ಮನೆ ರಾಜ್ಯ ಮೇ 22ರಂದು ಪ್ರಧಾನಿ ಮೋದಿಯಿಂದ ಕರ್ನಾಟಕ ರಾಜ್ಯದ 5 ಸೇರಿ ಒಟ್ಟು 103 ಅಮೃತ ರೈಲ್ವೆ...

ಮೇ 22ರಂದು ಪ್ರಧಾನಿ ಮೋದಿಯಿಂದ ಕರ್ನಾಟಕ ರಾಜ್ಯದ 5 ಸೇರಿ ಒಟ್ಟು 103 ಅಮೃತ ರೈಲ್ವೆ ನಿಲ್ದಾಣಗಳ ಉದ್ಘಾಟನೆ!

0

ಬೆಂಗಳೂರು: ಮೇ 22ರಂದು ರಾಜಸ್ಥಾನದ ಬಿಕನೇರ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಐದು ನಿಲ್ದಾಣಗಳು ಸೇರಿ ದೇಶದ 103 ಅಮೃತ ರೈಲ್ವೆ ನಿಲ್ದಾಣಗಳನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕದ 5 ರೈಲು ನಿಲ್ದಾಣಗಳು ಅಂದರೆ ಮುನಿರಾಬಾದ್, ಬಾಗಲಕೋಟೆ, ಗದಗ, ಗೋಕಾಕ್ ರಸ್ತೆ, ಧಾರವಾಡ ನಿಲ್ದಾಣಗಳು ಉದ್ಘಾಟನೆಯಾಗಲಿರುವ 103 ಅಮೃತ ರೈಲು ನಿಲ್ದಾಣಗಳಲ್ಲಿ ಸೇರಿವೆ.

ಭಾರತದಾದ್ಯಂತ ಪುನರಾಭಿವೃದ್ಧಿ ಮಾಡಲಾದ ಅಮೃತ ನಿಲ್ದಾಣಗಳು ಆಧುನಿಕ ಮೂಲಸೌಕರ್ಯವನ್ನು ಸಾಂಸ್ಕೃತಿಕ ಪರಂಪರೆಯೊಂದಿಗೆ ಸಂಯೋಜಿಸುತ್ತವೆ. ದಿವ್ಯಾಂಗ ಸ್ನೇಹಿ ಸೌಲಭ್ಯಗಳು ಸೇರಿದಂತೆ ಪ್ರಯಾಣಿಕ ಕೇಂದ್ರಿತ ಸೌಲಭ್ಯಗಳು ಮತ್ತು ಪ್ರಯಾಣದ ಅನುಭವವನ್ನು ಹೆಚ್ಚಿಸಲು ಸುಸ್ಥಿರ ಸೌಲಭ್ಯಗಳನ್ನು ಒಳಗೊಂಡಿವೆ.

ದೇಶದ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 86 ಜಿಲ್ಲೆಗಳಲ್ಲಿರುವ 103 ಅಮೃತ ನಿಲ್ದಾಣಗಳನ್ನು ರೂ.1,100 ಕೋಟಿಗಳಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅಮೃತ ಭಾರತ ನಿಲ್ದಾಣ ಯೋಜನೆ ಅಡಿಯಲ್ಲಿ ಪ್ರಾದೇಶಿಕ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸಲು ಮತ್ತು ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು 1,300ಕ್ಕೂ ಹೆಚ್ಚು ನಿಲ್ದಾಣಗಳನ್ನು ಆಧುನಿಕ ಸೌಲಭ್ಯಗಳೊಂದಿಗೆ ಪುನರಾಭಿವೃದ್ಧಿ ಮಾಡಲಾಗುತ್ತಿದೆ.