ಮನೆ ರಾಜ್ಯ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರೋಧ: ಉಪರಾಷ್ಟ್ರಪತಿಯ ವಿರುದ್ಧ ಡಿಎಂಕೆಯಿಂದ ತೀವ್ರ ಟೀಕೆ

ಸುಪ್ರೀಂ ಕೋರ್ಟ್ ತೀರ್ಪಿಗೆ ವಿರೋಧ: ಉಪರಾಷ್ಟ್ರಪತಿಯ ವಿರುದ್ಧ ಡಿಎಂಕೆಯಿಂದ ತೀವ್ರ ಟೀಕೆ

0

ಚೆನ್ನೈ: ಸುಪ್ರೀಂ ಕೋರ್ಟ್ ರಾಷ್ಟ್ರಪತಿಗಳ ನಿರ್ಧಾರಕ್ಕೆ ಕಾಲಮಿತಿ ನಿಗದಿ ಮಾಡಿದ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಹೇಳಿಕೆಗೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ತೀವ್ರ ಪ್ರತಿಕ್ರಿಯೆ ನೀಡಿದೆ. ಉಪರಾಷ್ಟ್ರಪತಿಯ ಇಂತಹ ವಾದಗಳನ್ನು ಡಿಎಂಕೆ “ಅನೈತಿಕ” ಎಂದು ವಿವರಿಸಿ, ಸಂವಿಧಾನಾತ್ಮಕ ಮೌಲ್ಯಗಳ ವಿರುದ್ಧ ಎಂದು ಟೀಕಿಸಿದೆ.

ಡಿಎಂಕೆಯ ಉಪ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ತಿರುಚಿ ಶಿವ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ (ಹಳೆಯ ಟ್ವಿಟ್ಟರ್) ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. “ಸಂವಿಧಾನದ ಪ್ರಕಾರ, ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕರ ಅಧೀನ ವಿಭಾಗಗಳೆಂದರೆ ವಿಭಿನ್ನ ಶಕ್ತಿಗಳು. ಇವೆಲ್ಲವೂ ಸಂವಿಧಾನಾತ್ಮಕ ಸಧ್ಬಾವನೆ ಯೊಂದಿಗೆ ಕೆಲಸ ಮಾಡಬೇಕು. ಸುಪ್ರೀಂ ಕೋರ್ಟ್ ತನ್ನ 142ನೇ ವಿಧಿಯ ಅಧಿಕಾರದಡಿ ನೀಡಿದ ತೀರ್ಪು, ನ್ಯಾಯಾಂಗದ ನಿಲುವು ಸ್ಪಷ್ಟಪಡಿಸುತ್ತದೆ,” ಎಂದು ಅವರು ಹೇಳಿದರು.

ಈ ನಡುವೆ, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸುಪ್ರೀಂ ಕೋರ್ಟ್ ತೀರ್ಪನ್ನು ತೀವ್ರವಾಗಿ ಟೀಕಿಸಿದ್ದರು. ಅವರು ರಾಷ್ಟ್ರಪತಿಗಳಿಗೆ ಕಾಲಮಿತಿ ನಿಗದಿಪಡಿಸುವುದನ್ನು “ಆತಂಕಕಾರಿ ಬೆಳವಣಿಗೆ” ಎಂದು ಪರಿಗಣಿಸಿ, “ನ್ಯಾಯಾಂಗವು ಸೂಪರ್ ಪಾರ್ಲಿಮೆಂಟ್ ಆಗಿ ಕಾರ್ಯನಿರ್ವಹಿಸುವ ವ್ಯವಸ್ಥೆ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿದೆ” ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ರಾಜ್ಯಸಭಾ ಇಂಟರ್ನ್‌ಗಳಿಗೆ ಮಾತನಾಡಿದ ಉಪರಾಷ್ಟ್ರಪತಿ, “ಇತ್ತೀಚಿನ ತೀರ್ಪಿನ ಮೂಲಕ ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲಾಗುತ್ತಿದೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ? ಇದು ಎಲ್ಲಿ ಮುಗಿಯಲಿದೆ?” ಎಂದು ಪ್ರಶ್ನಿಸಿದ್ದರು. ಅವರ ಈ ಹೇಳಿಕೆಗೆ ಹಲವು ರಾಜಕೀಯ ಪಕ್ಷಗಳು ಹಾಗೂ ಸಂವಿಧಾನಪರ ತಜ್ಞರು ತೀವ್ರ ಪ್ರತಿಕ್ರಿಯೆ ನೀಡಿದ್ರು.

ಮೂಲವಾಗಿ ಈ ವಿವಾದ ತಮಿಳುನಾಡಿನ ಪ್ರಕರಣದಿಂದ ಆರಂಭವಾಯಿತು. ರಾಜ್ಯಪಾಲರು ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಕಾಯ್ದಿರಿಸಿ ಬಹುಕಾಲ ತಡೆಹಿಡಿದಿದ್ದರು. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದು, ಸಂವಿಧಾನದ 201ನೇ ವಿಧಿಯಡಿ ರಾಷ್ಟ್ರಪತಿಗಳು ಮೂರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆದೇಶಿಸಿತು.

ಡಿಎಂಕೆಯ ನಿಲುವು

ಡಿಎಂಕೆ ಪಕ್ಷದ ಮುಖಂಡರು ಈ ತೀರ್ಪಿಗೆ ಸಂಪೂರ್ಣ ಬೆಂಬಲ ನೀಡಿದ್ದು, “ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಸಂವಿಧಾನದ ಶ್ರೇಷ್ಠತೆಯನ್ನು ಹಿರಿದು ಹಿಡಿಯುತ್ತದೆ. ಯಾವುದೇ ವ್ಯಕ್ತಿಯೂ ಅಥವಾ ಸ್ಥಾನಮಾನದಾತ್ಮಕ ಅಧಿಕಾರವೂ, ಕಾನೂನನ್ನು ಮೀರಿ ಹೋಗಲು ಸಾಧ್ಯವಿಲ್ಲ,” ಎಂದು ಹೇಳಿದ್ದಾರೆ.

ಈ ವಿವಾದ ಭಾರತದ ಕಾರ್ಯಾಂಗ ಮತ್ತು ನ್ಯಾಯಾಂಗದ ಮದ್ಯದ ಶಕ್ತಿ ಹಂಚಿಕೆ ಕುರಿತು ಪುನರ್ಚರ್ಚೆಗೆ ವೇದಿಕೆಯಾಗಿದ್ದು, ಉಪರಾಷ್ಟ್ರಪತಿಯ ಹೇಳಿಕೆಗಳು ಪ್ರಜಾಪ್ರಭುತ್ವದ ಮೂಲತತ್ವಗಳ ಬಗ್ಗೆ ಗಂಭೀರ ಚಿಂತೆ ಹುಟ್ಟಿಸಿದ್ದವೆ. ಮುಂದಿನ ದಿನಗಳಲ್ಲಿ ಈ ವಿಚಾರ ರಾಜಕೀಯ ಹಾಗೂ ಕಾನೂನು ವಲಯದಲ್ಲಿ ಹೇಗೆ ಮುನ್ನಡೆಯುತ್ತದೆ ಎಂಬುದು ಕುತೂಹಲಕಾರಿ ವಿಷಯವಾಗಿದೆ.