ದೆಹಲಿ: ಭಯೋತ್ಪಾದನೆಗೆ ತಡೆಯೊಡ್ಡುವ ದೃಢನಿಶ್ಚಯದ ಭಾಗವಾಗಿ ಭಾರತೀಯ ಸೇನೆ ಮಂಗಳವಾರ ತಡರಾತ್ರಿ ಪಾಕಿಸ್ತಾನದ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ತಾಣಗಳ ಮೇಲೆ ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಉಗ್ರ ದಾಳೆ ನಡೆಸಿದೆ. ಕೇವಲ 23 ನಿಮಿಷಗಳಲ್ಲಿ ನಡೆಸಲಾದ ಈ ಏರ್ಸ್ಟ್ರೈಕ್ನಲ್ಲಿ 80ಕ್ಕೂ ಹೆಚ್ಚು ಉಗ್ರರು ಹೊತ್ತಿ ಉರಿದಿದ್ದಾರೆ ಎನ್ನಲಾಗಿದೆ.
ಕಾಶ್ಮೀರದ ಬೈಸರನ್ ಕಣಿವೆಯಲ್ಲಿ ಹಿಂದೂಗಳ ಮೇಲೆ ನಡೆದ ಕ್ರೂರ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಭಾರತ ತಕ್ಷಣ ಪ್ರತಿಕ್ರಿಯೆ ನೀಡಿದ್ದು, ಭಾರತದ ಅತ್ಯಾಧುನಿಕ ರಫೇಲ್ ಯುದ್ಧವಿಮಾನಗಳು ಸೇರಿದಂತೆ ಹಲವಾರು ಫೈಟರ್ ಜೆಟ್ಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ದಾಳಿ ರಾತ್ರಿ 1:44ಕ್ಕೆ ಪ್ರಾರಂಭವಾಗಿ 2:07ಕ್ಕೆ ಮುಕ್ತಾಯವಾಯಿತು. ಎಲ್ಲ ಯುದ್ಧವಿಮಾನಗಳು ಯಶಸ್ವಿಯಾಗಿ ದೇಶದ ಗಡಿಯೊಳಗೆ ಮರಳಿವೆ.
ಈ ದಾಳಿಯಲ್ಲಿ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಉಗ್ರರಿಗೆ ತರಬೇತಿ ನೀಡಲಾಗುತ್ತಿದ್ದ ಸುಬಾನಲ್ಲಾಹ್ ಮಸೀದಿ ಸೇರಿದಂತೆ ಹಲವಾರು ಪ್ರಮುಖ ಉಗ್ರ ತಾಣಗಳನ್ನು ನಾಶಗೊಳಿಸಲಾಗಿದೆ. ಒಟ್ಟು 9ಕ್ಕೂ ಹೆಚ್ಚು ಉಗ್ರ ಶಿಬಿರಗಳ ಮೇಲೆ ದಾಳಿ ನಡೆದಿದ್ದು, ಭಾರತೀಯ ಸರ್ಕಾರದ ಪರವಾನಿಗೆಯೊಂದಿಗೆ ಸೇನೆ ಈ ಕಾರ್ಯಾಚರಣೆಯನ್ನು ಕೈಗೊಂಡಿದೆ.
ಈ ಹಿಂದೆಯೇ ಕೇಂದ್ರ ಸರ್ಕಾರ ದೇಶಾದ್ಯಾಂತ ಸಿವಿಲ್ ಡಿಫೆನ್ಸ್ ಮಾಕ್ ಡ್ರಿಲ್ ನಡೆಸಲು ರಾಜ್ಯಗಳಿಗೆ ಸೂಚನೆ ನೀಡಿತ್ತು. ಈ ಡ್ರಿಲ್ ಉಗ್ರ ದಾಳಿ ಅಥವಾ ಯುದ್ಧ ಪರಿಸ್ಥಿತಿಯ ವೇಳೆ ನಾಗರಿಕರು ಹೇಗೆ ಪ್ರತಿಕ್ರಿಯಿಸಬೇಕು ಎಂಬುದರ ಬಗ್ಗೆ ತರಬೇತಿ ನೀಡುವ ಉದ್ದೇಶವನ್ನು ಹೊಂದಿತ್ತು. ಬುಧವಾರ ನಡೆದ ಈ ತರಬೇತಿ ಕಾರ್ಯಾಚರಣೆ ಮತ್ತು ಮಂಗಳವಾರ ರಾತ್ರಿ ನಡೆದ ದಾಳಿಯ ನಡುವಿನ ಸಮನ್ವಯವು ಸರ್ಕಾರದ ಜವಾಬ್ದಾರಿ ಹಾಗೂ ಸನ್ನದ್ಧತೆಯನ್ನು ತೋರಿಸುತ್ತದೆ.
ಪಾಕಿಸ್ತಾನ ಗಡಿಯಲ್ಲೂ ತೀವ್ರ ಸೇನಾ ಚಟುವಟಿಕೆಗಳು ದಟ್ಟವಾಗಿದ್ದು, ಉಗ್ರ ತಾಣಗಳ ನಾಶದಿಂದಾಗಿ ಅವರ ತಂತ್ರತಜ್ಞತೆಯಲ್ಲಿ ಭಾರಿ ಹೊಡೆತವಾಗಿದೆ. ಈ ದಾಳಿಯ ಬಗ್ಗೆ ಪಾಕಿಸ್ತಾನದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಾರದಿದ್ದರೂ, ಭಾರತೀಯ ಸೇನೆಯ ಈ ನಿರ್ಣಯ ಬಲಿಷ್ಠ ಹಾಗೂ ಉಗ್ರ ಸಂಘಟನೆಗಳಿಗೆ ಎಚ್ಚರಿಕೆಯ ಸಂದೇಶ ನೀಡಿದೆ.
ಆಪರೇಷನ್ ಸಿಂಧೂರ್ ಭಾರತದ ಭದ್ರತೆ ಹಾಗೂ ಭಯೋತ್ಪಾದನೆ ವಿರುದ್ಧದ ಶೂನ್ಯ ಸಹಿಷ್ಣುತೆ ನೀತಿಯ ಪ್ರತಿರೂಪವಾಗಿದೆ. ದೇಶದ ಪ್ರಜೆಗಳ ರಕ್ಷಣೆಗೆ ಸೇನೆ ಯಾವ ಮಟ್ಟದ ಕ್ರಮ ತೆಗೆದುಕೊಳ್ಳಬಹುದು ಎಂಬುದನ್ನು ಈ ದಾಳಿ ಸ್ಪಷ್ಟಪಡಿಸಿದೆ.














