ಇಂಫಾಲ್: ಮಣಿಪುರದ ಹಲವು ಭಾಗಗಳಲ್ಲಿ ಬುಧವಾರ (ಮೇ 28) ಬೆಳಗಿನಿಂದಲೇ ಸರಣಿ ಭೂಕಂಪಗಳು ಸಂಭವಿಸಿದ್ದು, ಮೊದಲ ಭೂಕಂಪವು 5.2 ತೀವ್ರತೆಯಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಇಂದು ಬೆಳಗಿನ ಜಾವ 1:54 ರ ವೇಳೆ ಸರಣಿ ಭೂಕಂಪ ಸಂಭವಿಸಿದೆ. ಚುರಾಚಂದ್ಪುರ ಜಿಲ್ಲೆಯಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಎರಡನೇ ಭೂಕಂಪ ಬೆಳಗಿನ ಜಾವ 2:26 ಕ್ಕೆ ನೊನಿ ಜಿಲ್ಲೆಯಲ್ಲಿ 2.5 ತೀವ್ರತೆಯ ಭೂಕಂಪ ಸಂಭವಿಸಿದೆ.
ಬೆಳಿಗ್ಗೆ 10:23 ಕ್ಕೆ ಚುರಾಚಂದ್ಪುರದಲ್ಲಿ 3.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ
ಇಲ್ಲಿಯವರೆಗೆ ಯಾವುದೇ ಸಾವುನೋವು ಅಥವಾ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಆದರೂ, ಪುನಃ ಭೂಕಂಪ ಸಂಭವಿಸುವ ಆತಂಕದಿಂದ ಜನರಲ್ಲಿ ಭೀತಿ ಮನೆ ಮಾಡಿದೆ.














