ಮನೆ ಸುದ್ದಿ ಜಾಲ ಬಾಲ ಕಾರ್ಮಿಕ ಪದ್ಧತಿ ಈಗಲೂ ಸಮಸ್ಯೆ: ಎಂ.ಎಲ್.ರಘುನಾಥ್

ಬಾಲ ಕಾರ್ಮಿಕ ಪದ್ಧತಿ ಈಗಲೂ ಸಮಸ್ಯೆ: ಎಂ.ಎಲ್.ರಘುನಾಥ್

0

ಮೈಸೂರು (Mysuru): ಬಾಲ ಕಾರ್ಮಿಕ ಪದ್ಧತಿ ಹಿಂದಿನಿಂದಲೂ ಬಂದಂತಹ ಸಮಸ್ಯೆಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಎಲ್.ರಘುನಾಥ್ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಸ್ವಯಂ ಸೇವಾ ಸಂಘಗಳು ಹಾಗೂ ಮಕ್ಕಳ ಸಹಾಯವಾಣಿ 1098 ಇವರ ಸಹಯೋಗದೊಂದಿಗೆ ಇಂದು ನಗರದ ಕಲಾಮಂದಿರದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 14 ವರ್ಷದೊಳಗಿನ ಮಕ್ಕಳನ್ನು ವಿವಿಧ ಕಾರ್ಯಗಳಲ್ಲಿ ತೊಡಗಿಸುವುದು ಹಾಗೂ ಯಾವುದೇ ಸಂಸ್ಥೆಗಳಲ್ಲಿ ಕಾರ್ಮಿಕರನ್ನಾಗಿ ಬಳಸಿಕೊಳ್ಳುವುದು ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ ಎಂದು ತಿಳಿಸಿದರು.

ಶಿಕ್ಷಣ ಎಂಬುದು ಮೊದಲು ಮೂಲಭೂತ ಹಕ್ಕುಗಳ ಅಡಿಯಲ್ಲಿ ಇರಲಿಲ್ಲ. ಆದರೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವಂತದ್ದು ರಾಜ್ಯ ಕೇಂದ್ರ ಸರ್ಕಾರಗಳ ಹೊಣೆಯಾಗಿರುತ್ತದೆ ಎಂದು ತಿಳಿಸಿದರು.

ಉಚಿತ ಶಿಕ್ಷಣ ನೀಡಲು ವ್ಯವಸ್ಥೆ ಮಾಡಿಕೊಂಡಿದ್ದರೂ ಸಹ ಇಂದಿಗೂ ಸಾಕಷ್ಟು ಸಹ ಮಕ್ಕಳು ಶಾಲೆಗೆ ಬರೆದಿರುವುದನ್ನು ನೋಡಿದ್ದೇವೆ. ವಿಶೇಷವಾಗಿ ಬುಡಕಟ್ಟು ಜನಾಂಗಕ್ಕೆ ಸೇರಿದ ಮಕ್ಕಳು ಶಾಲೆ ನೋಡಿರುವುದಿಲ್ಲ. ಮೈಸೂರು ಜಿಲ್ಲೆಯಲ್ಲಿ ಹೆಚ್.ಡಿ.ಕೋಟೆ, ನಾಗರಹೊಳೆ ಹಾಗೂ ಕಾಕನಕೋಟೆಯ ಸಾಕಷ್ಟು ಹಳ್ಳಿಗಳಲ್ಲಿ ವಿದ್ಯಾರ್ಥಿಗಳಿಗೆ ಪುನರ್ವಸತಿ ಕೇಂದ್ರ ಸ್ಥಾಪನೆ ಮಾಡಿ ಮುಖ್ಯವಾಹಿನಿಗೆ ತರುವಂತಹ ಕೆಲಸನ್ನು ಮಾಡಲಾಗಿದೆ ಎಂದು ಹೇಳಿದರು.

ಬಾಲ ಕಾರ್ಮಿಕ ಪದ್ಧತಿಗೆ ಹೋಗದ ರೀತಿಯಲ್ಲಿ ಮೂಲ ಶಿಕ್ಷಣವನ್ನು ಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಶಿಕ್ಷಣ ನೀಡಿದರು ಸಹ ಬಾಲಕಾರ್ಮಿಕ ಪದ್ಧತಿ ಎಂಬುದು ಮುಂದುವರಿಯುತ್ತದೆ ಏಕೆಂದರೆ ಮೂಲ ಕಾರಣ ಬಡತನವಾಗಿದೆ. ಉಚಿತವಾಗಿ ಶಿಕ್ಷಣ ನೀಡಿದರು ಸಹ ಶಾಲೆಗೆ ಕಳಿಸದೆ ಇರುವುದನ್ನು ನೋಡಿದ್ದೇವೆ ಇದಕ್ಕೆ ಕಾರಣ ಅವರ ಆರ್ಥಿಕ ಪರಿಸ್ಥಿತಿಯಾಗಿದೆ ಎಂದು ತಿಳಿಸಿದರು.

ಪುನರ್ವಸತಿ ಕೇಂದ್ರವನ್ನು ಮಕ್ಕಳಿಗೆ ಹಾಗೂ ಪೋಷಕರಿಗಾಗಿ ಸ್ಥಾಪಿಸಿ ಹಿಂದುಳಿದ ಕುಟುಂಬಗಳನ್ನು ಉನ್ನತಿಗೊಳಿಸಬೇಕು, ಕಾರ್ಮಿಕ ಪದ್ಧತಿಯಲ್ಲಿ ಮಕ್ಕಳ ರಕ್ಷಣೆ ಆಗುತ್ತಿರುವುದನ್ನು ನೋಡುತ್ತೇವೆ. ಮಕ್ಕಳನ್ನು ಲೈಂಗಿಕ ಶೋಷಣೆಗೆ, ವುಮನ್ ಟ್ರಾಫಿಕಿಂಗ್ ಮಕ್ಕಳ ಮೇಲಿನ ದೌರ್ಜನ್ಯ , ಹಾಗೂ ಬಾಲಕಾರ್ಮಿಕ ವಿರೋಧಿ ಪದ್ಧತಿಯನ್ನು ಹೋಟೆಲ್ ಉದ್ಯಮದಲ್ಲಿ ಹಾಗೂ ಗಾರ್ಮೆಂಟ್ಸ್ ಉದ್ಯಮದಲ್ಲಿ ಫ್ಯಾಕ್ಟರಿಗಳಲ್ಲಿ ಹಾಗೂ ಕೆಮಿಕಲ್ ಫ್ಯಾಕ್ಟರಿಗಳಲ್ಲಿ ದುಡಿಮೆಗೆ ಬಳಸಿಕೊಳ್ಳುವುದನ್ನು ನೋಡುತ್ತೇವೆ ಎಂದರು.

ಜಿಲ್ಲಾ ಕಾನೂನು ಅಡಿಯಲ್ಲಿ ಕಾನೂನು ಸೇವೆಯನ್ನು ನೀಡಲು ಸಿದ್ಧರಾಗಿದ್ದೇವೆ. ಕಾನೂನಿನಲ್ಲಿ ಇರುವ ಅವಕಾಶವನ್ನು ಮಕ್ಕಳಿಗಾಗಿ ಹಾಗೂ ಮಕ್ಕಳ ಕುಟುಂಬಗಳಿಗೆ ಕಾನೂನಿನಲ್ಲಿ ಉಚಿತವಾಗಿ ಕೊಡುವಂತಹ ವ್ಯವಸ್ಥೆಯನ್ನು ಹೊಂದಿದ್ದೇವೆ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳು ಹಾಗೂ ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವರಾಜ ಭೂತೆ ಅವರು ಮಾತನಾಡಿ ಇಂದು ನಾವು 75ನೇ ಅಮೃತ ಸ್ವಾತಂತ್ರ‍್ಯ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಆದರೆ ಸ್ವಾತಂತ್ರ ಬಂದಿದ್ದರೂ ಸಹ ನಮ್ಮ ದೇಶದಲ್ಲಿ ಇನ್ನೂ ಬಾಲಕಾರ್ಮಿಕ ಪದ್ಧತಿ ಇದೆ. ಪ್ರಪಂಚದಲ್ಲಿ ನೂರು ಜನ ಮಕ್ಕಳು ಬಾಲಕಾರ್ಮಿಕ ಪದ್ದತಿಗೆ ಒಳಗಾಗಿದ್ದರೆ ನಮ್ಮ ಭಾರತದಲ್ಲಿ ಶೇಕಡ 20 ರಷ್ಷು ಜನ ಮಕ್ಕಳು ಬಾಲ ಕಾರ್ಮಿಕ ಪದ್ಧತಿಗೆ ಒಳಗಾಗಿರುವುದು ವಿಪರ್ಯಾಸ ಎಂದರು.

ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಮಿಕ ಇಲಾಖೆಯ ಆಯುಕ್ತರಾದ ನಾಜಿಯ ಸುಲ್ತಾನ, ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಮಚಂದ್ರ ರಾಜೇ ಅರಸ್, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ನಿರ್ದೇಶಕರಾದ ಸರಸ್ವತಿ, ಸಾಹಿತಿಗಳು ಹಾಗೂ ಸಮಾಜ ಕಾರ್ಯಕರ್ತರಾದ ಬನ್ನೂರು.ಕೆ.ರಾಜು, ಜ್ಞಾನಜ್ಯೋತಿ ಸಂಸ್ಥೆಯ ಸಂಸ್ಥಾಪನಾ ಕಾರ್ಯದರ್ಶಿಗಳಾದ ಎಂ.ಎಸ್. ಹೇಮವತಿ ಹಾಗೂ ಆನೇಕ ಗಣ್ಯರು ಉಪಸ್ಥಿತರಿದ್ದರು.