ಮನೆ ರಾಷ್ಟ್ರೀಯ ‘ಪಾಕಿಸ್ತಾನವನ್ನು ಭೂಪಟದಿಂದಲೇ ಇಲ್ಲದಂತೆ ಮಾಡಬೇಕು’ : ಕಂಗನಾ ರಣಾವತ್

‘ಪಾಕಿಸ್ತಾನವನ್ನು ಭೂಪಟದಿಂದಲೇ ಇಲ್ಲದಂತೆ ಮಾಡಬೇಕು’ : ಕಂಗನಾ ರಣಾವತ್

0

ನಟಿ ಕಂಗನಾ ರಣಾವತ್ ಅವರು ಭರ್ಜರಿ ಸುದ್ದಿಯಲ್ಲಿದ್ದಾರೆ. ಅವರು ಆಗಾಗ ಹೇಳಿಕೆ ನೀಡಿ ಸುದ್ದಿ ಆಗುತ್ತಾರೆ. ಈಗ ಅವರು ಕೇವಲ ನಟಿ ಅಲ್ಲ, ರಾಜಕಾರಣಿ ಕೂಡ ಹೌದು. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಪರ ಸ್ಪರ್ಧಿಸಿ, ಸಂಸದೆ ಆಗಿದ್ದಾರೆ. ಇತ್ತೀಚೆಗೆ ಆರಂಭ ಆದ ಭಾರತ ಮತ್ತು ಪಾಕ್ ನಡುವಿನ ಯುದ್ಧ ಭೀತಿ ಬಗ್ಗೆ ಕಂಗನಾ ರಣಾವತ್ ಮಾತನಾಡಿದ್ದಾರೆ. ಪಾಕಿಸ್ತಾನವನ್ನು ‘ಭಯೋತ್ಪಾದಕರ ನಾಡು’ ಎಂದು ಕರೆದಿರುವ ಅವರು, ‘ವಿಶ್ವದ ಮ್ಯಾಪ್​ನಿಂದಲೇ ಅವರನ್ನು ತೆಗೆದು ಹಾಕಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನದವರು ಭಾರತದ ಮೇಲೆ ಹಲವು ಕಡೆಗಳಲ್ಲಿ ಡ್ರೋನ್ ದಾಳಿ ಮಾಡಲು ಪ್ರಯತ್ನಿಸಿದ್ದು ಇದೆ. ಜಮ್ಮು, ಸಾಂಬಾ, ಸತ್ವಾರಿ, ಅಮೃತ್​ಸರ್, ಜಲಂಧರ್ ಮೊದಲಾದ ಕಡೆಗಳಲ್ಲಿ ಪಾಕ್ ಡ್ರೋನ್ ದಾಳಿಗೆ ಪ್ರಯತ್ನಿಸಿದ್ದು ಭಾರತ ಅದನ್ನು ಹಿಮ್ಮೆಟ್ಟಿಸಿದೆ. ಇನ್ನು, ಪಹಲ್ಗಾಮ್ ದಾಳಿ ಹಿಂದೆ ನಮ್ಮ ಕೈವಾಡ ಇಲ್ಲ ಎಂದು ಪಾಕ್ ವಾದಿಸುತ್ತಲೇ ಬರುತ್ತಿದೆ. ಈ ವಿಚಾರಗಳ ಬಗ್ಗೆ ಕಂಗನಾ ಪ್ರತಿಕ್ರಿಯಿಸಿದ್ದಾರೆ.

‘ಪಾಕಿಸ್ತಾನ ರಕ್ತಸಿಕ್ತ ಜಿರಳೆಗಳಿಂದ ಕೂಡಿದೆ. ಭಯೋತ್ಪಾದಕರಿಂದ ತುಂಬಿರುವ ಭಯಾನಕ, ಅಸಹ್ಯ ರಾಷ್ಟ್ರ. ವಿಶ್ವ ಭೂಪಟದಿಂದಲೇ ಅವರನ್ನು ಅಳಿಸಿಹಾಕಬೇಕು’ ಎಂದು ಕಂಗನಾ ಅವರು ಗುಡುಗಿದ್ದಾರೆ. ಅವರ ಹೇಳಿಕೆಯನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.

ಭಾರತದ ಎಸ್​-400 ಮಿಸೈಲ್ ಡಿಫೆನ್ಸ್ ಸಿಸ್ಟಮ್​ನ ಕಾರ್ಯಕ್ಷಮತೆ ಬಗ್ಗೆ ಕಂಗನಾ ಈ ಮೊದಲು ಮಾತನಾಡಿದ್ದರು. ‘ಜಮ್ಮುನ ಟಾರ್ಗೆಟ್ ಮಾಡಲಾಗುತ್ತಿದೆ. ಭಾರತದ ಏರ್ ಡಿಫೆನ್ಸ್​ ವ್ಯವಸ್ಥೆಯು ಪಾಕ್ ಡ್ರೋನ್​ಗಳನ್ನು ಹೊಡೆದ ಹಾಕಿವೆ’ ಎಂದು ಕಂಗನಾ ಅವರು ಈ ಮೊದಲು ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಪಹಲ್ಗಾಮ್ ದಾಳಿ ಬೆನ್ನಲ್ಲೇ ಭಾರತದವರು ‘ಆಪರೇಷನ್ ಸಿಂಧೂರ್’ ನಡೆಸಿದ್ದಾರೆ. ಈ ದಾಳಿಗೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ಮುಂದಿನ ದಿನಗಳಲ್ಲಿ ಗಡಿಯಲ್ಲಿ ಮತ್ತಷ್ಟು ಬಿಗುವಿನ ವಾತಾವರಣ ನಿರ್ಮಾಣ ಆಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.