ಮನೆ ಸುದ್ದಿ ಜಾಲ ಆನ್‍ಲೈನ್ ಮೂಲಕ ಮೊಬೈಲ್ ಖರೀದಿಸಿದ ವಿದ್ಯಾರ್ಥಿಗೆ ಮೋಸ : ಅಮೆಜಾನ್‌ಗೆ ಭಾರೀ ದಂಡ ವಿಧಿಸಿದ ಗ್ರಾಹಕರ...

ಆನ್‍ಲೈನ್ ಮೂಲಕ ಮೊಬೈಲ್ ಖರೀದಿಸಿದ ವಿದ್ಯಾರ್ಥಿಗೆ ಮೋಸ : ಅಮೆಜಾನ್‌ಗೆ ಭಾರೀ ದಂಡ ವಿಧಿಸಿದ ಗ್ರಾಹಕರ ಆಯೋಗ

0

ಧಾರವಾಡ: ಹುಬ್ಬಳ್ಳಿಯ ಅಕ್ಷಯಪಾರ್ಕ ನಿವಾಸಿ ಪ್ರತೀಕ್ ಗುಡಿಸಾಗರ ಎಂಬ ವಿದ್ಯಾರ್ಥಿ, ತನ್ನ ವ್ಯಾಸಂಗಕ್ಕಾಗಿ ಅಮೆಜಾನ್‌ ಮೂಲಕ ₹24,999ಕ್ಕೆ ರೆಡ್ ಮಿ ನೋಟ್-13 ಪ್ರೋ + ಮೊಬೈಲ್ ಬುಕ್ ಮಾಡಿದ್ದ. ಆದರೆ, ಡೆಲಿವರಿಯಾದ ಉತ್ಪನ್ನ ಕಡಿಮೆ ಮೊತ್ತದ ಸ್ಯಾಮಸಂಗ್ ಗ್ಯಾಲಕ್ಷಿ ಮೊಬೈಲನ್ನು ಆಗಿದ್ದುದರಿಂದ ಗ್ರಾಹಕರ ಹಕ್ಕು ಉಲ್ಲಂಘನೆಯಾಗಿದೆ ಎಂದು ದಿನಾಂಕ: 22/11/2024 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಲಾಗಿದೆ.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ, ಬೋಳಶೆಟ್ಟಿ ಸದಸ್ಯರು, ದೂರುದಾರರ ದಾಖಲೆಗಳನ್ನು ಪರಿಶೀಲಿಸಿದ ಆಯೋಗ ರೂ.24,999 ಪಾವತಿಸಿ ಆನ್‍ಲೈನ್ ಮುಖಾಂತರ ಎದುರುದಾರರ (ಅಮೆಜಾನ್) ಬಳಿ ರೆಡ್ ಮಿ ನೋಟ್ ಮೊಬೈಲ್ ಖರೀದಿಸಿರುವುದು ಆಯೋಗದ ಗಮನಕ್ಕೆ ಕಂಡುಬಂದಿರುತ್ತದೆ. ಎದುರುದಾರರು (ಅಮೆಜಾನ್) ಡೆಲಿವರಿಕೊಟ್ಟಂತಹ ಮೊಬೈಲ್ ಬೇರೆ ಇರುವುದನ್ನು ಗಮನಿಸಿದ ಆಯೋಗ ಎದುರುದಾರರು (ಅಮೆಜಾನ್) ಸೇವಾ ನ್ಯೂನ್ಯತೆ ಎಸಗಿರುವರೆಂದು ಅಭಿಪ್ರಾಯಪಟ್ಟು ಆದೇಶವಾದ 15 ದಿನಗಳ ಒಳಗಾಗಿ ದೂರುದಾರರು ಬುಕ್ ಮಾಡಿದ ಮೊಬೈಲನ್ನು ಕೊಡುವಂತೆ ಹಾಗೂ ತಪ್ಪಿದ್ದಲ್ಲಿ ಅದರ ಹಣ ರೂ.24,999 ಗಳನ್ನು ಶೇ. 10 ರಂತೆ ಬಡ್ಡಿ ಲೆಕ್ಕ ಹಾಕಿ ದೂರುದಾರರಿಗೆ ಕೊಡುವಂತೆ ಎದುರುದಾರರಿಗೆ (ಅಮೆಜಾನ್) ಆದೇಶಿಸಿದೆ.

ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗೆ ರೂ.50,000 ಪರಿಹಾರ ಹಾಗೂ ರೂ.10,000 ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಎದುರುದಾರರಾದ ಅಮೆಜಾನ್ ಪ್ರೈ.ಲಿ. ಗೆ ಆಯೋಗ ಆದೇಶಿಸಿದೆ.