ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣದಲ್ಲಿ ರಾಜಣ್ಣ ದೂರು ಕೊಡದೇ ನಾನೇನು ಮಾಡಲಿ? ಎಫ್ಐಆರ್ ಆಗದೇ ತನಿಖೆಗೆ ಕೊಡಲು ಆಗಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಣ್ಣ ಏನು ಮಾಡುತ್ತಾರೋ ನೋಡೋಣ. ರಾಜಣ್ಣಗೆ ಬಹಳ ಜನ ಆಪ್ತರು ಇದ್ದಾರೆ. ನನ್ನ ಬಿಟ್ಟು ಬಹಳ ಜನ ಇದ್ದಾರೆ. ಅವರು ಯಾರ ಜೊತೆ ಏನು ಮಾತನಾಡುತ್ತಾರೋ ನನಗೇನು ಗೊತ್ತು ಎಂದರು.
ಹನಿಟ್ರ್ಯಾಪ್ ವಿಚಾರ ಬೋಗಸ್ ಎಂದ ಡಿಕೆಶಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಈಗ ಇದರ ಬಗ್ಗೆ ಏನೂ ಮಾತಾಡಲ್ಲ. ರಾಜಣ್ಣ ದಿನಪೂರ್ತಿ ನನ್ನ ಜೊತೆಯೇ ಇದ್ದರು, ಏನೂ ಹೇಳಿಲ್ಲ. ರಾಜಣ್ಣಗೆ ನನ್ನನ್ನೂ ಸೇರಿದಂತೆ ಬಹಳ ಜನ ಆಪ್ತರು ಇದ್ದಾರೆ ಎಂದು ಹೇಳಿದರು.














