ಮನೆ ಉದ್ಯೋಗ ಭಾರತೀಯ ನೌಕಾಪಡೆಯಲ್ಲಿ 338 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಭಾರತೀಯ ನೌಕಾಪಡೆಯಲ್ಲಿ 338 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಭಾರತೀಯ ನೌಕಾಪಡೆಯು ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಎಸ್‌ಎಸ್‌ಎಲ್‌ಸಿ ನಂತರ ವಿವಿಧ ಟ್ರೇಡ್‌ನಲ್ಲಿ ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌ ಇದಾಗಿದೆ. ಐಟಿಐ ಪಾಸಾದವರು ಕೇಂದ್ರ ಸರ್ಕಾರಿ ಉದ್ಯೋಗ ಪಡೆಯಲು ಸದಾವಕಾಶ ಇದಾಗಿದ್ದು, ರಕ್ಷಣಾ ಇಲಾಖೆಯ ನೌಕಾಪಡೆಯಲ್ಲಿ ಉದ್ಯೋಗ ಪಡೆಯಬಹುದಾಗಿದೆ.

ಹುದ್ದೆ ಲಭ್ಯ ಇರುವ ಟ್ರೇಡ್‌ಗಳು ಮತ್ತು ಹುದ್ದೆಗಳ ಸಂಖ್ಯೆ: ಇಲೆಕ್ಟ್ರೀಷಿಯನ್ – 49, ಇಲೆಕ್ಟ್ರೋಪ್ಲೇಟರ್ – 1, ಮೆರಿನ್ ಇಂಜಿನ್ ಫಿಟ್ಟರ್ – 36, ಫೌಂಡ್ರಿ ಮ್ಯಾನ್ – 2, ಪ್ಯಾಟರ್ನ್ ಮೇಕರ್ – 2, ಮೆಕ್ಯಾನಿಕ್ ಡೀಸೆಲ್ -39, ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್ – 8, ಮಷಿನಿಸ್ಟ್ – 15, ಮೆಕ್ಯಾನಿಕ್ ಮಷಿನ್ ಟೂಲ್ ಮೇಂಟೆನೆನ್ಸ್‌ – 15, ಪೇಂಟರ್ (ಜೆನೆರಲ್) – 11, ಶೀಟ್ ಮೆಟಲ್ ವರ್ಕರ್ – 3, ಪೈಪ್ ಫಿಟ್ಟರ್ – 22, ಮೆಕ್ಯಾನಿಕ್ ರೆಫ್ರಿಜೆರೇಟರ್ ಮತ್ತು ಎಸಿ – 8, ಟೇಲರ್ (ಜೆನೆರಲ್) – 4, ವೆಲ್ಡರ್ (ಗ್ಯಾಸ್ ಅಂಡ್ ಇಲೆಕ್ಟ್ರಾನಿಕ್) – 23, ಇಲೆಕ್ಟ್ರಾನಿಕ್ಸ್‌ ಮೆಕ್ಯಾನಿಕ್ – 28, ಶಿಪ್‌ರೈಟ್ ವುಡ್ – 21, ಫಿಟ್ಟರ್ – 5, ಮಾನ್‌ಸೂನ್ ಬಿಲ್ಡಿಂಗ್ ಕಂಸ್ಟಕ್ಟರ್ – 8, I &CTSM – 3, ಶಿಪ್‌ರೈಟ್ ಸ್ಟೀಲ್ – 20, ರಿಗ್ಗರ್ – 14, ಫಾರ್ಜರ್ ಅಂಡ್ ಹೀಟ್ ಟ್ರೀಟರ್ – 1 ಒಟ್ಟು 338 ಹುದ್ದೆಗಳು ಖಾಲಿ ಇವೆ.

ವಯೋಮಿತಿ ಅರ್ಹತೆಗಳು: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2001 ರ ಆಗಸ್ಟ್‌ 01 ರಿಂದ 2008 ರ ಅಕ್ಟೋಬರ್ 31 ರ ನಡುವೆ ಜನಿಸಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

ಐಟಿಐ ವಿದ್ಯಾರ್ಹತೆವುಳ್ಳವರು ಅರ್ಜಿ ಸಲ್ಲಿಸಬಹುದಾಗಿದೆ. ಜೂನ್‌ 21 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಜುಲೈ 8 ಅರ್ಜಿ ಸಲ್ಲಿಸಲು ಕೊನೆಯ ದಿನ. ಪರೀಕ್ಷೆಯು ಆಗಸ್ಟ್‌ ನಲ್ಲಿ ನಡೆಯಲಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಐಟಿಐ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್‌ ಮಾಡಿ, ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ https://dasapprenticembi.recttindia.in ಗೆ ಭೇಟಿ ನೀಡಿ.