ಮನೆ ರಾಜ್ಯ ಪರಮೇಶ್ವರ್ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್‌ನವರೇ ಇಡಿಗೆ ಮಾಹಿತಿ ನೀಡಿದ್ದು: ಪ್ರಹ್ಲಾದ್ ಜೋಶಿ

ಪರಮೇಶ್ವರ್ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್‌ನವರೇ ಇಡಿಗೆ ಮಾಹಿತಿ ನೀಡಿದ್ದು: ಪ್ರಹ್ಲಾದ್ ಜೋಶಿ

0

ಗದಗ : “ಪರಮೇಶ್ವರ್ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂಬ ಮಾಹಿತಿ ಇಡಿಗೆ ನೀಡಿದ್ದು ಕಾಂಗ್ರೆಸ್‌ನ ಕೆಲವರು” ಎಂಬ ಸ್ಫೋಟಕ ಆರೋಪವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಡಿದ್ದು, ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಗದಗ ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು, ಇತ್ತೀಚೆಗೆ ಗೃಹ ಸಚಿವ ಜಿ. ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಯ ಮೇಲೆ ಇಡಿ ದಾಳಿ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, “ಇದಕ್ಕೆ ಮಾಹಿತಿ ನೀಡಿರುವವರು ಅವರದೇ ಪಕ್ಷದವರು. ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿದೇ ಇದೆ,” ಎಂದು ಹೇಳಿದ್ದಾರೆ.

2013ರಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿದ್ದು ಯಾರು? ಇದೇ ಸಿದ್ದರಾಮಯ್ಯ ಅವರು ಪರಮೇಶ್ವರ್ ಅವರನ್ನು ಸೋಲಿಸಿದ್ದು, ಇದು ಜಗತ್ ಜಾಹಿರ ವಿಚಾರ. ಸಿದ್ದರಾಮಯ್ಯನವರೇ, ಜನರು ಇತಿಹಾಸವನ್ನು ಅಷ್ಟು ಬೇಗ ಮರೆಯೋದಿಲ್ಲ ಟಾಂಗ್ ಕೊಟ್ಟರು.

ಗೋಲ್ಡ್ ಸ್ಮಗ್ಲಿಂಗ್‌ನಿಂದ ಹಿಡಿದು ಎಲ್ಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ಇಡಿಗೆ ಪತ್ರ ಬರೆಯುತ್ತಿದ್ದವರು ಯಾರು? ಕಾಂಗ್ರೆಸ್‌ನ ಒಂದು ಗುಂಪು ಪರಮೇಶ್ವರ್ ಮೇಲೆ ಕ್ರಮ ಆಗಬೇಕು ಎಂದು ಇಡಿಗೆ ಎಲ್ಲಾ ಮಾಹಿತಿ ಕಳುಹಿಸುತ್ತಾರೆ. ಇಷ್ಟೆಲ್ಲಾ ಮಾಡಿ ಈಗ ಡ್ರಾಮ ಮಾಡ್ತಿದ್ದಾರೆ.

ಪರಮೇಶ್ವರ್ ಬಗ್ಗೆ ನಮಗೆ ಗೌರವ ಇದೆ. ಅವರು ಒಬ್ಬ ಸಭ್ಯ ರಾಜಕಾರಣಿ. ಪರಮೇಶ್ವರ್‌ಗೆ ತೊಂದರೆ ಕೊಡಬೇಕು ಎಂಬ ಯಾವ ಉದ್ದೇಶವೂ ಕೇಂದ್ರ ಸರ್ಕಾರಕ್ಕೆ ಇಲ್ಲ. ಕಾನೂನು ಪ್ರಕಾರ ತಪ್ಪು ಮಾಡಿದ್ರೆ. ನಾನೇ ತಪ್ಪು ಮಾಡಲಿ, ಸಿದ್ದರಾಮಯ್ಯ, ಪರಮೇಶ್ವರ್ ತಪ್ಪು ಮಾಡಲಿ. ನಮ್ಮ ಪಕ್ಷದವರು ಇನ್ಯಾರೇ ತಪ್ಪು ಮಾಡಿದ್ರೂ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಆಗುತ್ತೆ. ಎಲ್ಲದಕ್ಕೂ ರಾಜಕಾರಣ ಬೆರಸಿದ್ರೆ, ನಿಮ್ಮ ಪಕ್ಷದವರು ಏನೇನು ಮಾಡಿದ್ದಾರೆಂಬುದು ಮುಂದೆ ನಿಮಗೇ ಗೊತ್ತಾಗುತ್ತದೆ ಎಂದು ಟಾಂಗ್ ಕೊಟ್ಟರು.

ಪ್ರಧಾನ ಮಂತ್ರಿ ಜನ ಔಷಧೀಯ ಕೇಂದ್ರ ಬಂದ್ ಮಾಡಿದ್ದಾರೆ. ಔಷಧ ಫ್ರೀ ಕೊಡುತ್ತೇವೆ ಅಂತಾರೆ. ಎಲ್ಲಾ ಆಸ್ಪತ್ರೆಯಲ್ಲಿ ಎಲ್ಲಾ ಔಷಧ ಉಚಿತ ಸಿಗುತ್ತಾ? ಉತ್ತರ ಕರ್ನಾಟಕ ಪ್ರತಿಷ್ಠಿತ ಕಿಮ್ಸ್‌ನಲ್ಲಿ ಔಷಧ ಹೊರಗಡೆ ಬರೆದುಕೊಡ್ತಾರೆ. ನೀವು ಉಚಿತ ಕೊಟ್ರೆ ಜನ ಯಾಕೆ ಪ್ರಧಾನಮಂತ್ರಿ ಔಷಧ ಕೇಂದ್ರಕ್ಕೆ ಹೋಗ್ತಾರೆ. ಉಚಿತ ಔಷಧ ಕೊಟ್ರೆ ಜನೌಷಧೀಯ ಕೇಂದ್ರಕ್ಕೆ ಹೋಗಿ ತೆಗದುಕೊಳ್ಳಲು ಜನರಿಗೆ ಹುಚ್ಚು ಹಿಡಿದಿದ್ಯಾ ಎಂದು ಪ್ರಶ್ನಿಸಿದರು.

ಕಡಿಮೆ ಬೆಲೆಗೆ ಸಿಗುವ ಔಷಧಕ್ಕೂ ಕಲ್ಲು ಹಾಕ್ತಿರಿ. ಯಾಕೆಂದರೆ ಅದರಲ್ಲಿ ಪ್ರಧಾನಮಂತ್ರಿ ಹೆಸರಿದೆ. ಪ್ರಧಾನ ಮಂತ್ರಿ ಪದವನ್ನು ದ್ವೇಷ ಮಾಡ್ತಿದ್ದಾರೆ. ನೆಹರು, ಗಾಂಧಿ ಕುಟುಂಬದವರು ಪ್ರಧಾನಮಂತ್ರಿ ಆಗುವುದಿಲ್ಲ ಅಂತ ಅವರಿಗೂ ಗೊತ್ತಾಗಿದೆ. ದೇಶದ ಅಭ್ಯುದಯವನ್ನು ವಿರೋಧ ಮಾಡ್ತಿದ್ದಾರೆ. ದೇಶವನ್ನೇ ದ್ವೇಷ ಮಾಡ್ತಾ ಹಿಂದೂಸ್ತಾನ ವಿರುದ್ಧ ಹೋರಾಟ ಮಾಡ್ತೇವೆ ಅಂತ ರಾಹುಲ್ ಗಾಂಧಿ ಹೇಳಿದ್ದಾರೆ.