ಮನೆ ರಾಜ್ಯ ಅಡ್ರೆಸ್ ತಪ್ಪಾಗಿದ್ದಕ್ಕೆ ಗಲಾಟೆ: ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್

ಅಡ್ರೆಸ್ ತಪ್ಪಾಗಿದ್ದಕ್ಕೆ ಗಲಾಟೆ: ಗ್ರಾಹಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಲಿವರಿ ಬಾಯ್

0

ಬೆಂಗಳೂರು: ಕೇವಲ ಸಿಂಗಲ್ ಡಿಜಿಟ್ ಅಡ್ರೆಸ್ ತಪ್ಪಾಗಿದ್ದಕ್ಕೆ ಗ್ರಾಹಕನ ಮೇಲೆ ಡೆಲಿವರಿ ಬಾಯ್ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನ ಶಶಾಂಕ್ ಎಂದು ಗುರುತಿಸಲಾಗಿದ್ದು, ಡೆಲಿವರಿ ಬಾಯ್‌ನನ್ನು ವಿಷ್ಣುವರ್ಧನ್ ಎಂದು ತಿಳಿದುಬಂದಿದೆ. ಮೇ 21 ರಂದು ಶಶಾಂಕ್ ಅವರ ಪತ್ನಿ ಆ್ಯಪ್‌ವೊಂದರಲ್ಲಿ ದಿನಬಳಕೆಯ ಸಾಮಗ್ರಿಗಳನ್ನು ಆರ್ಡರ್ ಮಾಡಿದ್ದರು. ಆ ಆರ್ಡರ್ ಡೆಲಿವರಿ ಮಾಡಲು ಬಂದಾಗ, ವಿಳಾಸದಲ್ಲಿ ಸಣ್ಣ ತಪ್ಪು ಕಂಡುಬಂದಿತ್ತು. ಈ ವಿಚಾರವಾಗಿ ಡೆಲಿವರಿ ಬಾಯ್ ಮತ್ತು ಶಶಾಂಕ್ ನಡುವಿನ ಮಾತುಕತೆ ಜೋರಾಗಿ ಜರುಗಿದ್ದು, ವಾದವು ಗಲಾಟೆಗೆ ತಿರುಗಿದೆ.

ಘಟನೆಗೆ ತೀವ್ರತೆಗೆ ತಿರುಗಿದ್ದು, ವಿಷ್ಣುವರ್ಧನ್ ಎಂಬ ಡೆಲಿವರಿ ಬಾಯ್ ಶಶಾಂಕ್ ಮೇಲೆ ಹಲ್ಲೆ ನಡೆಸಿದ್ದು, ಅವರ ಕಣ್ಣಿಗೆ ಗಂಭೀರ ಗಾಯವಾಗಿದೆ. ಈ ಹಲ್ಲೆಯಿಂದಾಗಿ ಶಶಾಂಕ್ ನ ಕಣ್ಣಿನ ಕೆಳಗಿನ ಮೂಳೆ ಕಟ್ ಆಗಿದೆ. ಹೀಗಾಗಿ ಡಾಕ್ಟರ್ ಇನ್ನೊಮ್ಮೆ ಚೆಕ್ ಮಾಡುತ್ತೇನೆ ಎಂದಿದ್ದು, ಒಂದು ವೇಳೆ ಸರಿಹೋಗದಿದ್ದರೆ ಆಪರೇಷನ್ ಮಾಡಬೇಕು ಎಂದು ಹೇಳಿದ್ದಾರೆ. ಸಂಬಂಧಪಟ್ಟ ಕಂಪನಿಯವರು, ಪೊಲೀಸರು ನನಗೆ ನ್ಯಾಯಕೊಡಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಈ ಬಗ್ಗೆ ಶಶಾಂಕ್ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರ ತನಿಖೆ ಆರಂಭವಾಗಿದೆ. ಸದ್ಯ, ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಹಲ್ಲೆ ದೃಶ್ಯಗಳು ಶಶಾಂಕ್ ಅವರ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು ತನಿಖೆಗೆ ಪ್ರಮುಖ ದಾಖಲೆಗಳಾಗಿ ಕಾರ್ಯನಿರ್ವಹಿಸುತ್ತಿದೆ.