ಮನೆ ಸ್ಥಳೀಯ ಅನಧಿಕೃತವಾಗಿ ಸಂಚರಿಸುತ್ತಿರುವ ಹೊರ ರಾಜ್ಯದ ಬಸ್ಸುಗಳನ್ನು ಜಪ್ತಿ ಮಾಡುವಂತೆ ದೂರು

ಅನಧಿಕೃತವಾಗಿ ಸಂಚರಿಸುತ್ತಿರುವ ಹೊರ ರಾಜ್ಯದ ಬಸ್ಸುಗಳನ್ನು ಜಪ್ತಿ ಮಾಡುವಂತೆ ದೂರು

0

ಮೈಸೂರು: ಅನಧಿಕೃತವಾಗಿ ಸಂಚರಿಸುತ್ತಿರುವ ಹೊರರಾಜ್ಯದ ಸಾರಿಗೆ ಬಸ್ಸುಗಳನ್ನು ಜಪ್ತಿ ಮಾಡಿ ದಂಡ ವಿಧಿಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಮೈಸೂರು ಸಾರಿಗೆ ವಿಭಾಗದ ಜಂಟಿ ಸಾರಿಗೆ ಆಯುಕ್ತರಿಗೆ ಪ್ರದೀಪ್ ಕುಮಾರ್ ದೂರು ನೀಡಿದ್ದಾರೆ.

Join Our Whatsapp Group

2023-24 ಮತ್ತು 2024-25 ಸಾಲಿನಲ್ಲಿ ರಾಜ್ಯದಲ್ಲಿ 3000ಕ್ಕೂ ಹೆಚ್ಚು ಸಾರಿಗೆ ವಾಹನಗಳು ಹೊರ ರಾಜ್ಯಗಳಲ್ಲಿ ನೋಂದಣಿ ಮಾಡಿಸಿಕೊಂಡಿವೆ. ಪ್ರತಿಯೊಂದು ವಾಹನವು ಕರ್ನಾಟಕದಲ್ಲಿ ನೋಂದಾಯಿಸಿದರೆ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತಿತ್ತು. ಆದರೆ, ಕೇಂದ್ರ ಸರ್ಕಾರದ ಸವಲತ್ತುಗಳನ್ನು ದುರುಪಯೋಗಪಡಿಸಿಕೊಂಡು ತೆರಿಗೆ ಅನುಕೂಲಕ್ಕಾಗಿ ಮಾಲೀಕರು ತಮ್ಮ ವಾಹನಗಳನ್ನು ಬೇರೆ ರಾಜ್ಯಗಳಲ್ಲಿ ನಕಲಿ ದಾಖಲೆಗಳ ಮೂಲಕ ನೋಂದಾಯಿಸುತ್ತಿರುವುದರಿಂದ ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾಗುತ್ತಿದೆ. ತೆರಿಗೆ ಸವಲತ್ತುಗಳನ್ನು ಅನುಭವಿಸಲು ಸರ್ಕಾರದ ನೀತಿ ನಿಯಮಗಳನ್ನು ದುರುಪಯೋಗಪಡಿಸಿಕೊಂಡು RTO ಸೇರಿದಂತೆ ಹಲವಾರು ಸರ್ಕಾರಿ ಇಲಾಖೆಗಳಿಗೆ ಭಾರಿ ನಷ್ಟವನ್ನುಂಟು ಮಾಡುತ್ತಿದ್ದಾರೆ.

ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ್, ಡಿಯು ಡಾಮನ್, ಗೋವಾ, ಪುದುಚೇರಿ ಮುಂತಾದ ರಾಜ್ಯಗಳಲ್ಲಿ ನೊಂದಾಯಿಸಿಕೊಂಡು ಕರ್ನಾಟಕದಲ್ಲಿ ಸಂಚರಿಸುತ್ತಿರುವ ಬಸುಗಳು ಪಾಲಿಸಬೇಕಾದ ನಿಯಮಗಳನ್ನು ಪಾಲಿಸುತ್ತಿಲ್ಲ. ಹೊರ ರಾಜ್ಯದಲ್ಲಿ ನೊಂದಾಯಿಸಿ ಶಾಶ್ವತವಾಗಿ ಇಲ್ಲೇ ಸಂಚರಿಸುತ್ತಿರುವ ವಾಹನಗಳ ತಪಾಸಣೆ ಮಾಡದ ಮೈಸೂರಿನ ಸಾರಿಗೆ ಅಧಿಕಾರಿಗಳು, ಲಂಚದ ಆಸೆಗೆ ತಮ್ಮನ್ನು ತಾವೇ ಮಾರಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹೊರ ರಾಜ್ಯದಲ್ಲಿ ನೋಂದಾಯಿಸಿರುವ ವಾಹನಗಳು ನೋಂದಾಯಿತ ರಾಜ್ಯಕ್ಕೆ 90 ದಿನಗಳಿಗೊಮ್ಮೆ ಕಡ್ಡಾಯವಾಗಿ ಹೋಗಿರಬೇಕು. ಆದರೆ ವರ್ಷಗಳಾದರೂ ಸದರಿ ವಾಹನಗಳೂ ಹೋಗುವುದಿಲ್ಲ. ವಾಹನದ ನವೀಕರಣಾ ಮಾಡಲು (ಎಫ್.ಸಿ) ಇಲ್ಲವೇ ಯಾವುದೇ ರೀತಿಯಲ್ಲಿ ತಪಾಸಣೆ ಮಾಡಿಸಲು ಸಹ ನೋಂದಾಯಿತ ರಾಜ್ಯಕ್ಕೆ ಹೋಗಿರುವುದಿಲ್ಲ. ವಾಹನವನ್ನು ಪರಿಶೀಲಿಸದೇ ಅಕ್ರಮವಾಗಿ ನೋಂದಾವಣಿ ಸೇರಿದಂತೆ ನವೀಕರಣವನ್ನು ಮಾಡಿರುತ್ತಾರೆ. ನೊಂದಣಿಗೆ ಇಲ್ಲವೇ ನವೀಕರಣಕ್ಕೆ ನೀಡಿರುವ ಹೊರ ರಾಜ್ಯದ ವಿಳಾಸವು ನಕಲಿ ಇಲ್ಲವೇ ಸುಳ್ಳು ಆಗಿರುತ್ತದೆ. ಸದರಿ ವಾಹನಗಳು ಅಲ್ಲಿಗೆ ಹೋಗಿದ್ದರೆ ವಾಹನದಲ್ಲಿ ಅಳಾವಡಿಸಿರುವ ಜಿಪಿಎಸ್ ಮೂಲಕ ಪರಿಶೀಲಿಸಬಹುದು, ಇಲ್ಲವೇ ಸದರಿ ವಾಹನಗಳು ನೋಂದಾಯಿತ ರಾಜ್ಯಕ್ಕೆ ಹೋಗಿದ್ದರೆ ಟೋಲ್ ಇಲ್ಲವೇ ಫಾಸ್ಟ್ಟ್ಯಾಗ್ ದಾಖಲೆಗಳನ್ನು ಪರಿಶೀಲಿಸಬಹುದು. ಇವುಗಳು ಯಾವುದು ನೋಂದಾಯಿತ ರಾಜ್ಯಕ್ಕೆ ಹೋದಂತೆ ಇರುವುದಿಲ್ಲ. ಸಾರಿಗೆ ಅಧಿಕಾರಿಗಳು ಯಾವುದನ್ನುತಪಾಸಣೆ ಮಾಡದೇ ಕೇವಲ ಲಂಚದ ಪ್ರಮಾಣವನ್ನು ಪರಿಶೀಲಿಸುತ್ತಾರೆ. ಹೊರ ರಾಜ್ಯದ ನೋಂದಣಿಯಲ್ಲಿ ಸಂಚರಿಸುತ್ತಿರುವ ಬಸ್ಸುಗಳು ತಮ್ಮ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಟೋರ್ ಪ್ಲಾನ್ ಮತ್ತು ಪ್ರಯಾಣಿಕರ ವೈಯಕ್ತಿಕ ಗುರುತಿನ ಚೀಟಿಗಳನ್ನು ಹೊಂದಿರಬೇಕು. ಆದರೆ ಸದರಿ ವಾಹನದವರ ಬಳಿ ಇದ್ಯಾವುದೇ ಮಾಹಿತಿ ಇರುವುದಿಲ್ಲ. ಸಾರಿಗೆ ಅಧಿಕಾರಿಗಳ ಹೊಂದಾಣಿಕೆಯಲ್ಲಿಎಲ್ಲವೂ ಅಯೋಮಯ.

AR – 06 / B – 6335

NL – 01 / B – 3402 NL – 01 / B – 4646
NL – 01 / B – 4466 NL – 01 / B – 3349
NL – 01 / B – 2939 NL – 01 / B – 4527
NL – 01 / B – 3392 NL – 01 / B – 2970
NL – 01 / 3127 NL – 01 / 4437
NL – 01 / B – 2393 NL – 01 / B – 4437
NL – 01 / B – 3054
DD – 01 / Y – 9436 DD – 01 / X – 9494
DD – 01 / Y – 9287 DD – 01 / Y – 9059
DD – 01 / Y – 9858 DD – 01 / Y – 9045
DD – 01 / V – 9239 DD – 01 / Y – 9181
DD – 01 / Y – 9945 DD – 01 / Y – 9287

ಮುಂದುವರಿದು ಸದರಿ ಹೊರ ರಾಜ್ಯದ ನೋಂದಣಿ ಹೊಂದಿರುವ ವಾಹನಗಳ ಆಸನ ಸಾಮರ್ಥ್ಯ 40ಕ್ಕಿಂತ ಹೆಚ್ಚಾಗಿರಬಾರದು. ಆದರೆ ಪರವಾನಿಗೆ ಪಡೆದ ಆಸನ ಸಾಮರ್ಥ್ಯಕ್ಕಿಂತ ಹೆಚ್ಚಿನ ಆಸನಗಳನ್ನು ಸದರಿ ಬಸ್ಸುಗಳು ಹೊಂದಿರುತ್ತವೆ. ಕಡಿಮೆ ಆಸನದ ಲೆಕ್ಕದಲ್ಲಿ ಕಡಿಮೆ ತೆರಿಗೆ ಹಣ ಪಾವತಿಸಿ, ಹೆಚ್ಚಿನ ಆಸನಗಳನ್ನು ಅಳವಡಿಸಿಕೊಂಡು ಸರ್ಕಾರಕ್ಕೆ ಸಂದಾಯವಾಗಬೇಕಿದ್ದ ತೆರಿಗೆಯಲ್ಲಿ ಬಾರಿ ಮೋಸ ಮಾಡುತ್ತಿದ್ದಾರೆ. ಇವೆಲ್ಲವನ್ನು ಕಂಡಿರುವ ಸಾರಿಗೆ ಇಲಾಖೆಯ ಅಧಿಕಾರಿಗಳ ಮೌನ ಅಕ್ರಮದಲ್ಲಿಅವರ ಭಾಗವಹಿಸುವಿಕೆಯ ಸಾಕ್ಷ್ಯವನ್ನು ನೀಡುತ್ತದೆ.
ಹೊರ ರಾಜ್ಯಗಳಲ್ಲಿ ನೋಂದಾಯಿಸಿದ ವಾಹನಗಳು ವಾರ್ಷಿಕ 90000 ಸಾವಿರ (ತೊಂಬತ್ತು ಸಾವಿರ) ರೂ. ತೆರಿಗೆ ಪಾವತಿಸುತ್ತವೆ ಅದೂ ಐಷಾರಾಮಿ ತೆರಿಗೆ. ಈ 90000 ಕಟ್ಟಲು ಸದರಿ ಬಸ್ಸಿನಲ್ಲಿ ಕೇವಲ 40 ಆಸನಗಳು ಮಾತ್ರ ಇರಬೇಕು. ಆದರೆ ಈ ಬಸ್ಸುಗಳಲ್ಲಿ ಅದಕ್ಕಿಂತ ಹೆಚ್ಚಿನ ಆಸನಗಳು ಇರುತ್ತವೆ. ನಮ್ಮ ರಾಜ್ಯದಲ್ಲಿ ನೋಂದಣಿ ಮಾಡಿಕೊಂಡ ವಾಹನಗಳು ವಾರ್ಷಿಕ 690000 (ಆರು ಲಕ್ಷದ ತೊಂಬತ್ತು ಸಾವಿರ) ಹಣವನ್ನು ತೆರಿಗೆ ರೂಪದಲ್ಲಿ ಕಟ್ಟುತ್ತಾರೆ. ಇದ್ದಲ್ಲದೇ ಅಂತರಾಜ್ಯಗಳಿಗೆ ಅಂದರೆ ಉದಾಹರಣೆಗೆ ತಮಿಳುನಾಡಿಗೆ ನಮ್ಮ ರಾಜ್ಯದ ಬಸ್ಸು ಹೋದರೆ ೭ ದಿನಕ್ಕೆ 42000 (ನಲವತ್ತೆರಡು ಸಾವಿರ) ತೆರಿಗೆಯನ್ನು ಕಟ್ಟಬೇಕು, ಅದೇ ಹೊರ ರಾಜ್ಯದಲ್ಲಿ ನೋಂದಣಿ ಮಾಡಿಸಿರುವ ಬಸ್ಸುಗಳಿಗೆ ಯಾವುದೇ ತೆರಿಗೆ ಇರುವುದಿಲ್ಲ. ನಮ್ಮ ರಾಜ್ಯದಲ್ಲಿ ನೋಂದಣಿಯಾಗಿರುವ ವಾಹನಗಳಿಗೆ ಎಲ್ಲ ರೀತಿಯಲ್ಲೂ ತೊಂದರೆಯೇ.

ಈ ಪ್ರಮಾಣವನ್ನು 3000 ವಾಹನಗಳ ಮಟ್ಟಿಗೆ ಲೆಕ್ಕ ಹಾಕಿದರೆ, 172500 x 3000 = ಸುಮಾರು 517500000 ರೂ. ಹೊರ ರಾಜ್ಯಗಳ ಖಜಾನೆಗೆ ಹೋಗುತ್ತಿದೆ. ಅಲ್ಲದೆ, ನೋಂದಣಿ ಪ್ರಮಾಣ ಪತ್ರ, ಆರ್ಥಿಕ ಸಹಾಯತ್ವ (H.P), ಮಾನ್ಯತ ನವೀಕರಣ (ಎಫ್.ಸಿ) ಮತ್ತು ಇತರ ಶುಲ್ಕಗಳನ್ನು ಸೇರಿಸಿದರೆ ಪ್ರತಿ ವಾಹನಕ್ಕೆ ಅಂದಾಜು ಸುಮಾರು 7500 ರೂ. ಆಗುತ್ತದೆ. ಒಟ್ಟಾರೆ, 3000 ವಾಹನಗಳಿಗೆ 2.25 ಕೋಟಿ ರೂ (ಎರಡು ಕೋಟಿ ಇಪ್ಪತೈದು ಲಕ್ಷರೂ). ತೆರಿಗೆ ಹಣ ನಷ್ಟವಾಗುತ್ತಿದೆ. ಈ ಮೂಲಕ, ರಾಜ್ಯದ ಖಜಾನೆ ಸೇರುವ 54 ಕೋಟಿ (ಐವತ್ತ ನಾಲ್ಕು ಕೋಟಿ) ರೂ. ಇತರ ರಾಜ್ಯಗಳಿಗೆ ಹೋಗುತ್ತಿದೆ.

ಸುಳ್ಳು ಮತ್ತು ನಕಲಿ ದಾಖಲೆಗಳ ಮೂಲಕ ನೋಂದಣಿಯಾಗಿರುವ ವಾಹನಗಳು ಸಾರಿಗೆ ಇಲಾಖೆಯ ಒಳ ಒಪ್ಪಂದದೊಂದಿಗೆ ಅಕ್ರಮದಲ್ಲಿ ಭಾಗಿಯಾಗಿ ಸರ್ವ ರೀತಿಯಲ್ಲುಅಧಿಕವಾಗಿ ತೆರಿಗೆ ಹಣ ಕಟ್ಟಿ ಮೋಸ ಹೋಗುತ್ತಿರುವ ನಮ್ಮ ರಾಜ್ಯದ ನೋಂದಣಿ ಬಸ್ಸು ಮಾಲೀಕರಿಗೆ ತೊಂದರೆ ನೀಡುತ್ತಿದ್ದಾರೆ. ಹೊರ ರಾಜ್ಯದಲ್ಲಿ ನೋಂದಾಯಿಸಿಕೊಂಡು ಸ್ಥಳಿಯವಾಗಿ ತಮ್ಮ ವ್ಯಾಪ್ತಿಯಲ್ಲೇ ಸುಮಾರು 25 ಕ್ಕೂ ಅಧಿಕ ಸಾರಿಗೆ ವಾಹನಗಳು ಸಂಚರಿಸುತ್ತಿವೆ. ಅವುಗಳ ನೋಂದಣಿ ಸಂಖ್ಯೆ ಹಾಗೂ ಅವುಗಳ ಫೋಟೋಗಳನ್ನು ಸದರಿ ದೂರಿನೊಂದಿಗೆ ಲಗತ್ತಿಸಿದ್ದೇವೆ. ಈ ಕೂಡಲೇ ಅನಧಿಕೃತವಾಗಿ ಅಕ್ರಮದಿಂದ ಸಂಚರಿಸುತ್ತಿರುವ ನಮ್ಮೂದಿಸಿರುವ ವಾಹನಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡು ಸರ್ಕಾರಕ್ಕೆ ಬರಬೇಕಾದ ತೆರಿಗೆ ಹಣವನ್ನು ವಸೂಲಿ ಮಾಡಿ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.