವಿಸುವುದು ನಾಗರೀಕತೆಯ ಲಕ್ಷಣ ಎಂತಲೋ ಪ್ರತಿಷ್ಠೆಯ ವಿಚಾರವೆಂತಲೋ, ಕೆಲವು ವರ್ಗಗಳ ಜನ ತಿಳಿಯುತ್ತಾರೆ. ಇದಕ್ಕಿಂತ ಅನುಚಿತವಾದ ವಿಚಾರ ಬೇರೊಂದಿಲ್ಲ ಎನ್ನಬಹುದು. ಮನುಷ್ಯನ ಆರೋಗ್ಯವನ್ನು, ವ್ಯಕ್ತಿತ್ವವನ್ನು ಹಾಳುಮಾಡುವ ಆಲೋಹಾಲನ್ನು ಆತಿಥ್ಯದ ಒಂದು ಭಾಗವಾಗಿ ಕೊಡುವುದು (ತೆಗೆದುಕೊಳ್ಳುವುದು) ಖಂಡಿತ ಸಭ್ಯ-ನಾಗರೀಕರ ಲಕ್ಷಣವಲ್ಲ.
ಅಗ್ಗದ ಮದ್ಯ ಹಾನಿಕಾರಕ, ಆದರೆ ತುಟ್ಟಿ ಬೆಲೆಯ ಮದ್ಯ ಹಾನಿಕಾರಿ ಅಲ್ಲ :
‘ನಾನು ಅರಾಕ್, ಸಾರಾಯಿ, ಕಳ್ಳಭಟ್ಟಿ ಇವನ್ನೆಲ್ಲಾ ಮುಟ್ಟೋದಿಲ್ಲಪ್ಪ. ಕುಡಿದರೆ ಬ್ರಾಂದಿ / ವಿಸ್ಕಿ ಮಾತ್ರ. ಲೈಸೆನ್ಸ್ ಇರುವ ಅಂಗಡಿಯಿಂದ ಕೊಂಡು?
ಉಪಯೋಗಿಸುತ್ತೇವೆ. ಹೆಚ್ಚಿನ ಬೆಲೆಯ ಈ ಆಲ್ಕೋಹಾಲ್ನಿಂದ ಏನೂ ಹಾನಿ ಇಲ್ಲ. ಹೀಗೆ ಜನ, ಹೆಚ್ಚು ಬೆಲೆ ಕೊಟ್ಟು ತಾವು ಕುಡಿಯುವ ಮದ್ಯಸಾರ ಸುರಕ್ಷಿತ ಎಂದು ತಿಳಿಯುತ್ತಾರೆ. ಆದರೆ ಅವರು ತಿಳಿದಿರುವಂತೆ ಇದೂ ಸುರಕ್ಷಿತವಲ್ಲ, ಅಗ್ಗದ ಅಥವಾ ಕಳ್ಳಭಟ್ಟಿಯ ಮದ್ಯ ಹೆಚ್ಚು ಹಾನಿಕಾರಿ. ಹಾಗೆಯೇ ಬ್ರಾಂದಿ ವಿಸ್ಕಿ ಕೂಡ. ಮದ್ಯಸಾರ ಯಾವುದೇ ಇರಲಿ, ಅದು ಹಾನಿಕಾರಕ ಎಂಬುದರಲ್ಲಿ ಇನಿತೂ ಸಂಶಯ ಬೇಡ.
*ಮದ್ಯಪಾನದ ಜೊತೆಗೆ, ಪುಷ್ಟಿಕರವಾದ ಆಹಾರ ತಿಂದರೆ, ಮದ್ಯಸಾರ ದಿಂದ ಯಾವ ಹಾನಿಯೂ ಆಗುವುದಿಲ್ಲ :
“ಪಾಪ ಬಡವರು / ಕುಡುಕರು ಪುಷ್ಟಿಕರ ಆಹಾರವನ್ನು ತಿನ್ನುವುದಿಲ್ಲ. ಅವರ ದೇಹ ದುರ್ಬಲವಾಗಿರುತ್ತದೆ. ಅದಕ್ಕೇ ಮದ್ಯಪಾನದಿಂದ ಅವರಿಗೆ ಕಾಯಿಲೆ ಬರುತ್ತದೆ. ನಾವು ಅನುಕೂಲವಂತರು, ಮದ್ಯಪಾನದ ಜೊತೆಗೆ ಒಳ್ಳೆಯ ಪುಷ್ಟಿಕರ ವಾದ, ತುಟ್ಟಿ ಬೆಲೆಯ ಆಹಾರವನ್ನು ಸೇವಿಸುತ್ತೇವೆ ನಮಗೆ ಯಾವ ಕಾಯಿಲೆಯೂ ಬರುವುದಿಲ್ಲ” ಎನ್ನುತ್ತಾರೆ ಕೆಲವರು.
ಮೊದಲೇ ಅಪೌಷ್ಟಿಕತೆಯಿಂದ ಬಳಲುತ್ತಿರುವ ವ್ಯಕ್ತಿ ಮದ್ಯ ವ್ಯಸನಿಯಾದರೆ ಬಹುಬೇಗ ಕಾಯಿಲೆಗೆ ತುತ್ತಾಗುತ್ತಾನೆ. ಅಂತೆಯೇ ಊಟ ಮಾಡದೇ, ಬರೀ ಆಲ್ನೋಹಾಲ್ನಿಂದ ಹೊಟ್ಟೆ ತುಂಬಿಸಿಕೊಳ್ಳುವ ವ್ಯಕ್ತಿ ಬಹುಬೇಗ ಹಾನಿಗೊಳಗಾಗು ತ್ತಾನೆ. ಅಂದಮಾತ್ರಕ್ಕೆ ಪುಷ್ಟಿಯಾದ ಆಹಾರ ಸೇವನೆ, ಮದ್ಯಸಾರದಿಂದ ಉಂಟಾಗುವ ಹಾನಿಯನ್ನು ಸ್ವಲ್ಪ ಕಾಲ ಮುಂದೂಡಬಹುದೇ ವಿನಃ, ಹಾನಿಯನ್ನು ತಡೆಗಟ್ಟು ವುದಿಲ್ಲ. ಒಳ್ಳೆಯ ಆಹಾರ ಸೇವಿಸಿದರೂ, ಕಾಲ ಕ್ರಮೇಣ, ವ್ಯಕ್ತಿ ಆಲೋಹಾಲ್ ನಿಂದಾಗಿ, ಕಾಯಿಲೆಗೆ ಒಳಗಾಗುವುದು ಖಂಡಿತ.
ಆಲೋಹಾಲ್ ಸೇವನೆಯ ಮೇಲಿನ ಹತೋಟಿ ನನ್ನ ಕೈಲಿದೆ. ಬೇಕೆಂದಾಗ ಬಿಡಬಲ್ಲೆ
ಇದು ಪ್ರತಿಯೊಬ್ಬ ಆಲೋಹಾಲ್ ಸೇವನೆ ಮಾಡುವ ವ್ಯಕ್ತಿಯ ಪ್ರಬಲ ನಂಬಿಕೆ. “ನನ್ನ ಮೇಲೆ ನನಗೆ ವಿಶ್ವಾಸವಿದೆ ಸಾರ್, ನಾನು ಮಾಲೀಕ, ಆಲ್ಕೋಹಾಲ್ ಬೇಡ ಎಂದರೆ, ಈಗಲೇ ಬಿಡಬಲ್ಲೆ. ಅದರ ಮೇಲೆ ನನಗೆ ಸಂಪೂರ್ಣ ಹತೋಟಿ ಇದೆ. ನಾನು ಚಟಕ್ಕೆ ಒಳಗಾಗುವವನಲ್ಲ ನನ್ನ ಹೆಂಡತಿ, ತಾಯಿ ಸುಮ್ಮನೆ ಭಯಪಡುತ್ತಾರೆ. ಹೋದ ವರ್ಷ ಅಯ್ಯಪ್ಪ ಸ್ವಾಮಿ ಮಾಲೆ ಹಾಕಿ ಕೊಂಡಿದ್ದಾಗ, ಒಂದು ತಿಂಗಳು ಆಲ್ಕೋಹಾಲ್ನ ವಾಸನೆಯನ್ನೂ ಕುಡಿಯಲಿಲ್ಲ. ನಿಜವೋ ಇಲ್ಲವೋ ಕೇಳಿ ನೋಡಿ ಏನೋ ಆಗೊಮ್ಮೆ ಈಗೊಮ್ಮೆ. ಮನಸ್ಸಿಗೆ ಬೇಸರವಾದಾಗ ಅಥವಾ ಖುಷಿಪಡಬೇಕು ಅಂತ ಅನಿಸಿದಾಗ ಸ್ವಲ್ಪ ಡ್ರಿಂಕ್ ತೆಗೆದುಕೊಳ್ಳುತ್ತೇನೆ ಅಷ್ಟೆ” ಎಂದ ಒಬ್ಬ ವ್ಯಕ್ತಿ.
ಚೀನಾದಲ್ಲಿ ಒಂದು ಗಾದೆ ಇದೆ. ಶುರುವಿನಲ್ಲಿ ವ್ಯಕ್ತಿ ಮಾಲೀಕ, ಆಲ್ಲೋಹಾಲ್ ಗುಲಾಮ ಕೊನೆಗೆ ಆಲ್ಕೋಹಾಲ್ ಮಾಲೀಕ, ವ್ಯಕ್ತಿ ಗುಲಾಮನಾಗು ತಾನೆ ಅಂತ. ಹಾಗೇ ಮತ್ತೊಂದು ನಾಣ್ಣುಡಿ – In the beginning man takes the alcohol. Then alcohol takes alcohol. Later alcohol takes the mana ಅಕ್ಷರಶಃ ಸತ್ಯ
ಆಲೋಹಾಲ್ ಸೇವಿಸುವುದು, ಕೆಸರಿನಲ್ಲಿ ಕಾಲಿಟ್ಟಂತೆ. ಯಾವಾಗ ಕಾಲುಗಳು ಹೂತುಹೋಗುತ್ತವೆಯೋ, ಯಾವಾಗ ಇಡೀ ದೇಹವೇ ಹೂತುಹೋಗುವುದೋ ಹೇಳಲು ಬರುವುದಿಲ್ಲ. ಆದ್ದರಿಂದ ಆಲ್ಕೋಹಾಲ್ನಿಂದ ದೂರವಿರುವುದೇ ಕ್ಷೇಮ.
ಗಾಂಜಾ / ಭಂಗಿ ಸೇದಿದರೆ, ಕುಡಿದರೆ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ :
ಚಂಚಲತೆ, ಏಕಾಗ್ರತೆಯ ಕೊರತೆಯಿಂದ ಬಳಲುವ ವಿದ್ಯಾರ್ಥಿಗಳು ಗಾಂಜಾವನ್ನು ಸೇದಿ ತಮ್ಮ ಏಕಾಗ್ರತೆ ಹೆಚ್ಚುತ್ತದೆ ಎಂಬ ನಿರೀಕ್ಷೆ ಮಾಡುತ್ತಾರೆ. ಗಾಂಜಾ ಸೇದಲು ಅವರಿಗೆ ಅವರ ಸ್ನೇಹಿತರು. ಗಾಂಜಾ ಮಾರಾಟ ಮಾಡುವವರು ಸಲಹೆ ನೀಡುತ್ತಾರೆ. ಗಾಂಜಾಗೆ ಈ ಶಕ್ತಿ ಅನುಕೂಲವನ್ನುಂಟು ಮಾಡುವ ಸಾಮರ್ಥ್ಯವಿಲ್ಲ, ಏಕಾಗ್ರತೆ ಹೆಚ್ಚಲು ಧ್ಯಾನ, ಯೋಗ, ಸಂಗೀತ ಸಹಾಯಕಾರಿ.
‘ಗಾಂಜಾ ಸೇವನೆಯಿಂದ ಮನಸ್ಸನ್ನು ದೇವರಲ್ಲಿ ಆಧ್ಯಾತ್ಮಿಕದಲ್ಲಿ ತೊಡಗಿಸಲು ಸಾಧ್ಯವಾಗುತ್ತದೆ’ :
ಅನೇಕ ಮಠ, ದೇವಸ್ಥಾನಗಳಲ್ಲಿ ಗಾಂಜಾ ಸೇದುವುದು, ಭಂಗಿ ಕುಡಿಯು ವುದು, ಧಾರ್ಮಿಕ ಆಚರಣೆ ಎನಿಸಿಕೊಳ್ಳುತ್ತದೆ. ಭೋಗ ಲಾಲಸೆಗಳಿಂದ ಮನಸ್ಸನ್ನು ದೂರ ಮಾಡಿ ದೈವದಲ್ಲಿ ಧಾರ್ಮಿಕ ವಿಧಿಗಳಲ್ಲಿ ತೊಡಗಿಸಲು ಗಾಂಜಾ ಸಹಾಯ ಮಾಡುತ್ತದೆ ಎಂಬ ಮಾತನ್ನು ಗಾಂಜಾ ಸೇದುವ ಸ್ವಾಮಿ / ಗುರು / ಪೂಜಾರಿ ಹೇಳುವುದರಿಂದ ಎಲ್ಲರೂ jಅದನ್ನು ನಂಬುತ್ತಾರೆ. ಹೀಗಾಗಿ ಅನೇಕ ಮಠ ದೇವಾಲಯ, ಜಾತ್ರೆಗಳು ಗಾಂಜಾ ಸೇವನೆಗೆ ಕುಮ್ಮಕ್ಕು ನೀಡುತ್ತವೆ. ಇದು ತಪ್ಪಬೇಕು. ಗಾಂಜಾಗೆ ಅಂತಹ ಸಾಮರ್ಥ್ಯವಿಲ್ಲ ಗಾಂಜಾ ಸೇದಲು ಇದು ನೆಪವಾಗುತ್ತದೆ ಅಷ್ಟೆ
ಗಾಂಜಾ, ಅಫೀಮು, ಎಲ್.ಎಸ್.ಡಿ. ಸೇವಿಸುವುದರಿಂದ ಸೃಜನ ಶೀಲತೆ, ರಮ್ಯ ಕಲ್ಪನೆ ಹೆಚ್ಚುತ್ತದೆ
ಅನೇಕ ಕಲಾವಿದರು ಇದನ್ನು ನಂಬುತ್ತಾರೆ. ತಮ್ಮ ಸೃಜನಶೀಲತೆಯನ್ನು ಹೆಚ್ಚಿಸಿಕೊಳ್ಳಲು ಗಾಂಜಾ, ಮದ್ಯ, ಅಫೀಮಿನಂತಹ ಮಾದಕವಸ್ತುಗಳ ಮೊರೆಹೋಗು ತ್ತಾರೆ. ಇದೂ ಒಂದು ಮಿಥ್ಯಾ ನಂಬಿಕೆ.
ನಲಿವು (ಪ್ರಾರಂಭದಲ್ಲಿ) ಈ ಮಾದಕ ಪದಾರ್ಥಗಳು ಪ್ರಾರಂಭದಲ್ಲಿ ವ್ಯಕ್ತಿಗೆ ಖುಷಿ ಉಂಟು ಮಾಡುವ ಅನುಭವಗಳನ್ನು ಕೊಡುತ್ತವೆ. ಉದಾಹರಣೆಗೆ, ಸ್ವಲ್ಪ ಪ್ರಮಾಣದಲ್ಲಿ ಮದ್ಯ ಸೇವಿಸಿದಾಗ ವ್ಯಕ್ತಿಗೆ ‘ನಾನು ಚೆನ್ನಾಗಿದ್ದೇನೆ’ ಎನ್ನುವ ಭಾವನೆ ಉಂಟಾಗುತ್ತದೆ. ಖುಷಿಯಾಗುತ್ತದೆ. ಬೇಸರ ಅಹಿತಕರ ಭಾವನೆಗಳು ಇಲ್ಲವಾಗುತ್ತವೆ. ಮನಸ್ಸಿನ ಹಿಂಜರಿಕೆ, ಪ್ರತಿಬಂಧಕಗಳು ದೂರವಾಗಿ, ವ್ಯಕ್ತಿ ಕಡಿವಾಣವಿಲ್ಲದ ಕುದುರೆಯಂತಾಗು ತ್ತಾನೆ. ಎಗ್ಗಿಲ್ಲದ ಮಾತು ನಡೆವಳಿಕೆಗಳು ಕಾಣಿಸಿಕೊಳ್ಳುತ್ತವೆ.
ಗಾಂಜಾ ಅಥವಾ ಭಂಗಿ ಸೇದಿದಾಗ, ವ್ಯಕ್ತಿ ತಾನಿರುವ ಕಾಲ, ಸ್ಥಳವನ್ನು ಮರೆಯುತ್ತಾನೆ. ಗಾಳಿಯಲ್ಲಿ ತೇಲಾಡಿದಂತೆ ಭಾಸವಾಗುತ್ತದೆ. ಪಂಚೇಂದ್ರಿಯಗಳ ಮೂಲಕ ಬರುವ ಸಾಮಾನ್ಯ ಅನುಭವಗಳು, ಆಗ ಅಸಾಮಾನ್ಯ ಅನುಭವಗಳಾಗಿ ಪರಿವರ್ತಿತವಾಗುತ್ತವೆ ಮಾಮೂಲು ಬಣ್ಣಗಳು ಝಗಝಗಿಸಿ ಕಣ್ಣು ಕೋರೈಸು ತ್ತವೆ. ಪ್ರತಿಯೊಂದು ಶಬ್ದವೂ ಸಂಗೀತವಾಗುತ್ತದೆ. ಯಾವುದೇ ವಾಸನೆ ಮತ್ತೇರಿಸು ಇದೆ: ಸ್ಪರ್ಶ ರೋಮಾಂಚನವನ್ನು ತರುತ್ತದೆ. ವ್ಯಕ್ತಿಯ ನಿರೀಕ್ಷೆಯಂತೆ, ಆತ ತಾನು ಸ್ವರ್ಗದಲ್ಲಿದ್ದಂತೆ. ದೈವ ಸನ್ನಿಧಿಯಲ್ಲಿದ್ದಂತೆ ಭ್ರಮಾಧೀನನಾಗುತ್ತಾನೆ.
ಅಫೀಮು, ಮಾರ್ಫಿನ್ ಅಥವಾ ಪೆಥಿಡಿನ್ ಸೂಜಿಮದ್ದನ್ನು ತೆಗೆದುಕೊಂಡ ವ್ಯಕ್ತಿಗೆ ದೇಹದಲ್ಲಿ ಯಾವುದೇ ರೀತಿಯ ತೀವ್ರ ನೋವಿದ್ದರೂ ಗೊತ್ತಾಗುವುದಿಲ್ಲ. ಹಾಗೆಯೇ ಹೆರಾಯಿನ್, ಬ್ರೌನ್ ಶುಗರ್ ಸೇವನೆ ಕೂಡ. ಈ ಔಷಧ ಒಂದು ರೀತಿಯ ಖುಷಿ ಕೊಡುವ ಮತ್ತನ್ನುಂಟುಮಾಡುತ್ತದೆ; ಸುಖ ನಿದ್ರೆ ತರುತ್ತದೆ.
ಎಲ್.ಎಸ್.ಡಿ. ಸೂಜಿಮದ್ದನ್ನು ತೆಗೆದುಕೊಂಡ ವ್ಯಕ್ತಿಗೆ, ಅನೇಕ ವಿಚಿತ್ರ ವಾದ, ಖುಷಿ ಕೊಡುವ ಅನುಭವಗಳಾಗುತ್ತವೆ ಸುಖದ ಶಿಖರವನ್ನು ಮುಟ್ಟಿದಂತೆ ದೇವರು ಅಥವಾ ಬ್ರಹ್ಮಾಂಡದೊಂದಿಗೆ ತಾನೂ ಒಂದಾದಂತೆ ಭ್ರಮೆಯಾಗಬಹುದು.
ನಿದ್ರಾಗುಳಿಗೆಗಳು, ಸಮಾಧಾನಕಾರಕ ಔಷಧಗಳು ವ್ಯಕ್ತಿಯನ್ನು ಬಾಧಿಸುವ ಆತಂಕ ಮತ್ತು ಭಯವನ್ನು ಕಡಿಮೆ ಮಾಡುತ್ತವೆ ತನ್ನ ಸಮಸ್ಯೆಗಳನ್ನು ಮರೆತು, ಮಲಗಿ ನಿದ್ರಿಸುವಂತೆ ಮಾಡುತ್ತವೆ.
ಇವೆಲ್ಲಾ, ಈ ಪದಾರ್ಥಗಳನ್ನು ಸೇವಿಸಿ, ನಾವು ಅನುಭವಿಸಿದೆವು ಎಂದು ಹೇಳಿದವರ ವರದಿಗಳು, ಇದನ್ನು ಅವರಿಂದ ಕೇಳಿದ ಬೇರೆಯವರು, ಕುತೂಹಲ ದಿಂದ, ತಾವೂ ಅನುಭವಿಸಲು, ಮಾದಕ ವಸ್ತುಗಳನ್ನು ಸೇವಿಸಲು ಪ್ರಾರಂಭಿಸುತ್ತಾರೆ. ಪ್ರಾರಂಭದ ಈ ಆಕರ್ಷಣೆ ಮತ್ತು ಖುಷಿ ಸಿಗುವ ಅನುಭವಗಳಿಂದ ಅವರು ಈ ಪದಾರ್ಥಗಳನ್ನು ಮತ್ತೆ ಮತ್ತೆ ಸೇವಿಸಲು ಇಷ್ಟಪಡುತ್ತಾರೆ. ಅವಕಾಶ ಸಿಕ್ಕಿದಾಗಲೆಲ್ಲಾ, ತನಗಿಷ್ಟವಾದ ತಿಂಡಿಯನ್ನು ತಿನ್ನಬಯಸುವ ಮಗುವಿನಂತೆ, ಇವರು ಪದೇ ಪದೇ ಮಾದಕ ಪದಾರ್ಥವನ್ನು ಸೇವಿಸುತ್ತಾರೆ. ಕ್ರಮೇಣ ಸೇವನೆ ಒಂದು ಅಭ್ಯಾಸವಾಗಿ ಬಿಡುತ್ತದೆ. ತನಗಿಷ್ಟವಾದ ವಸ್ತುವನ್ನು ಸೇವಿಸಲೇಬೇಕೆಂಬ ಆಸೆಗೆ ತುತ್ತಾಗುತ್ತಾರೆ. ಈ ಆಸೆಯನ್ನು ಹತ್ತಿಕ್ಕಲು, ಸೇವನೆ ಮಾಡದಿರಲು ಪ್ರಯತ್ನಿಸಿ ವಿಫಲರಾಗುತ್ತಾರೆ. ಮಾದಕ ವಸ್ತುವಿಗಾಗಿ ಬಾಯಿ ಬಾಯಿ ಬಿಡುತ್ತಾರೆ. ಹೇಗಾದರೂ ಮಾಡಿ, ಅದನ್ನು ಸಂಪಾದಿಸಲು ಸಿದ್ದರಾಗುತ್ತಾರೆ. ಇದನ್ನು ತಜ್ಞರು ‘ಮಾನಸಿಕ ಅವಲಂಬನೆ’ ಎಂದು ಕರೆಯುತ್ತಾರೆ.
ನೋವುಗಳು :
ತಾಳಿಕೆ : ಈ ಮಾದಕ ವಸ್ತುಗಳ ಸಾಮಾನ್ಯ ಹಾಗೂ ಅಪಾಯಕಾರಿ
ಗುಣವೆಂದರೆ, ಪದೇ ಪದೇ ಸೇವನೆಯ ನಂತರ, ವ್ಯಕ್ತಿಯಲ್ಲಿ ತಾಳಿಕೆಯನ್ನುಂಟು ಮಾಡುವುದು. ತಾಳಿಕೆ ಎಂದರೆ, ಸೇವನೆಯ ಸ್ವಲ್ಪ ಕಾಲದನಂತರ ದೇಹ ಈ ಪದಾರ್ಥಕ್ಕೆ ಹೊಂದಿಕೊಂಡು, ಮಾಮೂಲಾಗಿ ತೆಗೆದುಕೊಳ್ಳುವ ಪ್ರಮಾಣಕ್ಕೆ ನಿರೀಕ್ಷಿತ ಪ್ರತಿಕ್ರಿಯೆಯನ್ನು ತೋರಿಸುವುದಿಲ್ಲ. ನಿರೀಕ್ಷಿತ ಪರಿಣಾಮ ಮತ್ತು ಅನುಭವ ಪಡೆಯಲು, ಮಾದಕ ಪದಾರ್ಥವನ್ನು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಸೇವಿಸಬೇಕಾಗು ತ್ತದೆ. ಉದಾಹರಣೆಗೆ ವ್ಯಕ್ತಿ, ಪ್ರಾರಂಭದಲ್ಲಿ ಒಂದು ಪೆಗ್ಮದ್ಯದಿಂದ ಖುಷಿ ಪಡೆದರೆ, ಸ್ವಲ್ಪ ಸಮಯದ ನಂತರ, ಖುಷಿ ಪಡೆಯಲು ಎರಡು, ಮೂರು, ನಾಲ್ಕು ಪೆಗ್ ಬೇಕಾಗುತ್ತದೆ. ಶುರುವಿನಲ್ಲಿ ಒಂದು ಪೆಥಿಡಿನ್ ಸೂಜಿಮದ್ದು ನೋವನ್ನು ನಿವಾರಿಸಿದರೆ, ಆಮೇಲೆ ಎರಡು ನಂತರ ಐದು, ಹತ್ತು ಪಟ್ಟು ಔಷಧದಿಂದಲೂ ನೋವು ಕಡಿಮೆ ಆಗದಿರಬಹುದು. ಹೀಗೆ ವ್ಯಕ್ತಿ ತಾನು ಸೇವಿಸುವ ಮಾದಕ ವಸ್ತುವಿನ ಪ್ರಮಾಣವನ್ನೂ ಹೆಚ್ಚಿಸುತ್ತಲೇ ಹೋಗುತ್ತಾನೆ. ಕೊನೆಗೆ ತನ್ನ ಆರೋಗ್ಯಕ್ಕೆ, ಪ್ರಾಣಕ್ಕೆ ಅಪಾಯವಾಗುವಷ್ಟರ ಮಟ್ಟಿಗೆ ಅಧಿಕ ಪ್ರಮಾಣದ ಮಾದಕ ವಸ್ತುವನ್ನು ಸೇವಿಸ ಬಹುದು. ವ್ಯಕ್ತಿ ಈ ವಸ್ತುಗಳಿಗೆ ಹೊಂದಿಕೊಳ್ಳಲು, : ತಾಳಿಕೆಗೆ ಕಾರಣ. ಈ ಬದಲಾವಣೆಯಿಂದ ಮಾದಕವಸ್ತು ನರಕೋಶಗಳ ಮೇಲೆ ಪರಿಣಾಮ ಬೀರುವುದಿಲ್ಲ. ಪರಿಣಾಮ ಕಾಣಲು ಹೆಚ್ಚಿನ ಪ್ರಮಾಣದ ವಸ್ತು ಬೇಕಾಗುತ್ತದೆ.













