ಮನೆ ಅಪರಾಧ ಆಂಧ್ರದ ಬಹುಕೋಟಿ ಅಬಕಾರಿ ಹಗರಣ: ಪ್ರಮುಖ ಆರೋಪಿ ಬಾಲಾಜಿ ಗೋವಿಂದಪ್ಪ ವಶಕ್ಕೆ

ಆಂಧ್ರದ ಬಹುಕೋಟಿ ಅಬಕಾರಿ ಹಗರಣ: ಪ್ರಮುಖ ಆರೋಪಿ ಬಾಲಾಜಿ ಗೋವಿಂದಪ್ಪ ವಶಕ್ಕೆ

0

ಚಾಮರಾಜನಗರ : ಆಂಧ್ರ ಪ್ರದೇಶದ ಹೆದ್ದಾರಿ ಅಬಕಾರಿ ಹಗರಣದಲ್ಲಿ ಭಾರೀ ಬೆಳವಣಿಗೆಯೊಂದು ನಡೆದಿದೆ. ಬಹುಕೋಟಿ ಅಬಕಾರಿ ಹಗರಣದ ಪ್ರಮುಖ ಆರೋಪಿ ಬಾಲಾಜಿ ಗೋವಿಂದಪ್ಪನನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ವಶಕ್ಕೆ ಪಡೆದು, ಆಂಧ್ರ ಪ್ರದೇಶಕ್ಕೆ ಕರೆದೊಯ್ಯಲಾಗಿದೆ.

ಬಾಲಾಜಿ ಗೋವಿಂದಪ್ಪ ಅಬಕಾರಿ ಹಗರಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ಆರೋಪಿ. ಈತ ವೈಎಸ್ ಭಾರತಿ ಅಧ್ಯಕ್ಷೆಯಾಗಿರುವ ಭಾರತಿ ಸಿಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಲೆಕ್ಕಪರಿಶೋಧಕ ಹಾಗೂ ನಿರ್ದೇಶಕರಾಗಿದ್ದು, ಆಂಧ್ರದ ಮಾಜಿ ಸಿಎಂ ಜಗನ್‌ ಮೋಹನ್ ರೆಡ್ಡಿಯ ಅವಧಿಯಲ್ಲಿ ನಡೆದ ಅಬಕಾರಿ ದಂಧೆಗೆ ಸಂಬಂಧಿಸಿದಂತೆ ತನಿಖೆ ಎದುರಿಸುತ್ತಿದ್ದಾರೆ.

ಮಾಹಿತಿಯ ಪ್ರಕಾರ, ಬಾಲಾಜಿ ಗೋವಿಂದಪ್ಪ ಕಳೆದ ಒಂದು ವಾರದಿಂದ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಖಾಸಗಿ ರೆಸಾರ್ಟ್‌ನಲ್ಲಿ ಅಡಗಿಕೊಂಡಿದ್ದರು. ಆಂಧ್ರದ ಎಸ್‌ಐಟಿ ಪೊಲೀಸರು ನೀಡಿದ ನೋಟಿಸ್‌ಗೆ ಪ್ರತಿಕ್ರಿಯಿಸದೆ ನಾಪತ್ತೆಯಾಗಿದ್ದ ಈತನನ್ನು ವಿಶೇಷ ತಂಡ ಪತ್ತೆಹಚ್ಚಿ ವಶಕ್ಕೆ ಪಡೆದಿದೆ.

ಬಾಲಾಜಿ ಗೋವಿಂದಪ್ಪನ ವಿರುದ್ಧದ ಮತ್ತೊಂದು ಆರೋಪವೆಂದರೆ, ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರ ನಿರ್ಬಂಧ ಉಲ್ಲಂಘನೆ ಮಾಡಿರುವುದು. ಆದರೆ ಈ ಆರೋಪವನ್ನು ಬಿಆರ್‌ಟಿ ಅರಣ್ಯಾಧಿಕಾರಿಗಳು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಅಧಿಕಾರಿಗಳ ಪ್ರಕಾರ: ಬಾಲಾಜಿ ಮೇ 8 ರಂದು ಬೆಳಿಗ್ಗೆ 9 ಗಂಟೆಯ ನಂತರ ಬಿಎನ್ ಬೆಟ್ಟದ ಗೇಟ್‌ ಮೂಲಕ ಪ್ರವೇಶಿಸಿದ್ದಾರೆ. ರಾತ್ರಿ 6 ರಿಂದ ಬೆಳಿಗ್ಗೆ 6 ರವರೆಗೆ ಪ್ರವೇಶ ನಿರ್ಬಂಧವಿದ್ದರೂ, ಅವರು ನಿರ್ಬಂಧಿತ ಸಮಯದಲ್ಲಿ ಪ್ರವೇಶ ಹೊಂದಿಲ್ಲ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಿಂದ ಇದು ಸ್ಪಷ್ಟವಾಗಿದೆ ಎಂದು ಯಳಂದೂರು ವಲಯದ ಅರಣ್ಯಾಧಿಕಾರಿ ನಾಗೇಂದ್ರ ನಾಯಕ್ ತಿಳಿಸಿದ್ದಾರೆ.

ಅಬಕಾರಿ ಹಗರಣವು ಆಂಧ್ರದ ರಾಜಕೀಯ ಹಾಗೂ ಬೃಹತ್ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಮಹತ್ವದ ವಿಚಾರವಾಗಿದ್ದು, ಬಾಲಾಜಿಯ ಬಂಧನವು ಸಾಕಷ್ಟು ಬೂದಿ ಕೆಳಗಿನ ಬೆಂಕಿಯಂತೆ ಭಿನ್ನತೆ ಮೂಡಿಸಲಿದೆ. ಈ ಹಗರಣದಲ್ಲಿ ಹೆಚ್ಚಿನ ರಾಜಕೀಯ ಸಂಬಂಧಗಳು ಬೆಳಕಿಗೆ ಬರಬಹುದೆಂಬ ನಿರೀಕ್ಷೆಯಿದೆ.