ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್ಗಳಿಗೆ ಪ್ರವೇಶ ನೀಡುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶವನ್ನು ಇಂದು ಅಧಿಕೃತವಾಗಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಸುಧಾಕರ್ ಅವರು ಪ್ರಕಟಿಸಿದ್ದಾರೆ.
- ಒಟ್ಟು ಅರ್ಜಿ ಸಲ್ಲಿಸಿದವರು: 3,30,787
- ಪರೀಕ್ಷೆ ಹಾಜರಾದವರು: 3,11,991
- ಸಿಇಟಿ ರ್ಯಾಂಕ್ ಪಡೆದವರು: 2,75,677
ಈ ಬಾರಿ ಪರೀಕ್ಷೆಯಲ್ಲಿ ತಾಂತ್ರಿಕ ಸುಧಾರಣೆಗಳ ಮೂಲಕ ನಿಖರತೆಯತ್ತ ಒತ್ತುಗೊಡಲಾಗಿದೆ. ಫೇಸ್ ರೀಡಿಂಗ್ ತಂತ್ರಜ್ಞಾನ ಮತ್ತು ವೆಬ್ ಕ್ಯಾಸ್ಟಿಂಗ್ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಜಾರಿಗೊಳಿಸಲಾಗಿತ್ತು. ಜೊತೆಗೆ, ಮೊದಲ ಬಾರಿಗೆ ಎಲ್ಲಾ ಓಎಂಆರ್ ಶೀಟ್ಗಳನ್ನು ಪಬ್ಲಿಕ್ ಡೊಮೇನ್ಗೆ ಹಾಕಲಾಗಿದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳನ್ನು ಪರಿಶೀಲಿಸಬಹುದಾಗಿದೆ.
- ಭೌತಶಾಸ್ತ್ರದಲ್ಲಿ: 1 ಗ್ರೇಸ್ ಅಂಕ ನೀಡಲಾಗಿದೆ
- ರಸಾಯನಶಾಸ್ತ್ರದಲ್ಲಿ: 2 ಪ್ರಶ್ನೆಗೆ ಎರಡು ಸರಿ ಉತ್ತರ ಪರಿಗಣನೆ
- ಜೀವಶಾಸ್ತ್ರದಲ್ಲಿ: 1 ಪ್ರಶ್ನೆಗೆ ಎರಡು ಸರಿ ಉತ್ತರ ಪರಿಗಣನೆ
ಆನ್ ಲೈನ್ ಮೂಲಕ ದಾಖಲಾತಿ ಪರಿಶೀಲನೆ ವ್ಯವಸ್ಥೆ ಆಗಿದ್ದು ಆಪ್ಶನ್ ಎಂಟ್ರಿಗೆ ಸಿದ್ದತೆ ಮಾಡಿದ್ದೇವೆ. ನೀಟ್ ಫಲಿತಾಂಶ ಬಂದ ಕೂಡಲೇ ಪ್ರಕ್ರಿಯೆ ಶುರುವಾಗಲಿದೆ. ವಾರದ 7 ದಿನವೂ ಸಹಾಯವಾಣಿ ಬೆಳಗ್ಗೆ 8 ರಿಂದ 8 ರಾತ್ರಿ ಗಂಟೆವರೆಗೂ ಇರಲಿದೆ.
ಫಲಿತಾಂಶ ವೀಕ್ಷಿಸಲು ವಿದ್ಯಾರ್ಥಿಗಳು cetonline.karnataka.gov.in ಅಥವಾ kea.kar.nic.in ಜಾಲತಾಣಕ್ಕೆ ಭೇಟಿ ನೀಡುವಂತೆ ಸೂಚಿಸಿದೆ.















