ಮನೆ ರಾಜಕೀಯ ಅಭಿವೃದ್ಧಿ ವಿಷಯದಲ್ಲಿ ಸರ್ಕಾರದ ನಟ್ಟು ಬೋಲ್ಟ್ ಸಡಿಲ: ಬಿ.ವೈ ವಿಜಯೇಂದ್ರ

ಅಭಿವೃದ್ಧಿ ವಿಷಯದಲ್ಲಿ ಸರ್ಕಾರದ ನಟ್ಟು ಬೋಲ್ಟ್ ಸಡಿಲ: ಬಿ.ವೈ ವಿಜಯೇಂದ್ರ

0

ಬೆಂಗಳೂರು: ಅಭಿವೃದ್ಧಿ ವಿಷಯದಲ್ಲಿ ಸರ್ಕಾರದ ನಟ್ಟು ಬೋಲ್ಟ್ ಸಡಿಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಿಸಿದರು.

Join Our Whatsapp Group

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ರಾಜ್ಯಪಾಲರ ಬಾಯಲ್ಲಿ ಹಸಿ ಸುಳ್ಳು ಹೇಳಿಸಿದ್ದಾರೆ.  ರಾಜ್ಯಪಾರಲ ಸಮಯವನ್ನ ವ್ಯರ್ಥ ಮಾಡಿಸಿದ್ದಾರೆ. ವಿಧಿ ಇಲ್ಲದೆ ರಾಜ್ಯಪಾಲರು ಸುಳ್ಳು ಭಾಷಣ ಓದಿದ್ದಾರೆ. ಅಭಿವೃದ್ದಿ ವಿಚಾರದಲ್ಲಿ ಸರ್ಕಾರದ ನಟ್ಟು ಬೋಲ್ಟ್ ಲೂಸ್ ಆಗಿದೆ.  ಇದು ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟವಾಗಿ ಗೋಚರವಾಗಿದೆ ಎಂದರು.

ರಾಜ್ಯಪಾಲರು ಮಾಡಿರುವ ಭಾಷಣ ಸಂಪೂಣವಾಗಿ ಸುಳ್ಳಿನಿಂದ ಕೂಡಿದೆ. ಇದರಲ್ಲಿ ಸರ್ಕಾರ ಮಾಡಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಪ್ರಸ್ತಾಪವೇ ಇಲ್ಲ. ಎರಡು ವರ್ಷದಿಂದ ನಾವು ಅಭಿವೃದ್ಧಿ ಭಾಗ್ಯವನ್ನು ಹೆಚ್ಚಿಸಿದ್ದೇವೆ ಎಂದು ಸುಳ್ಳು ಹೇಳಿಸಿದ್ದಾರೆ.  ಕಳೆದ ಎರಡು ವರ್ಷದಲ್ಲಿ ರಾಜ್ಯದಲ್ಲಿ ಅಭಿವೃದ್ಧಿಯೇ ಆಗಿಲ್ಲ ಎಂದು ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.