ಮನೆ ಸುದ್ದಿ ಜಾಲ ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

0


ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ಚಾಮರಾಜನಗರ, ಹರದನಹಳ್ಳಿ ಹಾಗೂ ಸಂತೇಮರಹಳ್ಳಿ ಉಪವಿಭಾಗ ವ್ಯಾಪ್ತಿಯಲ್ಲಿ ನಾಲ್ಕನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ನಾಳೆ ಮಾರ್ಚ್ ೧೫ರಂದು ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ ೯ ರಿಂದ ಸಂಜೆ ೬ ಗಂಟೆಯವರೆಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಗಾಳಿಪುರ, ಮೆಡಿಕಲ್ ಕಾಲೇಜು, ಮೂಡಲಪುರ, ಮೂಡಲಪುರ ಸಣ್ಣ ಕೈಗಾರಿಕಾ ಇಲಾಖೆ, ಸಿದ್ದಯ್ಯನಪುರ, ಹೊಂಗಲವಾಡಿ, ಕೋಳಿಪಾಳ್ಯ, ಬಂಧಿಗೌಡನಹಳ್ಳಿ, ಅಟ್ಟುಗೂಳಿಪುರ, ಕೊತ್ತಲವಾಡಿ, ಅರಕಲವಾಡಿ, ಯರಗನಹಳ್ಳಿ, ಸುವರ್ಣನಗರ, ಫ್ಯಾಕ್ಟರಿ, ಬಿಸಿಲವಾಡಿ, ಪುಣಜನೂರು, ಡೊಳ್ಳಿಪುರ, ಚನ್ನಪನಪುರ, ಅಮಚವಾಡಿ, ಮಾದಲವಾಡಿ, ಕಿಲಿಗೆರೆ, ಯನಗುಂಬ, ಯರಗನಹಳ್ಳಿ, ಅಚ್ಚಟ್ಟಿಪುರ, ಯಾನಗಳ್ಳಿ, ಹೊನ್ನೂರು, ಕುದೇರು, ಉಮ್ಮತ್ತೂರು, ಸಂತೇಮರಹಳ್ಳಿ, ಕೆಂಪನಪುರ, ನವಿಲೂರು, ದುಗ್ಗಟ್ಟಿ, ಆಲ್ದೂರು, ಅಂಬಳೆ, ಮಂಗಲ ವಾಟರ್ ಸಪ್ಲೈ, ಚುಂಗಡಿಪುರ, ಅವಿತ್ ಗ್ರೀನ್ ಸೋಲಾರ್, ಮೂಡಲ ಅಗ್ರಹಾರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಾರ್ವಜನಿಕರು ನಿಗಮದ ಜೊತೆ ಸಹಕರಿಸಬೇಕು. ವಿದ್ಯುತ್ ಸಂಬಂಧಿತ ದೂರು ಮತ್ತು ಸಹಾಯಕ್ಕಾಗಿ ಗ್ರಾಹಕರು ಉಚಿತ ದೂ.ಸಂ ೧೯೧೨ ಸಂಪರ್ಕಿಸುವಂತೆ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.