ಮನೆ ಅಪರಾಧ ‘ಮಗನಿಗೆ ಇನ್ನೊಂದು ವಾರದಲ್ಲಿ ನಿಶ್ಚಿತಾರ್ಥ ಇತ್ತು’: ಹತ್ಯೆಯಾದ ಟೆಕ್ಕಿಯ ತಂದೆಯ ಕಣ್ಣೀರ ಕಥೆ

‘ಮಗನಿಗೆ ಇನ್ನೊಂದು ವಾರದಲ್ಲಿ ನಿಶ್ಚಿತಾರ್ಥ ಇತ್ತು’: ಹತ್ಯೆಯಾದ ಟೆಕ್ಕಿಯ ತಂದೆಯ ಕಣ್ಣೀರ ಕಥೆ

0

ಹಾಸನ: ಸ್ನೇಹಿತನ ಜೊತೆ ಕುಳಿತಿದ್ದಾಗ ಸಿಗರೇಟ್ ತಂದು ಕೊಡಲ್ಲ ಎಂದಿದ್ದಕ್ಕೆ ಆಕ್ಸಿಡೆಂಟ್ ಮಾಡಿ ಕೊಲೆ ಮಾಡಿದ್ದಾರೆ. ಬೆಂಗಳೂರಿನಲ್ಲಿ‌ ಬೇರೆ ಜಿಲ್ಲೆಯವರು ಬದುಕುವುದು ಹೇಗೆ ಎಂದು ಕೊಲೆಯಾದ ಟೆಕ್ಕಿ ಸಂಜಯ್ ತಂದೆ ನಾರಾಯಣ್ ಹೇಳಿದ್ದಾರೆ..

ಸಿಗರೇಟ್ ವಿಚಾರಕ್ಕೆ ಕಾರು ಗುದ್ದಿಸಿ ಟೆಕ್ಕಿ ಸಂಜಯ್ ಹತ್ಯೆ ಕುರಿತು ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಷ್ಟಪಟ್ಟು ಮಗನನ್ನು ಎಂಜಿನಿಯರಿಂಗ್ ಓದಿಸಿದ್ದೆವು. ಕ್ಯಾಂಪಸ್ ಸೆಲೆಕ್ಷನ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಕೊಲೆ ಮಾಡಿದವನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ಷೇತ್ರದವನು. ಅವರೇ ನಮಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.

ಮಗನಿಗೆ ಇನ್ನೊಂದು ವಾರದಲ್ಲಿ ಮದುವೆ ನಿಶ್ಚಿತಾರ್ಥ ಇತ್ತು. ಮನೆ ತುಂಬಾ ಸಂತೋಷದ ವಾತಾವರಣವಿತ್ತು. ಆದರೆ ಈಗ ನಾವು ಅವನ ಶವವನ್ನು ಮಾತ್ರ ನೋಡಬೇಕಾಗಿದೆ”, ಎಂದು ನಾರಾಯಣ್ ಕಣ್ಣೀರಿನಿಂದ ಹೇಳಿದರು.

ಸರ್ಕಾರದಲ್ಲಿ ಇಂತಹ ಘಟನೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಕಾನೂನು ಇಲ್ಲವೇ? ಯಾರಿಗೂ ಭಯವೇ ಇಲ್ಲವೇ? ಅಮಾಯಕನನ್ನು ಕೊಂದು ಹಾಕಿದ್ದಾರೆ. ಅಂತಹವರಿಗೆ ಮರಣದಂಡನೆ ವಿಧಿಸಬೇಕು. ಸರ್ಕಾರ ನನ್ನ ಮಗನ ಸಾವಿಗೆ ನ್ಯಾಯ ಒದಗಿಸಬೇಕು ಎಂದು ನೋವಿನಲ್ಲಿ ಕೂಡ ನ್ಯಾಯಕ್ಕಾಗಿ ತಮ್ಮ ಧ್ವನಿ ಎತ್ತಿದ್ದಾರೆ