ಮೈಸೂರು : ಅಪ್ರಾಪ್ತ ಬಾಲಕಿಯನ್ನು ವೇಶ್ಯಾವಾಟಿಕೆ ತಳ್ಳಿದ ಆರೋಪದ ಮೇಲೆ ಮೂವರು ಆರೋಪಿಗಳಿಗೆ ನ್ಯಾಯಾಲಯ ೨೦ ವರ್ಷ ಜೈಲು, ತಲಾ ೧೦ ಸಾವಿರ ದಂಡ ವಿಧಿಸಿದೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕು ಚಿನಕುರಳಿ ಗ್ರಾಮದ ಫಿರ್ಯಾದಿ ಮಂಜುಳ ಅವರ ಮಗಳು ಅಪ್ರಾಪ್ತ ಬಾಲಕಿಯನ್ನು
ಆರೋಪಿತರಾದ ಲೀಲಾವತಿ, ಸಿದ್ದರಾಜು, ಲಲಿತ ಅವರು ಸೇರಿಕೊಂಡು ೨೦೨೦ನೇ ಆಗಸ್ಟ್ ೧೪ ರಂದು ಮಂಡ್ಯ ಜಿಲ್ಲೆಯ ಹುಲಿವಾನ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆರೋಪಿ ಅಭಿಷೇಕ್ ಅವರ ಜೊತೆಯಲ್ಲಿ ಬಲವಂತದ ಬಾಲ್ಯ ವಿವಾಹವನ್ನು ಮಾಡಿದ್ದರು.
ನಂತರದಲ್ಲಿ ಬಾಲಕಿಯು ಮನೆ ಬಿಟ್ಟು ಬಂದು ಆರೋಪಿ ಶ್ರೀರಂಗಪಟ್ಟಣದ ರಾಘವೇಂದ್ರ ಎಂಬವರ ಬಳಿ ಆಶ್ರಯ ಕೇಳಿದ್ದು, ಆರೋಪಿಯು ಬಾಲಕಿಯನ್ನು ವೇಷ್ಯಾವಾಟಿಕೆಗೆ ತಳ್ಳುವ ದುರುದ್ದೇಶದಿಂದ ಕೆ.ಆರ್.ಪೇಟೆಯ ಚಿಕ್ಕನಹಳ್ಳಿಮರ ಗ್ರಾಮದ ಆರೋಪಿ ರೇಖಾ ಅವರ ಮನೆಗೆ ಕರೆದುಕೊಂಡು ಬಂದಿದ್ದು, ನಂತರ ಆರೋಪಿ, ರೇಖಾ ಅಪ್ರಾಪ್ತ ಬಾಲಕಿಯನ್ನು ಮೈಸೂರಿನ ಭೈರವೇಶ್ವರ ನಗರದಲ್ಲಿ ಮಾಡಿದ್ದ ಬಾಡಿಗೆ ಮನೆಗೆಕರೆದುಕೊಂಡು ಬಂದು ಬಾಲಕಿಯನ್ನು ಹೆದರಿಸಿ ಪುರ ಗ್ರಾಮದ ಉಮೇಶ ಎಂಬಾತನಿಂದ ೪ ಸಾವಿರ ರೂ ಪಡೆದುಕೊಂಡು ಆತನ
ಜೊತೆಯಲ್ಲಿ ಕಳುಹಿಸಿದ್ದರು ನಂತರ ಆತ ಬಾಲಕಿಯನ್ನು ತಮ್ಮ ಜಮೀನಿನ ಮನೆಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದು, ನಂತರ ಬಾಲಕಿಯನ್ನು ಶಿವರಾಮು ಎಂಬಾತ ನಡೆಸುತ್ತಿದ್ದ ಓಯೋ ಮೋನಿಷಾ ರೆಸಿಡೆನ್ಸಿ ಲಾಡ್ಜ್ಗೆ ವೇಷ್ಯಾವಾಟಿಕೆಗೆ ಕಳುಹಿಸಿಕೊಟ್ಟು ಬಂದ ಗಿರಾಕಿಗಳೊಂದಿಗೆ ಬಾಲಕಿಯನ್ನು ವೇಷ್ಯಾವಾಟಿಕೆಗೆ ಕಳುಹಿಸಿ ಆಕ್ರಮ ಹಣ ಸಂಪಾದನೆ ಮಾಡುತ್ತಿದ್ದರು ಎಂದು ಪೊಲೀಸರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ ಮೈಸೂರಿನ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ ರ ನ್ಯಾಯಾಧೀಶರಾದ ಆನಂದ್ ಪಿ. ಹೋಗಾಡ ಅವರು ಆರೋಪಿತರ ವಿರುದ್ಧ ಅಪರಾಧ ಸಾಬೀತಾಗಿದೆ ಎಂದು ತಿಳಿಸಿ. ಆರೋಪಿಗಳಾದ ರೇಖಾ, ರಾಘವೇಂದ್ರ, ಉಮೇಶ ಅವರಿಗೆ ೨೦ ವರ್ಷಗಳ ಕಠಿಣ ಶಿಕ್ಷೆ ಮತ್ತು ತಲಾ ರೂ.೧೦ ಸಾವಿರ ರೂ. ದಂಡವನ್ನು ಹಾಗೂ ಒಟ್ಟು ೨೧ ವರ್ಷಗಳ ಸಾದಾ ಸಜೆಯ ಶಿಕ್ಷೆಯನ್ನು ವಿಧಿಸಿದೆ. ಆರೋಪಿಗಳಾದ ಲೀಲಾವತಿ ಮತ್ತು ಲಲಿತ ಅವರನ್ನು ಸನ್ನಡತೆಯನ್ನು ಕಾಯ್ದುಕೊಂಡು ಹೋಗುವ ಷರತ್ತಿನ ಮೇರೆಗೆ ಪಿ.ಒ.ಆಕ್ಟ್ ರಡಿಯಲ್ಲಿ ಬಿಡುಗಡೆಗೊಳಿಸಿದೆ.
ಆರೋಪಿ ಗಿರೀಶ ತಲೆ ಮರೆಸಿಕೊಂಡಿದ್ದು ಬೇರೆ ಪ್ರಕರಣದ ದಾಖಲಿಸಿದೆ. ಆರೋಪಿ. ಶಿವರಾಮು, ಅಭಿಷೇಕ್, ಸಿದ್ದರಾಮು ಅವರುಗಳು ವಿಚಾರಣೆ ಕಾಲಕ್ಕೆ ಮೃತಪಟ್ಟಿರುತ್ತಾರೆ. ಈ ಪ್ರಕರಣಗಳ ಅಭಿಯೋಜನೆಯನ್ನು ಕೆ.ಬಿ.ಜಯಂತಿ ಅವರು ನಡೆಸಿದ್ದು ವಾದ ಮಂಡಿಸಿದ್ದರು.














