ಮನೆ ಸ್ಥಳೀಯ ಪ್ರಸ್ತುತ ಕೊವೀಡ್-19 ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ನೇರ ಫೋನ್-ಇನ್ ಕಾರ್ಯಕ್ರಮ

ಪ್ರಸ್ತುತ ಕೊವೀಡ್-19 ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ನೇರ ಫೋನ್-ಇನ್ ಕಾರ್ಯಕ್ರಮ

0

ಮೈಸೂರು: ಪ್ರಸ್ತುತ ಕೊವೀಡ್-19 ಕುರಿತು ದಿನಾಂಕ 30.05.2025ರ ಶುಕ್ರವಾರ ಬೆಳಗ್ಗೆ 11:30 ರಿಂದ 12:30ರವರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ. ಪಿ. ಸಿ. ಕುಮಾರಸ್ವಾಮಿ ರವರ ಜೊತೆ ನೇರ ಫೋನ್-ಇನ್ ಕಾರ್ಯಕ್ರಮವನ್ನು ಮೈಸೂರಿನ ಜೆಎಸ್‍ಎಸ್ ರೇಡಿಯೋ 91.2 ಎಫ್‍ಎಂ ಸಮುದಾಯ ಬಾನುಲಿ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಸಾರ್ವಜನಿಕರು ಹಾಗೂ ಆರೋಗ್ಯ ಕಾರ್ಯಕರ್ತರು ಈ ಪ್ರಸ್ತುತ ಹರಡುತ್ತಿರುವ ಕೊವೀಡ್-19 ಕುರಿತು ಯಾವುದೇ ಪ್ರಶ್ನೆಗಳು, ಆತಂಕ, ಅನುಮಾನಗಳು ಇದ್ದಲ್ಲಿ ಅಥವಾ ಸಲಹೆ ಬೇಕಿದ್ದಲ್ಲಿ ಕರೆಮಾಡಿ ನೇರವಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ಮಾತನಾಡಬಹುದು.

ಅದಕ್ಕಾಗಿ ನೀವು ಕರೆ ಮಾಡಬಹುದಾದ ದೂರವಾಣಿ ಸಂಖ್ಯೆ: 8296725912, 0821-2546563

ಜೆಎಸ್‍ಎಸ್ ರೇಡಿಯೋವನ್ನು ಪ್ಲೇಸ್ಟೋರ್‍ನಲ್ಲಿ ಲಭ್ಯವಿರುವ ಆ್ಯಪ್ ಮೂಲಕವೂ ವಿಶ್ವದ ಯಾವುದೇ ಮೂಲೆಯಲ್ಲಾದರು ಆಲಿಸಬಹುದು.