ಮನೆ ಸುದ್ದಿ ಜಾಲ ಮಕ್ಕಳ ಹಕ್ಕುಗಳು, ಬಾಲ್ಯ ವಿವಾಹದ ದುಷ್ಪರಿಣಾಮಗಳ ಕುರಿತು ಜಾಗೃತಿ

ಮಕ್ಕಳ ಹಕ್ಕುಗಳು, ಬಾಲ್ಯ ವಿವಾಹದ ದುಷ್ಪರಿಣಾಮಗಳ ಕುರಿತು ಜಾಗೃತಿ

0

ಮೈಸೂರು (Mysuru): ಇಂದು ನಗರದಲ್ಲಿ ಮಕ್ಕಳ ಹಕ್ಕುಗಳು, ಬಾಲ್ಯ ವಿವಾಹದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಆರ್.ಎಲ್.ಹೆಚ್.ಪಿ. (RLHP)-ಚೈಲ್ಡ್ ಲೈನ್-1098 ವತಿಯಿಂದ ಸಿದ್ದಾರ್ಥ ನಗರದಲ್ಲಿ ಜೆ.ಎಸ್.ಎಸ್ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಚೈಲ್ಡ್ ಲೈನ್- 1098, ಮಕ್ಕಳ ಹಕ್ಕುಗಳು, ಬಾಲ್ಯ ವಿವಾಹದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.


ಈ ಕಾರ್ಯಕ್ರಮದಲ್ಲಿ ಚೈಲ್ಡ್ ಲೈನ್ ಸಂಯೋಜಕರದ ಶಶಿಕುಮಾರ್ ಮಾತನಾಡಿ , 1992 ಡಿಸೇಂಬರ್ 11 ರಂದು ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಭಾರತ ದೇಶ ಸಹಿ ಮಾಡಿದ್ದು, 54 ಪರಿಚ್ಛೇದಗಳಲ್ಲಿ 4 ಪ್ರಮುಖ ಹಕ್ಕುಗಳನ್ನು ಮಕ್ಕಳಿಗೆ ಸಂವಿಧಾನ ಬದ್ಧವಾಗಿ
ನೀಡಿದೆ.
ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಅವಕಾಶ ಮತ್ತು ವಿಕಾಸ ಹೊಂದುವ ಹಕ್ಕು ಮತ್ತು ಭಾಗವಹಿಸುವ ಹಕ್ಕು ಇದ್ದು ಮಕ್ಕಳು ಹಕ್ಕುಗಳ ಜೊತೆಯಲ್ಲಿ ಕರ್ತವ್ಯಗಳನ್ನು ಪಾಲಿಸಬೇಕಿದೆ. ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಕಂಡುಬಂದಲ್ಲಿ 1098ಕ್ಕೆ ಕರೆಮಾಡುವಂತೆ ತಿಳಿಸಿದರು.
ಚೈಲ್ಡ್ ಲೈನ್ ಸದಸ್ಯರಾದ ಪ್ರೇಮಕುಮಾರ್, ಶಾಲೆಯ ಮುಖ್ಯ ಶಿಕ್ಷಕರಾದ ಎಂ.ದೇವಲಿಂಗಸ್ವಾಮಿ, ಸಹ ಶಿಕ್ಷಕರು ಉಪಸ್ಥಿತರಿದ್ದರು.