ಮನೆ ಸುದ್ದಿ ಜಾಲ ಗಣ್ಯರಿಂದ ಶಾಸಕ ಸಿ.ಪುಟ್ಟರಂಗಶೆಟ್ಟಿ ಪುತ್ರ ಚಾಮರಾಜು ಅಂತಿಮ ದರ್ಶನ

ಗಣ್ಯರಿಂದ ಶಾಸಕ ಸಿ.ಪುಟ್ಟರಂಗಶೆಟ್ಟಿ ಪುತ್ರ ಚಾಮರಾಜು ಅಂತಿಮ ದರ್ಶನ

0

ಯಳಂದೂರು : ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಎಂಎಸ್‌ಐಎಲ್ ಅಧ್ಯಕ್ಷರಾದ ಸಿ.ಪುಟ್ಟರಂಗಶೆಟ್ಟಿ ಹಿರಿಯ ಪುತ್ರ ಪಿ.ಚಾಮರಾಜು ಅಂತ್ಯಕ್ರಿಯೆ ಸ್ವಗ್ರಾಮವಾದ ಯಳಂದೂರು ತಾಲೂಕಿನ ಉಪ್ಪಿನಮೋಳೆ ಗ್ರಾಮದಲ್ಲಿ ಮಂಗಳವಾರ ನೆರವೇರಿತು.

ಮೃತರ ಸ್ವಗ್ರಾಮವಾದ ಉಪ್ಪಿನಮೋಳೆಯ ತೋಟದಲ್ಲಿ ತಾತ ಚಾಮಶೆಟ್ಟಿ ಅಜ್ಜಿ ನಂಜಮ್ಮ ಸಮಾಧಿಯ ಸಮೀಪವೇ ಮೊಮ್ಮಗ ಚಾಮರಾಜು ಅಂತ್ಯಕ್ರಿಯೆ ಮಂಗಳವಾರ ಜರುಗಿತು. ಅಂತ್ಯಕ್ರಿಯೆ ಯಲ್ಲಿ ಅಪಾರ ಜನಸ್ತೋಮ ನೆರೆದಿತ್ತು.

ಗಣ್ಯರ ಭೇಟಿ ನೀಡಿ ಅಂತಿಮ ದರ್ಶನ: ಹೊಸದುರ್ಗ ಭಗೀರಥ ಪೀಠದ ಪುರು?ತ್ತಮಾನಂದಪುರಿಸ್ವಾಮೀಜಿ ಹಾಗೂ ಕ್ರಿಶ್ಚಿಯನ್ ಧರ್ಮಗುರುಗಳು, ಮುಸ್ಲಿಂ ಧರ್ಮದ ಗುರುಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ, ಸಂಸದ ಸುನೀಲ್ ಬೋಸ್, ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಎ.ಆರ್.ಕೃಷ್ಣಮೂರ್ತಿ, ಗಣೇಶ್ ಪ್ರಸಾದ್, ಎಂ.ಆರ್.ಮಂಜುನಾಥ್, ಡಾ.ತಿಮ್ಮಯ್ಯ, ದರ್ಶನ್ ಧ್ರುವನಾರಾಯಣ್, ಅನಿಲ್ ಚಿಕ್ಕಮಾಧು, ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿ?ಧಿಕಾರಿ ಡಾ.ಬಿ.ಟಿ.ಕವಿತಾ ಮತ್ತಿತರರು ಎಂಎಸ್‌ಐಎಲ್ ಅಧ್ಯಕ್ಷರು, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಹಿರಿಯ ಪುತ್ರ ಪಿ.ಚಾಮರಾಜು ಅವರ ಸ್ವಗ್ರಾಮವಾದ ಯಳಂದೂರು ತಾಲೂಕಿನ ಉಪ್ಪಿನಮೋಳೆಯ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ಕಾಡಾಧ್ಯಕ್ಷ ಪಿ.ಮರಿಸ್ವಾಮಿ, ಮಾಜಿ ಸಚಿವರಾದ ಎಚ್.ಡಿ.ಕೋಟೆ ಎಂ.ಶಿವಣ್ಣ, ಎನ್.ಮಹೇಶ್, ಮಾಜಿ ಶಾಸಕರಾದ ಜಿ.ಎನ್.ನಂಜುಂಡಸ್ವಾಮಿ, ಎಸ್.ಬಾಲರಾಜ್, ಸಿ.ಎನ್.ನಿರಂಜನ್‌ಕುಮಾರ್, ಆರ್.ನರೇಂದ್ರ, ಜಿ.ಪಂ.ಮಾಜಿ ಅಧ್ಯಕ್ಷ ರಾದ ಎಂ.ರಾಮಚಂದ್ರ, ಶೈಲಜಾಮಲ್ಲೇಶ್, ಉಪಾಧ್ಯಕ್ಷರಾದ ಜೆ.ಯೋಗೇಶ್, ಕಿನಕಹಳ್ಳಿ ಸಿದ್ದರಾಜು, ಮುಖಂಡರಾದ ಕೆಲ್ಲಂಬಳ್ಳಿ ಸೋಮನಾಯಕ, ವೆಂಕಟರಮಣಸ್ವಾಮಿ(ಪಾಪು), ಮಂಗಲ ಶಿವಕುಮಾರ್, ಮಾಂಬಳ್ಳಿ ನಂಜುಂಡಸ್ವಾಮಿ, ದುಗ್ಗಹಟ್ಟಿ ಡಿ.ಪಿ.ಪ್ರಭುಸ್ವಾಮಿ, ಮಧುವನಹಳ್ಳಿ ಶಿವಕುಮಾರ್ , ಕಿನಕಹಳ್ಳಿ ರಾಚಯ್ಯ ಸೇರಿದಂತೆ ಪಕ್ಷಾತೀತವಾಗಿ ಎಲ್ಲ ಪಕ್ಷದ ಪ್ರಮುಖರು ಹಾಗೂ ಚಾಮರಾಜನಗರ, ಮೈಸೂರು, ಚಿತ್ರದುರ್ಗಾ, ಮಂಡ್ಯ ಸೇರಿದಂತೆ ಸುತ್ತಮುತ್ತಲ್ಲಿನ ಜಿಲ್ಲೆಯಗಳಿಂದ ಸಾವಿರಾರು ಜನರು ಆಗಮಿಸಿ ಅಂತಿಮ ದರ್ಶನ ಪಡೆದರು.

ಯಳಂದೂರು ತಾಲೂಕಿನ ಉಪ್ಪಿನಮೋಳೆ ಗ್ರಾಮದ ಶಾಸಕ ಸಿ.ಪುಟ್ಟರಂಗಶೆಟ್ಟಿ ರವರ ಪುತ್ರ ಚಾಮರಾಜು ಅಂತಿಮ ದರ್ಶನವನ್ನು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಎಚ್.ಸಿ.ಮಹದೇವಪ್ಪ ಪಡೆದುಕೊಂಡು ನಮನ ಸಲ್ಲಿಸಿದರು.