ಹುಣಸೂರು: ತಾಲೂಕಿನ ಹಿಂಡಗುಡ್ಲು ಗ್ರಾಮದ ಲೇಟ್ ಪುಟ್ಟೇಗೌಡರ ಮಗ ಪ್ರಭಾಕರ್ ಎಂಬುವರಿಗೆ ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆ ಗುರುವಾರ ನಡೆದಿದೆ.
ತಾಲೂಕಿನ ಹನಗೋಡಿನ ಸರ್ಕಲ್‌ನಲ್ಲಿ ಗಾಡಿ ನಿಲ್ಲುವ ವಿಚಾರಕ್ಕೆ ಹನಗೋಡು ಗ್ರಾಮದ ಸೂರಪ್ಪನ ಪುತ್ರ ಕವನ್ ಎಂಬ ಯುವಕ ಏಕಾಏಕಿ ಬೈಕ್ ಕೀ, ಮತ್ತು ಕಲ್ಲಿನಿಂದ ತೀವ್ರವಾಗಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಈ ವಿಚಾರವಾಗಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು. ತನಿಖೆ ಮುಂದುವರೆಸಿದ್ದಾರೆ.