ಮನೆ ರಾಜ್ಯ ಆಪರೇಷನ್ ಸಿಂಧೂರ್ : “ಭಾರತ ದಿಟ್ಟ ಮತ್ತು ವಿವೇಕಯುತ ಹೆಜ್ಜೆ ಇಟ್ಟಿದೆ” : ರವಿಶಂಕರ್​ ಗುರೂಜಿ

ಆಪರೇಷನ್ ಸಿಂಧೂರ್ : “ಭಾರತ ದಿಟ್ಟ ಮತ್ತು ವಿವೇಕಯುತ ಹೆಜ್ಜೆ ಇಟ್ಟಿದೆ” : ರವಿಶಂಕರ್​ ಗುರೂಜಿ

0

ಮಂಗಳೂರು : ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಆಪರೇಷನ್ ಸಿಂಧೂರ್ ಕುರಿತು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಭಾರತೀಯ ಸೇನೆಯ ಕ್ರಮವನ್ನು ಸರಿಯಾದ ಮತ್ತು ಅಗತ್ಯವಾದ ಒಂದು ದಿಟ್ಟ ಹೆಜ್ಜೆ ಎಂದು ವರ್ಣಿಸಿದ್ದಾರೆ.

ಉಗ್ರವಾದವನ್ನು ಬೇರು ಸಮೇತ ಕಿತ್ತೆಸೆಯುವ ಅವಶ್ಯಕತೆಯನ್ನು ಅವರು ಒತ್ತಿ ಹೇಳಿದ್ದಾರೆ. ಭಾರತದ ಈ ದಿಟ್ಟ ಹೆಜ್ಜೆಯನ್ನು ಅವರು ಸ್ವಾಗತಿಸಿದ್ದಾರೆ ಮತ್ತು ಭಯಪಡುವ ಅಗತ್ಯವಿಲ್ಲ ಎಂದು ದೇಶವಾಸಿಗಳಿಗೆ ಭರವಸೆ ನೀಡಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ಸರಿಯಾದ ನಿರ್ಣಯ ಕೈಗೊಳ್ಳುತ್ತಿದೆ ಎಂದೂ ಅವರು ಹೇಳಿದ್ದಾರೆ.

ಕೇವಲ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ದಾಳಿ ಮಾಡಿದ್ದು, ಸರಿಯಾಗಿದೆ. ದೇಶ ಮತ್ತು ವಿದೇಶದಲ್ಲಿ ನೆಲೆಸಿರುವ ಭಾರತೀಯರು ಭಯಪಡುವ ಅವಶ್ಯಕತೆ ಇಲ್ಲ. ಎಲ್ಲವೂ ಶುಭವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಸರಿಯಾದ ನಿರ್ಣಯ ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಯಾರು ಕೂಡ ಆತಂಕ ಮತ್ತು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಈಶ್ವರ ನಮ್ಮ ಜೊತೆ ಇದ್ದಾನೆ. ಎಲ್ಲವೂ ಸರಿಯಾಗುತ್ತೆ. ಧೈರ್ಯದಿಂದ ಇರಿ” ಎಂದು ಹೇಳಿದರು.