ಮನೆ Uncategorized ಇಂದಿನಿಂದ ರಾಜ್ಯದ 66 ಟೋಲ್‌ ದರ ಶೇ.3 ರಿಂದ 5 ರಷ್ಟು ಹೆಚ್ಚಳ

ಇಂದಿನಿಂದ ರಾಜ್ಯದ 66 ಟೋಲ್‌ ದರ ಶೇ.3 ರಿಂದ 5 ರಷ್ಟು ಹೆಚ್ಚಳ

0

ಬೆಂಗಳೂರು : ಇಂದಿನಿಂದ ರಾಜ್ಯದಲ್ಲಿ ದುಬಾರಿ ದುನಿಯಾ ಆರಂಭವಾಗಲಿದೆ. ಸರ್ಕಾರ ಹಲವು ವಸ್ತುಗಳ ಬೆಲೆ ಏರಿಕೆ ಮಾಡಿದೆ. ಅಲ್ಲದೇ ಟೋಲ್ ಗಳಲ್ಲಿ ಶುಲ್ಕ ಹೆಚ್ಚಿಸಿ ಕೇಂದ್ರ ಸರ್ಕಾರ ಕೂಡ ರಾಜ್ಯದ ಜನತೆಗೆ ಗಾಯದ ಮೇಲೆ ಬರೆ ಎಳೆದಿದೆ. ರಾಜ್ಯದ 66 ಟೋಲ್‌ ಪ್ಲಾಜಾಗಳಲ್ಲಿ ಇಂದಿನಿಂದ ಪರಿಷ್ಕೃತ ದರ ಜಾರಿಯಾಗಲಿದೆ.

ಬೆಲೆ ಏರಿಕೆ ಹಾಗೂ ವಾರ್ಷಿಕ ಹಣದುಬ್ಬರ ಆಧರಿಸಿ ಟೋಲ್‌ ದರ ಹೆಚ್ಚಿಸಲಾಗಿದ್ದು, ರಾಜ್ಯದ 66 ಟೋಲ್‌ ಪ್ಲಾಜಾಗಳಲ್ಲಿ ಮಂಗಳವಾರದಿಂದ ಪರಿಷ್ಕೃತ ದರ ಜಾರಿಯಾಗಲಿದೆ. ಟೋಲ್‌ ಗುತ್ತಿಗೆ ಅವಧಿ ಆಧರಿಸಿ ದರಗಳು ಬದಲಾಗಲಿದ್ದು, ಕನಿಷ್ಠ ಶೇಕಡಾ 3 ರಷ್ಟು ಮತ್ತು ಗರಿಷ್ಠ ಶೇ.5 ರಷ್ಟು ಹೆಚ್ಚಳ-ವಾಗಲಿದೆ. ಈ ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳ ನಿರ್ಣಯ ಮತ್ತು ಸಂಗ್ರಹ) ನಿಯಮ-ಗಳು-2008ರ ಪ್ರಕಾರ ಸಗಟು ಬೆಲೆ ಸೂಚ್ಯಂಕದ ಆಧಾರದಲ್ಲಿ ಟೋಲ್‌ ಶುಲ್ಕ ಹೆಚ್ಚಿಸಲಾಗಿದೆ. ಈ ಹೆಚ್ಚುವರಿ ಟೋಲ್‌ ಶುಲ್ಕವನ್ನು ವಾಹನ ಮಾಲೀಕರಿಗೆ ವರ್ಗಾಯಿಸಲಾಗುತ್ತದೆ. ವಾಹನ ಮಾಲೀಕರು ಈ ಆರ್ಥಿಕ ಹೊರೆಯನ್ನು ಗ್ರಾಹಕರ ಮೇಲೆ ಹಾಕುತ್ತಾರೆ. ಸರಳವಾಗಿ ಹೇಳುವುದಾದರೆ ಟೋಲ್‌ ದರ ಏರಿಕೆಯ ಬಿಸಿ ನೇರವಾಗಿ ಗ್ರಾಹಕರಿಗೆ ತಟ್ಟಲಿದೆ.