ದಾವಣಗೆರೆ: ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಮರುಕುಂಟೆ ಗ್ರಾಮದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆರೆ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕನೊಬ್ಬ, ಕೆಲಸ ಮಾಡುವ ಸಂದರ್ಭದಲ್ಲಿ ಅಚಾನಕ್ ರಕ್ತ ವಾಂತಿ ಮಾಡಿಕೊಂಡು ಸಾವನ್ನಪ್ಪಿದ್ದಾನೆ.
ಮೃತನನ್ನು ಜಗಳೂರು ತಾಲ್ಲೂಕಿನ ಘಲ್ಲಾಘಟ್ಟೆ ಗ್ರಾಮದ ನಿವಾಸಿ 52 ವರ್ಷದ ಕೆಂಚಪ್ಪ ಎಂಬವರಾಗಿ ಗುರುತಿಸಲಾಗಿದೆ. ಅವರು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಮರುಕುಂಟೆ ಗ್ರಾಮದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ನಿಯೋಜಿತರಾಗಿದ್ದರು. ಕೆಲಸ ಮಾಡುವ ಮಧ್ಯೆ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿ ಅವರು ರಕ್ತ ವಾಂತಿ ಮಾಡತೊಡಗಿ, ಅಲ್ಪ ಸಮಯದಲ್ಲಿ ಅಸ್ವಸ್ಥರಾದರು. ಸಹೋದ್ಯೋಗಿಗಳು ಸಹಾಯ ಮಾಡಲು ಯತ್ನಿಸಿದರೂ, ಅವರಿಗೆ ಸಾವು ತಪ್ಪಲಿಲ್ಲ.














