ಮನೆ ಅಪರಾಧ ನಟಿ ರನ್ಯಾ ರಾವ್ ಮನೆ ಸೇರಿದಂತೆ 9 ಕಡೆ ಇಡಿ ದಾಳಿ

ನಟಿ ರನ್ಯಾ ರಾವ್ ಮನೆ ಸೇರಿದಂತೆ 9 ಕಡೆ ಇಡಿ ದಾಳಿ

0

ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ ಮನೆ ಮೇಲೆ ಇ.ಡಿ ದಾಳಿ ನಡೆಸಿದೆ.

ನಂದವಾಣಿ ಮ್ಯಾನ್ಸನ್ ಸೇರಿದಂತೆ 6 ಕಡೆ ಇಡಿ ದಾಳಿ ಮಾಡಿದೆ. ಪ್ರಕರಣ ಸಂಬಂಧ ದೆಹಲಿಯಲ್ಲಿ ಇಸಿಐಆರ್ ಆಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ತಂಡದಿಂದ ಬೆಂಗಳೂರಿನಲ್ಲಿ ದಾಳಿ ನಡೆಸಲಾಗಿದೆ. ರನ್ಯಾ ಪತಿ ಜತಿನ್ ಹುಕ್ಕೇರಿ ನಿವಾಸ, ರನ್ಯಾ ಮತ್ತು ಗೆಳೆಯ ತರುಣ್‌ಗೆ ಸೇರಿದ ಜಾಗ ಹಾಗೂ ಕೋರಮಂಗಲ, ಇಂದಿರಾನಗರ ಸೇರಿದಂತೆ 9 ಕಡೆ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.ಆಡುಗೋಡಿ ಬಳಿ ರನ್ಯಾ ರಾವ್ ಅವರ ಪತಿ ನಿವಾಸದ ಮೇಲೆ ಡಿಆರ್‌ಐ ಅಧಿಕಾರಿಗಳು ದಾಳಿ ನಡೆಸಿದ್ದರು.